ಮದುವೆಯಾಗುವುದು ನಂಬಿಸಿ ಮೋಸ: ಯುವತಿ ದೂರು| ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದ ಘಟನೆ| ಪೊಲೀಸ್ ಠಾಣೆಗೆ ದೂರು ಕೊಟ್ಟ ನೊಂದ ಯುವತಿ|
ಕೂಡ್ಲಿಗಿ(ಮೇ.27): ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ ಯುವಕನ ವಿರುದ್ಧ ನೊಂದ ಯುವತಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಗುಡೇಕೋಟೆಯ 26 ವರ್ಷದ ಯುವತಿಯೊಂದಿಗೆ ಅದೇ ಗ್ರಾಮದ ಕಾರು ಚಾಲಕ ಅಮಾನ್ (32) 2 ವರ್ಷದಿಂದ ಪ್ರೀತಿಸಿ ನಿನ್ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾನೆ.
ಸಿರಗುಪ್ಪದಲ್ಲಿ ತಂದೆ ಸಾವು; ಬಸ್‌ಗಾಗಿ ಮೆಜೆಸ್ಟಿಕ್‌ನಲ್ಲಿ ಮಗಳ ಕಣ್ಣೀರು..!
ಮೇ 14ರಿಂದ 16ರ ವರೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಬಳಿ ಲಾಡ್ಜ್‌ವೊಂದರಲ್ಲಿ ದೈಹಿಕವಾಗಿ ಬಳಿಸಿಕೊಂಡು ಬಿಟ್ಟುಹೋಗಿದ್ದಾನೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.