ಬಾಗಲಕೋಟೆ: ಒಂಟಿತನಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

By Kannadaprabha News  |  First Published Oct 28, 2020, 1:46 PM IST

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ| ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗೋರಬಾಳ ಗ್ರಾಮದಲ್ಲಿ ನಡೆದ ಘಟನೆ| ತೀವ್ರ ಮನನೊಂದು ಆತ ತಮ್ಮ ದಾಬಾದಲ್ಲೇ ನೇಣು ಬಿಗಿದು ಆತ್ಮಹತ್ಯೆ| 
 


ಬಾಗಲಕೋಟೆ(ಅ.28): ತಂದೆ-ತಾಯಿ ಇಬ್ಬರೂ ತೀರಿ ಹೋಗಿದ್ದರಿಂದ, ಒಂಟಿತನಕ್ಕೆ ಬೇಸತ್ತು, ಜೀವನದಲ್ಲಿ ಜಿಗುಪ್ಸೆಯಾಗಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗೋರಬಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಗೋರಬಾಳ ಗ್ರಾಮದ ಭೀಮಸಿ ಲಕ್ಷ್ಮಣ ಚಿತ್ತರಗಿ (22) ಮೃತ ಯುವಕ. ಈತ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ನೂತನವಾಗಿ ಗಡಗಿ ಚಿಕ್ಕನ್‌ ದಾಬಾ ಪ್ರಾರಂಭಿಸಿದ್ದ. ಈಚೆಗೆ ಆತನ ತಂದೆ-ತಾಯಿ ಮೃತಪಟ್ಟಿದ್ದರು. ಹೀಗಾಗಿ ಆತನಿಗೆ ಒಂಟಿತನ ಕಾಡುತಿತ್ತು. ಇದರಿಂದ ತೀವ್ರ ಮನನೊಂದು ಆತ ತಮ್ಮ ದಾಬಾದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

Tap to resize

Latest Videos

undefined

ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪತ್ನಿ ಆತ್ಮಹತ್ಯೆ

ಈ ಕುರಿತು ಇಳಕಲ್ಲ ಶಹರ ಪಿಎಸೈ ರಮೇಶ ಜಲಗೇರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
 

click me!