Dharwad: ಲಾಡ್ಜ್​ನಲ್ಲಿ ಒಟ್ಟಿಗೆ ನೇಣಿಗೆ ಶರಣಾದ ಯುವಕ, ಯುವತಿ

By Govindaraj S  |  First Published Dec 8, 2022, 9:05 AM IST

ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ವೇಳೆ‌ ನಡೆದಿದೆ. 


ವರದಿ: ಪರಮೇಶ್ವರ ಅಂಗಡಿ,‌ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಡಿ.08): ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ವೇಳೆ‌ ನಡೆದಿದೆ. ಆರಂಭದಲ್ಲಿ ಅವರಿಬ್ಬರೂ ಪ್ರೇಮಿಗಳೆ ಅಂತಾ ಎಲ್ಲರೂ ಭಾವಿಸಿದ್ದರು ಆದ್ರೆ ಯಾವಾಗ ಇಬ್ಬರೂ ಮನೆಯವರು ಅಲ್ಲಿಗೆ ಬಂದಿದ್ದರೋ ಆಗ ಇಡೀ ನವಲಗುಂದ ಮಾತ್ರವಲ್ಲ, ಸಮಾಜವೇ ಆಘಾತಪಡುವಂತಹ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ವೊಂದರ ಫ್ಯಾನಿಗೆ ಜೋಡಿಯಾಗಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಇವರು ಕುಮಾರ ತಳವಾರ ಹಾಗೂ ಯುವತಿಯೊಬ್ಬಳು ಎಂದು ಹೇಳಲಾಗುತ್ತಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡಿದ ಇವರನ್ನು ಆರಂಭದಲ್ಲಿ ಎಲ್ಲರೂ ಪ್ರೇಮಿಗಳೇ ಇರಬಹುದೆಂದು ಭಾವಿಸಿದ್ದರು. ಆದರೆ ಆ ಬಳಿಕ ಬಯಲಾದ ಅಚ್ಚರಿಯ ಸಂಗತಿ ಅಂದ್ರೆ ಸಂಬಂಧದಲ್ಲಿ ಇವರಿಬ್ಬರು ಅಣ್ಣ-ತಂಗಿ ಎಂದು ಸಂಬಂಧಿಕರೆ ಹೇಳಿಕೊಂಡಿದ್ದಾರೆ.

ಹೌದು! ಹೀಗೆ ಜೋಡಿಯಾಗಿಯೇ ಸತ್ತು ಹೋಗಿರೋ ಇವರು ರಕ್ತ ಸಂಬಂಧದಲ್ಲಿ ಅಕ್ಕ ತಂಗಿಯರ ಮಕ್ಕಳು‌. ಹೀಗಾಗಿ ಇವರ ಈ ಆತ್ಮಹತ್ಯೆ ಪ್ರಕರಣ ಅನೇಕ ಸಂಶಯಗಳಿಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ಅಣ್ಣ ತಂಗಿಯ ಸಂಬಂಧವನ್ನೇ ಮೀರಿದ ಪ್ರೀತಿ ಉಂಟಾಗಿತಂತೆ. ಅದೇ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದು ಇದು ಸರಿಯಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಕರಿಂದ ವ್ಯಕ್ತವಾಗಿದೆ. ಆದರೆ ಇವರಿಬ್ಬರು ಇಡಿ ಸಮಾಜವೇ ತಲೆ‌ತಗ್ಗಿಸುವ ಕೆಲಸವನ್ನ ಮಾಡಿದ್ದಾರೆ, ನಾವು ಹೇಗೆ ಮುಖ‌ ಎತ್ತಿಕ್ಕೊಂಡು ಬದುಕುವುದು ಎಂದು ಸಂಬಂಧಿಕರು ಕಣ್ಣೀರು ಹಾಕುವಂತಾಗಿದೆ.

ಸರ್ಕಾರಿ ಬಿಇ ಕಾಲೇಜುಗಳಿಗೆ ಐಐಟಿ ರೀತಿ ಆಡಳಿತ ಮಂಡಳಿ: ಸಚಿವ ಅಶ್ವತ್ಥ್‌

22 ವಯಸ್ಸಿನ ಕುಮಾರ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದವನು. ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಯುವತಿ. ಇಬ್ಬರ ತಾಯಿಯಂದಿರೂ ಅಕ್ಕತಂಗಿಯರು‌. ಹೀಗಾಗಿ ಕುಮಾರ ಮತ್ತು ದೀಪಾ‌ ಜೋಡಿಯಾಗಿ ಓಡಾಡುವಾಗ ಇವರ ಸಂಬಂಧದ ಬಗ್ಗೆ ಯಾರಿಗೂ ಸಂಶಯವೇ ಇರಲಿಲ್ಲ. ಇನ್ನು ಧಾರವಾಡಲ್ಲಿ ಕೆಲಸ ಹಿಡಿತೇನಿ. ಕಂಪನಿಯೊಂದರಲ್ಲಿ ಕೆಲಸ ಸಿಗೋದು ಇದೇ ಇದೆ ಅಂತಾ ಹೇಳಿಕೊಂಡು ಆಗಾಗ ನೀರಲಕಟ್ಟಿಯ ಚಿಕ್ಕಮ್ಮನ ಮನೆಗೆ ಬರುತ್ತಿದ್ದ ಕುಮಾರ, ಅನೇಕ ಸಲ ತಿಂಗಳಾನುಗಟ್ಟಲೇ ಚಿಕ್ಕಮ್ಮನ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದಂತೆ. 

ಡಿಸೆಂಬರ್ 5ರಂದು ಕುಮಾರ, ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಹೋಗುತ್ತೇನೆ ಅಂತಾ ತನ್ನ ಮನೆಯಲ್ಲಿ ಹೇಳಿ ಹೋಗಿದ್ದಾನೆ. ಅತ್ತ ಪಿಯುಸಿ ಓದುತ್ತಿರೋ ದೀಪಾ, ಡಿ. 5ರಂದು ಕಾಲೇಜ್‌ಗೆ ಹೋದವಳು ಮನೆಗೆ ವಾಪಸ್ ಬಂದಿರಲೇ‌ ಇಲ್ಲ. ಅಣ್ಣ ತಂಗಿ ಇಬ್ಬರು ಸೇರಿ ಊರಿಗೆ ಹೋಗಿರಬಹುದು ಎಂದುಕೊಂಡು ಮನೆಯವರೆಲ್ಲ ಸುಮ್ಮನಾಗಿ ಬಿಟ್ಟಿದ್ದಾರೆ. ಆದ್ರೆ ಇವರು ಅದೇ ಡಿ. 5ರಂದೇ ಅಶೋಕ ಲಾಡ್ಜ್ ಸೇರಿದವರು ಹೊರಗೆ ಬಂದೇ ಇಲ್ಲ. ಯಾವಾಗ ಇವರ ರೂಮ್ ಬಾಗಿಲು ಬುಧವಾರ ಇಡೀ ದಿನ ತೆಗೆದೇ ಇಲ್ಲವೋ ಆಗ ಬಾಗಿಲು ತೆರದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬಹಿರಂಗಗೊಂಡಿದೆ.

ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಪರೀಕ್ಷೆ ಮಾಡಿ: ಸಚಿವ ಸುಧಾಕರ್‌ ಸೂಚನೆ

ಸದ್ಯ ಇಬ್ಬರ ಮಧ್ಯೆ ಅಣ್ಣ ತಂಗಿ ಸಂಬಂಧದ ಹೊರತಾಗಿ ಬೇರೆ ರೀತಿಯ ಪ್ರೀತಿ ಇತ್ತಾ ಅಂತಾ ಯಾರೂ ಸಹ ಊಹಿಸಿಕೊಳ್ಳುತ್ತಿಲ್ಲ‌. ಊಹಿಸಿಕೊಳ್ಳಲು ಆಗದಂತಹುದೇ ಆದರೆ ಇವರಿಬ್ಬರು ಮಾಡಿಕೊಂಡಿರೋ ಈ ಅವಾಂತರ ಈಗ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಾಗಿ ಹೋಗಿದ್ದು, ಎರಡೂ ಕಡೆಯ ಕುಟುಂಬಗಳು ಇವರು ಮಾಡಿದ ತಪ್ಪಿಗೆ ಅವಮಾನ ಎದುರಿಸುವಂತಾಗಿದೆ. ಇನ್ನು ಸ್ಥಳಕ್ಕೆ‌ ನವಲಗುಂದ ಪಿಎಸ್‌ಐ ನವೀನ್ ಜಕ್ಲಿ ಭೇಟಿ ನಿಡಿ ಪ್ರಕರಣವನ್ನ‌ ದಾಖಲಿಸಿಕ್ಕೊಂಡಿದ್ದಾರೆ. ಇದು ನಿಜವಾಗಿಯೂ ಆತ್ಮಹತ್ಯೆಯಾ ಅಥವಾ ಯಾರಾದ್ರೂ ಕೊಲೆ ಮಾಡಿದ್ದಾರಾ ಅನ್ನೋ ಅನುಮಾನವನ್ನ ಸಂಬಂಧಿಕರು ಹೊರ ಹಾಕಿದ್ದಾರೆ. ಆದಷ್ಟು ಬೇಗ ಪೋಲಿಸರು ತನಿಖೆ ನಡೆಸಿ ಇದು ಕೊಲೆನಾ, ಇವರೇ ಆತ್ಮಹತ್ಯೆ ಮಾಡಿಕ್ಕೊಂಡ್ರಾ ಎಂಬುದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ. ಅದರಲ್ಲೂ ರೂಂ ಬಾಡಿಗೆ ಕೊಡಿಸಿದವರ ವಿಚಾರಣೆಯನ್ನ ಪೋಲಿಸರು ಮುಂದುವರೆಸಿದ್ದಾರೆ.

click me!