ಸಾವು ಯಾವ ರೂಪದಲ್ಲಾದ್ರೂ ಬರುತ್ತದೆ ಅನ್ನೋದಕ್ಕೆ ‌ಈ ಪ್ರಕರಣ ಸಾಕ್ಷಿ, ಇವರದ್ದು ಸ್ನೇಹನಾ ಪ್ರೀತಿನಾ?

By Suvarna News  |  First Published May 1, 2022, 1:36 PM IST

* ಸಾವು ಯಾವ ರೂಪದಲ್ಲಾದ್ರೂ ಬರಬಹುದು ಎಚ್ಚರ ಎಚ್ಚರ
* ಇದು ಪ್ರೀತಿಯೋ ಸ್ನೇಹವೋ ಗೊತ್ತಿಲ್ಲ..
* ಯುವತಿಯ ಸಾವು ಮಾತ್ರ ದುರಂತ ಅಂತ್ಯ ಕಂಡಿದೆ


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಮೇ.01):
ಸಾವು ಯಾವ ರೂಪದಲ್ಲಾದ್ರೂ ಬರುತ್ತದೆ ಅನ್ನೋದಕ್ಕೆ ‌ಈ ಪ್ರಕರಣ ಸಾಕ್ಷಿಯಾಗಿದೆ. ಯುವಕ ಯುವತಿ ಇಬ್ಬರು ಬೈಕ್ನಲ್ಲಿ ಬರಬೇಕಾದ್ರೇ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ನಡೆದಿದೆ. ಆದ್ರೇ, ಘಟನೆಯ ಬಳಿಕ ಹೊಸ ವಿವಾದ ವೊಂದು ಸೃಷ್ಟಿಯಾಗಿದ್ದು, ಅವರಿಬ್ಬರು ಪ್ರೇಮಿಗಳೋ ಗೆಳೆಯರೋ ಗೊತ್ತಿಲ್ಲ.. ಆದ್ರೇ ಅಪಘಾತದಲ್ಲಿ ಯುವತಿ ಮಾತ್ರ  ದುರಂತ ಅಂತ್ಯವನ್ನು ಕಂಡಿದ್ದಾಳೆ. ಇದಕ್ಕೆ ಯುವಕನಂತೂ ಕಾರಣವಲ್ಲ ಆದ್ರೇ, ದುರ್ವಿಧಿಯ ಅಟಕ್ಕೆ ಯುವತಿ ಬಲಿಯಾಗಿರೋದು ಮಾತ್ರ ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.
 
ದೇವಸ್ಥಾನಕ್ಕೆ ಹೋದವರು ಮಸಣ ಸೇರಿದ್ರು
 ಬಳ್ಳಾರಿ ಮೂಲದ ನಂದೀಶ ಮತ್ತು ಅಶ್ವಿನಿ ಬೈಕ್ ಮೇಲೆ ಕುರುಗೋಡು ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ರು..  ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ಬರೋವಾಗ ಕುರುಗೋಡು ಹೊರವಲಯದಲ್ಲಿ ಕಾರೊಂದು ( ಕ್ಸೈಲೋ ) ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಪರಸ್ಪರ ಎರಡು ಕುಟುಂಬಕ್ಕೂ ಇವರಿಬ್ಬರ ಸ್ನೇಹದ ಬಗ್ಗೆ ಗೊತ್ತಿಲ್ಲ. ಆದ್ರೇ, ಘಟನೆ ಬಳಿಕ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಹೆಸರಲ್ಲಿ ಯುವಕ ನಾಪತ್ತೆಯಾಗಿರೋದು ಎಲ್ಲರ ಬೇಸರ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Acid Attack ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ, ಆರೋಪಿ ಬಂಧನಕ್ಕೆ 7 ತಂಡ, ಯುವತಿ ಆರೋಗ್ಯ ಚೇತರಿಕೆ!
 
ಘಟನೆ ನಡೆದ ಬಳಿಕ ಯುವಕನೇ ಫೋನ್ ಮಾಡಿದ್ದು
 ಇನ್ನೂ ಕುರುಗೋಡಿನ ಖಾಸಗಿ ಶಾಲೆಯಲ್ಲಿ  ಕಂಪ್ಯೂಟರ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಅಶ್ವಿನಿ ನಿತ್ಯ ಬಳ್ಳಾರಿಯಿಂದ ಬಸ್ಸಿನಲ್ಲಿ  ಹೋಗಿ ಬರುತ್ತಿದ್ದರು. ರಜೆ ಇರೋ ಹಿನ್ನೆಲೆ ಯುವಕನ ಜೊತೆ ಬೈಕ್ ಕುರುಗೋಡಿನ ಬಸವೇಶ್ವರ ದೇವಸ್ಥಾನದ ದರ್ಶನಕ್ಕೆ ಹೋಗಿದ್ರು. ಆದ್ರೇ ಪೂಜೆ ಮುಗಿಸಿಕೊಂಡು ಬಳ್ಳಾರಿಗೆ ವಾಪಸ್ ಬರೋವಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

Tap to resize

Latest Videos

undefined

 ಡಿಕ್ಕಿಯ ರಭಸಕ್ಕೆ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆಗ ಯುವಕ ನಂದೀಶ್   ಯುವತಿಯ ಮಾವ ಗಂಗಾಧರ ಪೋನ್ ಮಾಡಿ ಅಪಘಾತವಾಗಿದೆ ಎಂದು ತಿಳಿಸಿದ್ದಾನೆ. ಆಗ ಗಂಗಾಧರ ಸ್ಥಳಕ್ಕೆ ಬರೋಷ್ಟರಲ್ಲಿಯೇ ಯುವತಿಯನ್ನು ಮೊದಲು ಕುರುಗೋಡು ಆಸ್ಪತ್ರೆಯಲ್ಲಿ ರವಾನೆ ಮಾಡಲಾಗಿದೆ. ಅಲ್ಲಿಗೆ ಹೋಗಿ ನೋಡೋದ್ರೊಳಗೆ ಯುವತಿ ಸಾವನ್ನಪ್ಪಿದ್ದಳು ಎಂದು ಗಂಗಾಧರ ಸುವರ್ಣ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾನೆ. 

ಆದ್ರೇ ಇವರಿಬ್ಬರ ಮಧ್ಯೆ ಇರೋದು ಸ್ನೇಹವೇ ಅಥವಾ ಪ್ರಮವೇ ಅನ್ನೋ ಬಗ್ಗೆ ಯಾರಿಗೂ ಕೂಡ ಗೊತ್ತಿಲ್ಲ. ಆದ್ರೇ ಇಬ್ಬರು ಕುಟುಂಬಸ್ಥರಿಗೂ ಕೂಡ ಇವರಬ್ಬರ ಮಧ್ಯೆ ಇರೋ ಸ್ನೇಹಿದ ಬಗ್ಗೆ ಅಪಘಾತವಾದ ಬಳಿಕವಷ್ಟೇ ಗೊತ್ತಾಗಿದೆ. ಆದ್ರೇ, ಇದೀಗ ಚಿಕಿತ್ಸೆ ಹೆಸರಲ್ಲಿ ಯುವಕ ನಾಪತ್ತೆಯಾಗಿ ರೋದು ಒಂದು ಕಡೆ ಅನುಮಾನದ ಜೊತೆ ಎಲ್ಲರಲ್ಲೂ ಅಸಮಾಧಾನ ಮೂಡಿಸಿದೆ. ಅದೇನೇ ಇರಲಿ ಸ್ನೇಹನೋ ಪ್ರೀತಿಯೋ ಗೊತ್ತಿಲ್ಲ ಆದ್ರೇ ಅಪಘಾತವಾದಾಗ ನೇರವಾಗಿ ನಿಂತು ಎಲ್ಲ ಸಮಸ್ಯೆಯನ್ನು ಎದುರಿಸಬೇಕಾದ ನಂದೀಶ ಯಾರಿಗೂ ಉತ್ತರ ಕೊಡದೇ ಇರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.

click me!