ಬೆಂಗಳೂರು ಇಂಡಿಗೋ ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವಕ: ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ

Published : Mar 18, 2023, 07:11 PM ISTUpdated : Mar 18, 2023, 07:24 PM IST
ಬೆಂಗಳೂರು ಇಂಡಿಗೋ ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವಕ: ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ

ಸಾರಾಂಶ

ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದುವ ಮೂಲಕ ಎಲ್ಲ ಪ್ರಯಾಣಿಕರ ಜೀವದೊಂದಿಗೆ ಆಟವಾಡಿದ್ದಾನೆ.

ಬೆಂಗಳೂರು (ಮಾ.18): ವಿಮಾನದಲ್ಲಿ ಗಗನ ಸಖಿಯರೊಂದಿಗೆ ಹಾಗೂ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ನಡೆದುಕೊಂಡ ಬಗ್ಗೆ ವರದಿಯಾಗಿದ್ದು, ಇದಕ್ಕೆ ತಕ್ಕಂತೆ ಶಿಕ್ಷೆಯೂ ಆಗಿದೆ. ಆದರೆ, ಇಲ್ಲೊಬ್ಬ ಪುಂಡ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದುವ ಮೂಲಕ ಎಲ್ಲ ಪ್ರಯಾಣಿಕರ ಜೀವದೊಂದಿಗೆ ಆಟವಾಡಿದ್ದಾನೆ.

ಹವಾನಿಯಂತ್ರಿತ (ಎಸಿ) ಆನ್‌ ಇರುವ ಅಥವಾ ಕೃತಕ ಗಾಳಿಯನ್ನು ಹೊಂದಿದ ಕಾರು, ಬಸ್‌ ಅಥವಾ ಕಚೇರಿಗಳಲ್ಲಿ ಸಿಗರೇಟ್‌ ಸೇದುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಕಾರಣ ಇಂತಹ ವಾತಾವರಣದಲ್ಲಿ ಬಹುಬೇಗನೇ ಬೆಂಕಿ ಪಸರಿಸಿ ಎಲ್ಲರ ಪ್ರಾಣಕ್ಕೆ ಕುತ್ತು ತರುತ್ತದೆ. ಇನ್ನು ಇದೇ ರೀತಿಯಾಗಿ ಅನೇಕ ಬಾರಿ ಕಾರಿನಲ್ಲಿ ಎಸಿ ಹಾಕಿಕೊಂಡು ಸಿಗರೇಟ್‌ ಸೇದಿದ ಎಷ್ಟೋ ಪ್ರಕರಣಗಳಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟುಕೊಂಡು ಸಾವನ್ನಪ್ಪಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಪುಂಡ ಹವಾನಿಯಂತ್ರಿತ ವಿಮಾನದಲ್ಲಿಯೇ ಸಿಗರೇಟ್‌ ಸೇದಿ ಎಲ್ಲರ ಪ್ರಾಣಕ್ಕೆ ಕುತ್ತು ತಂದಿದ್ದಾನೆ.

ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!

ಶೌಚಾಲಯದಲ್ಲಿ ಸಿಗರೇಟ್ ಸೇದಿ ಬಂದ: ಇನ್ನು ಈ ಘಟನೆ ನಡೆದಿರುವುದು ನಿನ್ನೆ ರಾತ್ರಿ ವೇಳೆ 1.30ಕ್ಕೆ ಅಸ್ಸಾಂನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ 6E 716 ಇಂಡಿಗೂ ವಿಮಾನದಲ್ಲಿ ನಡೆದಿದೆ. ಅಸ್ಸಾಂ ಮೂಲದ ಶೇಹರಿ ಚೌಧರಿ ಎಂಬ ಪ್ರಯಾಣಿಕ ಧೂಮಪಾನ ಮಾಡುವ ಮೂಲಕ ಎಲ್ಲರ ಪ್ರಾಣಕ್ಕೆ ಕುತ್ತು ತಂದವನಾಗಿದ್ದಾನೆ. ಈತ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಶೌಚಾಲಯಕ್ಕೆ ತೆರಳಿದ್ದಾನೆ. ಅಲ್ಲಿ ಬಾಗಿಲು ಮುಚ್ಚಿಕೊಂಡು ಸಿಗರೇಟ್ ಸೇದಲು ಆರಂಭಿಸಿದ್ದಾರೆ. ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೂಡಲೇ ಎಲ್ಲ ಪ್ರಯಾಣಿಕರನ್ನು ಪರಿಶೀಲನೆ ಮಾಡಿದ್ದಾರೆ. ಈ‌ ವೇಳೆ ಪ್ರಯಾಣಿಕ ಶೇಹರಿ ಚೌಧರಿ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.

ಭದ್ರತಾ ಪಡೆ ವಶಕ್ಕೆ ಒಪ್ಪಿಸಿದ ವಿಮಾನ ಸಿಬ್ಬಂದಿ: ಇನ್ನು ಹವಾನಿಯಂತ್ರಿತ ವಿಮಾನದಲ್ಲಿ ಸ್ವಲ್ಪ ಬೆಂಕಿಯ ಜ್ವಾಲೆ ಕಂಡುಬಂದರೂ ಇಡೀ ವಿಮಾನವೇ ಕ್ಷಣಾರ್ಧದಲ್ಲಿ ಧಗಧಗಿಸಿ ಉರಿದು ಹೋಗುತ್ತದೆ. ಇಂತಹ ಆತಂಕದ ನಡುವೆಯೂ ಈ ವ್ಯಕ್ತಿ ಎಲ್ಲರ ಪ್ರಾಣದೊಂದಿಗೆ ಆಟವಾಡಿದ್ದಾನೆ. ಏರ್‌ಲೈನ್ಸ್‌ ಸಿಬ್ಬಂದಿ ಈತನನ್ನು ಪರಿಶೀಲನೆ ಮಾಡಿ ಪತ್ತೆಹಚ್ಚಿದ್ದು, ಆತನನ್ನು ಭದ್ರತಾಪಡೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಏರ್‌ಪೋರ್ಟ್‌ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಕ್‌ಪಿಟ್‌ನಲ್ಲಿ ಸಮೋಸ, ಪಾನೀಯ ಸೇವನೆ: ಇಬ್ಬರು ಪೈಲಟ್‌ಗಳ ಮನೆಗೆ ಕಳುಹಿಸಿದ ಸ್ಪೈಸ್ ಜೆಟ್

ವಿಮಾನದಲ್ಲಿ ಸಿಗರೇಟ್‌ ಸೇವನೆ ಅಪರಾಧ: ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 336 (ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದವರು) ಮತ್ತು ಏರ್‌ಕ್ರಾಫ್ಟ್ ಕಾಯ್ದೆ 1937, 22 (ಪೈಲಟ್-ಇನ್-ಕಮಾಂಡ್ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಿ), 23 (ಆಕ್ರಮಣ ಮತ್ತು ಇತರ ಕ್ರಿಯೆಗಳು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಅಥವಾ ಉತ್ತಮ ಕ್ರಮ ಮತ್ತು ಶಿಸ್ತಿಗೆ ಅಪಾಯವನ್ನುಂಟುಮಾಡುತ್ತದೆ) ಮತ್ತು 25 (ಧೂಮಪಾನಕ್ಕಾಗಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!