ಪ್ರೀತಿಸಿ ಮದುವೆಯಾದ ಹೆಂಡತಿ, ಮಗಳನ್ನು ಕೊಟ್ಟ ಅತ್ತೆ, ಮಾವನನ್ನೂ ಕೊಲೆಗೈದ ಮನೆ ಮುರುಕ ಅಳಿಯ!

Published : Jul 18, 2024, 03:04 PM IST
ಪ್ರೀತಿಸಿ ಮದುವೆಯಾದ ಹೆಂಡತಿ, ಮಗಳನ್ನು ಕೊಟ್ಟ ಅತ್ತೆ, ಮಾವನನ್ನೂ ಕೊಲೆಗೈದ ಮನೆ ಮುರುಕ ಅಳಿಯ!

ಸಾರಾಂಶ

ಪ್ರೀತಿಸಿ ಮದುವೆಯಾದ ಹೆಂಡತಿ, ಮಗಳನ್ನು ಕೊಟ್ಟ ಅತ್ತೆ, ಮಾವ ಸೇರಿ ಮೂವರನ್ನೂ ಚಾಕು ಇರಿದು ಕೊಲೆ ಮಾಡಿದ ಮನೆ ಮುರುಕ ಅಳಿಯ ನವೀನ್‌...

ಯಾದಗಿರಿ (ಜು.18): ಹಲವು ವರ್ಷಗಳಿಂದ ನಾನು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ ಎಂದು ಯುವತಿಯ ಕಾಲಿಗೆ ಬಿದ್ದು ಮದುವೆ ಮಾಡಿಕೊಂಡ ಅಳಿಯ, ಈಗ ಮಗಳು ಮದುವೆಯಾದ ಹೆಂಡತಿ ಸೇರಿದಂತೆ ಅತ್ತೆ, ಮಾನವನ್ನೂ (ಹೆಂಡತಿಯ ಅಪ್ಪ-ಅಮ್ಮ) ಭೀಕರವಾಗಿ ಕೊಲೆ ಮಾಡಿ ಬೀಸಾಡಿದ ದುರ್ಘಟನೆ ಯಾದಗಿರಿಯಲ್ಲಿ ನಡೆದಿದೆ.

ಹೌದು, ಪತ್ನಿ, ಅತ್ತೆ ಹಾಗೂ ಮಾವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಬಳಿ ನಡೆದಿದೆ. ಕೊಲೆಯಾದ ಹೆಂಡ್ತಿ ಅನ್ನಪೂರ್ಣ (25) ಅತ್ತೆ ಕವೀತಾ (45) ಹಾಗೂ ಮಾವ ಬಸವರಾಜಪ್ಪ (52) ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಕೊಲೆ ಮಾಡಿದ ಆರೋಪಿ ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಎಂಬಾತನಾಗಿದ್ದಾನೆ. ಕಳೆದ ನಾಲ್ಕು ವರ್ಷದ ಹಿಂದೆ ನವೀನ್ ದಾವಣಗೆರೆ ಮೂಲದ ಅನ್ನಪೂರ್ಣಳನನ್ನ ಪ್ರೀತಿಸಿ ಮದುವೆಯಾಗಿದ್ದನು. ಇದಾದ ನಂತರ ಕೆಲವು ವರ್ಷಗಳ ಕಾಲ ಇಬ್ಬರೂ ಚೆನ್ನಾಗಿ ಸಂಸಾರವನ್ನೂ ಮಾಡಿದ್ದಾರೆ.

ಮದುವೆಗೆ ಪೋಷಕರು ಅಡ್ಡಿ; ರಕ್ಷಣೆ ಕೋರಿ ಎಸ್‌ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು!

ಇವರಿಬ್ಬರ ಸುಖ ಸಂಸಾರಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ, ಮಗುವಾದ ನಂತರ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಾ ಹಲ್ಲೆ ಮಾಡುತ್ತಿದ್ದ ಗಂಡನ ಕಿರುಕುಳಕ್ಕೆ ಬೇಸತ್ತು ಅನ್ನಪೂರ್ಣಾ ತನ್ನ ತವರುಮನೆ ದಾವಣೆಗೆರೆಗೆ ಬಂದಿದ್ದಾರೆ. ತವರು ಮನೆಗೆ ಬದು ಒಂದು ವರ್ಷವಾದರೂ ಅಲ್ಲಿಗೆ ಹೋಗಲು ಮನಸ್ಸು ಮಾಡಿರಲಿಲ್ಲ. ಆದರೆ, ಕಳೆದೊಂದು ವರ್ಷದಿಂದ ತಂದೆ ತಾಯಿ ಜೊತೆಗೆ ಆರಾಮವಾಗಿರುವ ಹೆಂಡತಿ ಇಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಸಂತಸದಿಂದ ಇದ್ದಾಳೆ. ಹೆಂಡತಿ ಖುಷಿಯಾಗಿರುವುದನ್ನು ನೋಡಲು ಸಹಿಸಲಾಗದೇ ಆಕೆಗೆ ಒಂದು ಗತಿ ಕಾಣಿಸಬೇಕು ಎಂದು ಮನಸ್ಸಿನಲ್ಲಿ ಯೋಜನೆ ರೂಪಿಸಿಕೊಂಡಿದ್ದಾನೆ.

ಈ ನಿಟ್ಟಿನಲ್ಲಿ ನಿನ್ನೆ ಹೆಂಡತಿ ತವರು ಮನೆಗೆ ಬಂದ ಅಳಿಯ ನವೀನ್ ನನ್ನ ಹೆಂಡತಿ ಅನ್ನಪೂರ್ಣಳನ್ನು ನನ್ನೊಂದಿಗೆ ಕಳಿಸಿಕೊಡಿ, ಹೊಂದಿಕೊಂಡು ಜೀವನ ಮಾಡುವುದಾಗಿ ಹೇಳಿದ್ದಾನೆ. ಆಗ, ಮಾವನ ಮನೆಯಲ್ಲಿ ಕೆಲವು ಹಿರಿಯರು ಸೇರಿಕೊಂಡು ರಾಜಿ ಪಂಚಾಯಿತಿ ಮಾಡಿ ಕೆಲವು ಷರತ್ತುಗಳನ್ನು ವಿಧಿಸಿ ಮಗಳನ್ನು ಗಂಡನ ಮನೆಗೆ ಕಳಿಸಿಕೊಡಲು ಒಪ್ಪಿಕೊಂಡಿದ್ದಾರೆ. ಇನ್ನು ಮಗಳು ಅನ್ನಪೂರ್ಣ ಅವರ ತಂದೆ ತಾಯಿ ಇಬ್ಬರೂ ಸೇರಿ ಮಗಳನ್ನು ಯಾದಗಿರಿಯಲ್ಲಿರುವ ಗಂಡನ ಮನೆಗೆ ಬಿಡಲು ಬಂದಿದ್ದಾರೆ.

ಯಾದಗಿರಿ: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಇಬ್ಬರು ಕಾಮುಕರ ಬಂಧನ..!

ಇನ್ನು ಯಾದಗಿರಿಯಲ್ಲಿಯೂ ಕೂಡ ಅಳಿಯ ನವೀನ್ ಮನೆಯ ಹಿರಿಯರನ್ನು ಸೇರಿಸಿ ಮತ್ತೊಮ್ಮೆ ರಾಜೀ ಪಂಚಾಯಿತಿ ಮಾಡಿಸಿ ಮಗಳನ್ನು ಬಿಟ್ಟು ಊರಿಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಅಳಿಯ ನವೀನ್ ನಾನು ನಿಮ್ಮನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಟ್ಟು ಬರುವುದಾಗಿ ಹೇಳಿದ್ದಾನೆ. ಆಗ ಅತ್ತೆ ಕವಿತಾ, ಮಾವ ಬಸವರಾಜಪ್ಪ ಹಾಗೂ ಹೆಂಡತಿ ಅನ್ನಪೂರ್ಣ ಸೇರಿ ಮೂವರನ್ನೂ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ. ಆಗ ಕಾರನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಮೂವರ ಮೇಲೆ ಕಬ್ಬಿಣ ರಾಡ್‌ನಿಂದ ಹಲ್ಲೆ ಮಾಡಿ, ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

ನಂತರ ಹೆಂಡತಿ, ಅತ್ತೆ ಹಾಗೂ ಮಾವ ಸೇರಿ ಮೂವರ ಮೃತದೇಹಗಳನ್ನು ವಡಗೇರ ತಾಲೂಕಿನ ಜೋಳದಡಗಿ ಗ್ರಾಮದ ಬಳಿ ಬೀಸಾಡಿ ಬಂದಿದ್ದಾನೆ. ಯಾದಗಿರಿಯ ಅನ್ನಪೂರ್ಣಳ ಶವವನ್ನ ಪತ್ತೆ ಮಾಡಿರುವ ಪೊಲೀಸರು, ಈಕೆಯ ಗಂಡನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಘಟನೆ ಕುರಿತಂತೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!