
ಬೆಂಗಳೂರು(ಮಾ.19): ಪ್ರಯಾಣದ ವೇಳೆ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ತಪ್ಪಿಗೆ ಯುವಕನೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.
ಅಸ್ಸಾಂ ಮೂಲದ ಶೇಹರಿ ಚೌಧರಿ ಬಂಧಿತನಾಗಿದ್ದು, ತನ್ನೂರಿನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಶುಕ್ರವಾರ ರಾತ್ರಿ ಆಗಮಿಸುವಾಗ ಈ ಅವಘಡ ನಡೆದಿದೆ. ಈ ಘಟನೆ ಸಂಬಂಧ ಇಂಡಿಗೋ ವಿಮಾನದ ಕ್ಯಾಪ್ಟನ್ ನೀಡಿದ ದೂರಿನ ಮೇರೆಗೆ ಚೌಧರಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್ ಚೋರರು..!
ಅಸ್ಸಾಂ ಮೂಲದ ಚೌಧರಿ, ಗೋವಿಂದಪುರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಅದೇ ಪ್ರದೇಶದಲ್ಲಿ ಆತ ನೆಲೆಸಿದ್ದ. ರಜೆ ಪಡೆದು ಊರಿಗೆ ಹೋಗಿದ್ದ ಚೌಧರಿ, ಅಸ್ಸಾಂ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ರಾತ್ರಿ 1.30 ಗಂಟೆಗೆ ಬಂದಿಳಿದ ಇಂಡಿಗೋ ವಿಮಾನ ನಂ.6ಇ-716ರಲ್ಲಿ ಆರೋಪಿ ಸಹ ಪ್ರಯಾಣಿಕನಾಗಿದ್ದ. ಪ್ರಯಾಣದ ವೇಳೆ ಶೌಚಾಲಯಕ್ಕೆ ಹೋಗಿ ಚೌಧರಿ ಹೊರ ಬಂದಿ ದ್ದಾನೆ. ಇದಾದ ಬಳಿಕ ಶೌಚಾಲಯದಿಂದ ಹೊಗೆ ಬಂದಿದ್ದನ್ನು ಗಮನಿಸಿದ ವಿಮಾನದ ಕ್ಯಾಪ್ಟನ್ ಅವರು, ವಿಮಾನ ಲ್ಯಾಂಡಿಂಗ್ ಆದ ನಂತರ ಪೊಲೀಸ್ ಠಾಣೆಗೆ ತೆರಳಿ ಚೌಧರಿ ವಿರುದ್ಧ ದೂರು ದಾಖಲಿಸಿದರು. ಅಂತೆಯೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ