ಬೆಳಗಾವಿ: ಮಾನಸಿಕ ಖಿನ್ನತೆಯಿಂದ ಯುವಕ ಆತ್ಮಹತ್ಯೆ

Published : Aug 12, 2021, 12:34 PM IST
ಬೆಳಗಾವಿ: ಮಾನಸಿಕ ಖಿನ್ನತೆಯಿಂದ ಯುವಕ ಆತ್ಮಹತ್ಯೆ

ಸಾರಾಂಶ

* ಬೆಳಗಾವಿ ತಾಲೂಕಿನ ಕೆದನೂರ ಗ್ರಾಮದಲ್ಲಿ ನಡೆದ ಘಟನೆ * ಸೆಂಟ್ರಿಂಗ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಯುವಕ  * ಈ ಸಂಬಂಧ ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು   

ಬೆಳಗಾವಿ(ಆ.12): ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ಬೆಳಗಾವಿ ತಾಲೂಕಿನ ಕೆದನೂರ ಗ್ರಾಮದಲ್ಲಿ ನಡೆದಿದೆ.

ಕೆದನೂರು ಗ್ರಾಮದ ವಿಶಾಲ ಮುರಾರಿ ರಾಜಾಯಿ (19) ಆತ್ಮಹತ್ಯೆಗೆ ಶರಣಾದ ಯುವಕ. ಪಿಯುಸಿ ಮುಗಿಸಿದ್ದ ಈತ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ರೂಮ್‌ನ ಸ್ಲಾಪ್‌ ಹುಕ್ಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಬ್ಬರು ಸೇರಿ ಮೂವರು ಆತ್ಮಹತ್ಯೆ

ಈತನ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂದು ಯುವಕನ ತಂದೆ ಮುರಾರಿ ರಾಜಾಯಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!