ಸ್ನೇಹಿತನ ಮದುವೆಗೆ ರಾಮಮಂದಿರ ಹಾಡು ಹಾಕಿದ್ದಕ್ಕೆ ಅನ್ಯಕೋಮಿನ ಗುಂಪಿನಿಂದ ಯುವಕನ ಮೇಲೆ ಹಲ್ಲೆ?

By Ravi JanekalFirst Published Jul 2, 2024, 6:52 PM IST
Highlights

ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ ರಾಮಮಮದಿರ ಹಾಡು ಹಾಕಿದ್ದಕ್ಕೆ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಕಲಬುರಗಿ (ಜು.2): ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ ರಾಮಮಮದಿರ ಹಾಡು ಹಾಕಿದ್ದಕ್ಕೆ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಕಲಬುರಗಿ(Kalaburagi)ಯ ಇಟಗಾ ಗ್ರಾಮ(Itga village)ದ ಯುವಕ ಭೀಮಾಶಂಕರ್(Bhimashankar), ಹಲ್ಲೆಗೊಳಗಾದ ಯುವಕ. ನಿನ್ನೆ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ ರಾಮಮಂದಿರ ಹಾಡು(Ram mandir song) ಹಾಕಿಸಿದ್ದ ಯುವಕ. 'ಅಗರ್ ಛುವಾ ತೋ ಮಂದಿರಕೋ ತೇರಿ ಔಖಾತ್ ದಿಖಾ ದೇಂಗೆ' ಹಾಡು ಹಾಕಿಸಿ ಡ್ಯಾನ್ಸ್ ಮಾಡಿದ್ದ ಯುವಕ. ಹಾಡು ಹಾಕಿಸಿದ್ದಕ್ಕೇ ಮರುದಿನ ಬೆಳಗ್ಗೆ ಐದಾರು ಜನರ ಅನ್ಯಕೋಮಿನ ಯುವಕರು ಮನೆಗೆ ನುಗ್ಗಿ ಗಲಾಟೆ ನಡೆಸಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

'ನೀವು ಯಾರನ್ನಾದ್ರೂ ಸಿಎಂ, ಡಿಸಿಎಂ ಮಾಡಿಕೊಳ್ಳಿ; ನಮಗೆ ಮೀಸಲಾತಿ ಕೊಡಿ': ಜಯಮೃತ್ಯುಂಜಯಶ್ರೀ

ಏಕಾಏಕಿ ದಾಳಿ ನಡೆಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದರಿಂದ ಭೀಮಾಶಂಕರ್ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆ ಮುಂದೆಯೇ ಮಗನ ಮೇಲೆ ಹಲ್ಲೆ ಮಾಡಿರುವ ಅನ್ಯಕೋಮಿನ ಯುವಕರು ಪೈಶಾಚಿಕ ಕೃತ್ಯ ಕಂಡು ಭಯದಲ್ಲಿರುವ ಕುಟುಂಬ. ಆದರೆ ಇನ್ನೊಂದೆಡೆ ಅನ್ಯಕೋಮಿನ ಮೂವರು ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭೀಮಾಶಂಕರ್ ಹಾಗೂ ಅವರ ಕಡೆಯವರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಆರೋಪ, ಪ್ರತ್ಯಾರೋಪ, ಹಲ್ಲೆ ಪ್ರತಿಯಾಗಿ ಹಲ್ಲೆಯಿಂದಾಗಿ ಪ್ರಕ್ಷುಬ್ದ ಸ್ಥಿತಿಯಲ್ಲಿರುವ ಇಟಗಾ ಗ್ರಾಮ. ಸದ್ಯ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!