
ಕುಮಟಾ(ಡಿ.08): ಅಪ್ಪನ ಜತೆ ಸೇರಿ ಮಗ ತನ್ನ ತಾಯಿಯನ್ನೇ ಕೊಲೆಗೈದ ಘಟನೆ ತಾಲೂಕಿನ ಕೂಜಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೇಲಿನ ಕೂಜಳ್ಳಿಯ ಬಚ್ಕಂಡದ ಗೀತಾ ವಿಶ್ವೇಶ್ವರ ಭಟ್ಟ(64) ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಮಹಿಳೆಯ ಪತಿ ವಿಶ್ವೇಶ್ವರ ನಾರಾಯಣ ಭಟ್ಟ(69) ಹಾಗೂ ಅವರ ಮಗ ಮಧುಕರ ವಿಶ್ವೇಶ್ವರ ಭಟ್ಟ(33) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Karwar: ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ
ವಿಪರೀತ ಕುಡಿತದ ದಾಸರಾಗಿದ್ದ ಅಪ್ಪ -ಮಗ ಇಬ್ಬರೂ ಪದೇ ಪದೇ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮಂಗಳವಾರ ರಾತ್ರಿಯೂ 10 ಗಂಟೆ ಸುಮಾರಿಗೆ ಮನೆಗೆ ಬಂದು ವಿಪರೀತ ಗಲಾಟೆ ಮಾಡಿದರು. ಈ ವೇಳೆ, ಮಾತಿಗೆ ಮಾತು ಬೆಳೆದು, ಗೀತಾಗೆ ರೀಪಿನ ತುಂಡು ಹಾಗೂ ಸ್ಟೂಲಿನಿಂದ ಹೊಡೆದರು. ಇದರಿಂದ ಗಾಯಗೊಂಡು ಗೀತಾ ಅಸುನೀಗಿದರು.
ಬುಧವಾರ ಬೆಳಗ್ಗೆ ವಿಶ್ವೇಶ್ವರ ಭಟ್ಟ, ತನ್ನ ಪತ್ನಿ ಹೃದಯಾಘಾತದಿಂದ ಸತ್ತುಹೋದಳೆಂದು ಅಕ್ಕಪಕ್ಕದ ಮನೆಯವರಿಗೆ ತಿಳಿಸಿ, ಅಂತ್ಯಸಂಸ್ಕಾರಕ್ಕೆ ಸಿದ್ಧರಾಗಿದ್ದರು. ಆದರೆ, ಮೃತದೇಹದ ಮೇಲಿನ ಗಾಯದ ಗುರುತು ನೋಡಿ ಗ್ರಾಮಸ್ಥರು ಸಂಶಯಗೊಂಡು, ಪೊಲೀಸರಿಗೆ ದೂರು ನೀಡಿದರು. ದೂರಿನ ಮೇರೆಗೆ ಪೊಲೀಸರು ಅಪ್ಪ-ಮಗ ಇಬ್ಬರನ್ನೂ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ