ಪೊಲೀಸ್‌ ಆಗಲು ಭೂಮಿ ಅಡವಿಟ್ಟು 5 ಲಕ್ಷ ಲಂಚ ಕೊಟ್ಟ..!

By Kannadaprabha NewsFirst Published Oct 29, 2021, 7:31 AM IST
Highlights

*   ಪೇದೆ ಆಗಲು 5 ಲಕ್ಷ ಲಂಚ; ವಶ
*   ಪರೀಕ್ಷೆ ಬರೆಯುವ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಅಭ್ಯರ್ಥಿ
*   ಕೊನೆಗೆ ಸತ್ಯಾಂಶ ಹೊರಗೆ
 

ಬೆಂಗಳೂರು(ಅ.29): ಕಾನ್‌ಸ್ಟೇಬಲ್‌(Constable) ಹುದ್ದೆ ಪಡೆಯಲು ತನ್ನ ಜಮೀನು ಅಡಮಾನವಿಟ್ಟು 5 ಲಕ್ಷ ಲಂಚ(Bribe) ನೀಡಿದ್ದ ಆರೋಪ ಮೇಲೆ ಖಾಕಿ ಧಿರಿಸು ತೊಡುವ ಕನಸು ಕಂಡಿದ್ದ ಯುವಕನೊಬ್ಬ ಕಂಬಿ(Jail) ಎಣಿಸುವಂತಾಗಿದೆ.

ವಿಜಯಪುರ(Vijayapura) ಜಿಲ್ಲೆ ಇಂಡಿ(Indi) ತಾಲೂಕಿನ ಬಸವಾಳ ಗ್ರಾಮದ ರಾಮಗೊಂಡ ಸೋಮನಿಂಗ ಪಾಟೀಲ್‌ ಸಂಕಷ್ಟಕ್ಕೆ ಸಿಲುಕಿದ್ದು, ಇತ್ತೀಚಿಗೆ ನಡೆದ ಕಾನ್‌ಸ್ಟೇಬಲ್‌ ಪ್ರವೇಶ ಪರೀಕ್ಷೆ(Exam) ಬರೆಯುವ ವೇಳೆ ಆತನನ್ನು ಬನಶಂಕರಿ ಠಾಣೆ ಪೊಲೀಸರು(Police) ವಶಕ್ಕೆ(Arrest) ಪಡೆದಿದ್ದಾರೆ. ಈತನಿಂದ ಹಣ ಪಡೆದಿರುವ ಬಸವಾಳ ಗ್ರಾಮದ ಮಾರುತಿ ಕಂಬಾರ ಪತ್ತೆಗೆ ತನಿಖೆ(Investigation) ನಡೆದಿದೆ.

ಬೆಳಗಾವಿ: ಬ್ಲೂಟೂತ್‌ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!

ಐದು ಪ್ರಶ್ನೆಗಳಿಗೆ ಮಾತ್ರ ಉತ್ತರ ಬರೆದ

ಪೊಲೀಸ್‌ ಆಗುವ ಕನಸು ಹೊತ್ತಿದ್ದ ಸೋಮನಿಂಗ, 2020-21ನೇ ಸಾಲಿನ ಕಾನ್‌ಸ್ಟೇಬಲ್‌ ಹುದ್ದೆ(Job) ನೇಮಕಾತಿಗೆ(Recruitment) ಅರ್ಜಿ ಹಾಕಿದ್ದ. ಈ ಸಂಬಂಧ ಆ.24ರ ಭಾನುವಾರ ನಡೆದ ಲಿಖಿತ ಪರೀಕ್ಷೆಗೆ ಬೆಂಗಳೂರಿನ(Bengaluru) ತ್ಯಾಗರಾಜನಗರದ ಎಸ್‌ಜಿಪಿಟಿಎ ಶಾಲೆಯಲ್ಲಿ ಆತ ಹಾಜರಾಗಿದ್ದ. ಅದೇ ಶಾಲೆಯಲ್ಲಿ ಆತನೊಂದಿಗೆ ಒಂದು ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆಯುವಾಗ ಪೊಲೀಸ್‌ ನಿಯಂತ್ರಣ ಕೊಠಡಿಯಿಂದ ಪರೀಕ್ಷಾ ಕೇಂದ್ರ ಉಸ್ತುವಾರಿಯಾಗಿದ್ದ ಬನಶಂಕರಿ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಪಿ.ಪುಟ್ಟಸ್ವಾಮಿ ಅವರಿಗೆ ತಮ್ಮ ಶಾಲೆಯಲ್ಲಿ ಪರೀಕ್ಷೆ ಹಾಜರಾಗಿರುವ ಸೋಮನಿಂಗ ಎಂಬ ಅಭ್ಯರ್ಥಿ ಪರೀಕ್ಷಾ ಅಕ್ರಮದಲ್ಲಿ(Illegal) ತೊಡಗಿರುವ ಮಾಹಿತಿ ಇದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿದ್ದರು.

ಈ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್‌, ಪರೀಕ್ಷೆ ವೇಳೆ ಐದು ಪ್ರಶ್ನೆಗಳಿಗೆ ಮಾತ್ರ ಉತ್ತರ ಬರೆದು ತಡವರಿಸುತ್ತಿದ್ದ ಸೋಮನಿಂಗನನ್ನು ಪ್ರಶ್ನಿಸಿದ್ದಾರೆ. ಅನಿರೀಕ್ಷಿತವಾಗಿ ಪೊಲೀಸರಿಗೆ ಸಿಕ್ಕಿಬಿದ್ದರಿಂದ ಆತ ಭೀತಿಗೊಂಡಿದ್ದಾನೆ. ಬಳಿಕ ಪರೀಕ್ಷಾ ಕೊಠಡಿಯಿಂದ ಹೊರಗಡೆ ಕರೆ ತಂದು ಸೋಮನಿಂಗನನ್ನು ಇನ್ಸ್‌ಪೆಕ್ಟರ್‌ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

‘ನಾನು ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಆಗ ನನ್ನೂರಿನ ಮಾರುತಿ ಕಂಬಾರನನ್ನು ಭೇಟಿ ಮಾಡಿದ್ದ. ನೀನು ನನಗೆ .12 ಲಕ್ಷ ಕೊಟ್ಟರೇ ಕಾನ್‌ಸ್ಟೇಬಲ್‌ ಹುದ್ದೆ ಕೊಡಿಸುವುದಾಗಿ ಆತ ಹೇಳಿದ. ಕೊನೆಗೆ ಮಾತುಕತೆ ನಡೆದು .10 ಲಕ್ಷ ನೀಡುವುದಾಗಿ ಆತನಿಗೆ ಹೇಳಿದೆ. ಇದಕ್ಕೊಪ್ಪಿದ ಆತ, ಪರೀಕ್ಷೆ ಮುನ್ನ .5 ಲಕ್ಷ ಕೊಡಬೇಕು. ಲಿಖಿತ ಪರೀಕ್ಷೆಯಲ್ಲಿ ನಿನಗೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಇನ್ನುಳಿದ ಪ್ರಶ್ನೆಗಳನ್ನು ಹಾಗೆಯೇ ಬಿಟ್ಟರೂ ಸರಿಯೇ ನೋಡಿಕೊಳ್ಳುತ್ತೇನೆ. ಓಎಂಆರ್‌ ಶೀಟ್‌(OMR Sheet) ಬದಲಾವಣೆ ಅಥವಾ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ತುಂಬಿಸುವುದಾಗಿ ಹೇಳಿದ್ದ. ಆದರೆ ನನ್ನ ಬಳಿ ಅಷ್ಟುಹಣವಿರಲಿಲ್ಲ. ಹೀಗಾಗಿ ನನ್ನ ಪಕ್ಕದೂರಿನ ವ್ಯಕ್ತಿಯೊಬ್ಬರಿಗೆ ಜಮೀನು(Land) ಅಡಮಾನವಿಟ್ಟು .5 ಲಕ್ಷ ಪಡೆದು ಮಾರುತಿಗೆ ನೀಡಿದ್ದೇನೆ’ ಎಂದು ಸೋಮನಿಂಗ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!