* ತೆಲಂಗಾಣ ಪೊಲೀಶರಿಗೆ ಸವಾಲು ಹಾಕಿ ಬಂದಿದ್ದ ಕಾರು ಕಳ್ಳ
* ಬೆಂಗಳೂರಿನಲ್ಲಿ ಸೆರೆಸಿಕ್ಕ ಆಸಾಮಿ
* ಹೈ ಎಂಡ್ ಕಾರುಗಳನ್ನೇ ಕದಿಯುತ್ತಿದ್ದ
* ಸಿನಿಮಾ ನಿರ್ಮಾಪಕರ ಕಾರು ಎಗರಿಸಿ ನಾಪತ್ತೆಯಾಗಿದ್ದ
ಬೆಂಗಳೂರು(ಮಾ. 02) ತೆಲಂಗಾಣ (Telangana) ಪೊಲೀಸರಿಗೆ ಸವಾಲು ಹಾಕಿ 'ಕ್ಯಾಚ್ ಇಫ್ಯು ಯು ಕ್ಯಾನ್' ತಾಕತ್ತಿದ್ದರೆ ನನ್ನ ಹಿಡಿಯಿರಿ ಎಂದಿದ್ದ ಖತರ್ನಾಕ್ ಕಳ್ಳ ಕರ್ನಾಟಕ ಪೊಲೀಸರ (Karnataka Police) ಬಲೆಗೆ ಬಿದ್ದಿದ್ದಾನೆ.
ಹೈ-ಎಂಡ್ ಕಾರುಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜೈಪುರ ಮೂಲದ ಸತ್ಯೇಂದ್ರ ಸಿಂಗ್ ಶೇಖಾವತ್ ಅರೆಸ್ಟ್ ಮಾಡಲಾಗಿದೆ. ದೇಶಾದ್ಯಂತ ನೂರಾರು ಕಾರುಗಳವು ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದಾನೆ.
ಈ ಹಿಂದೆ ಕನ್ನಡ (Sandalwood)ನಿರ್ಮಾಪಕ ಮಂಜುನಾಥ್ ಎಂಬವರ ಹೈ-ಎಂಡ್ ಕಾರನ್ನ ಎಗರಿಸಿದ್ದ ಶೇಖಾವತ್ ಪರಾರಿಯಾಗಿದ್ದ. ಬಂಜಾರ ಹಿಲ್ಸ್ ಬಳಿಯಿಂದ ಪೊಲೀಸ್ ಠಾಣೆಯಿಂದಲೇ ಕಾರು ಕದ್ದು ಪರಾರಿಯಾಗಿದ್ದ.
ಆರೋಪಿಯನ್ನ ಚೇಸ್ ಮಾಡಿದ್ದ ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮಿ ಇಫ್ಯು ಕ್ಯಾನ್ ಅಂತ ಮೆಸೇಜ್ ಮಾಡಿ ಸವಾಲು ಎಸೆದಿದ್ದ. ಕಾರಿನ ಡಿವೈಸನ್ನ ಹ್ಯಾಕ್ ಮಾಡಿ ಕಾರನ್ನ ಹೊತ್ತೊಯ್ತಿದ್ದ. ಕದ್ದ ಕಾರನ್ನ ಡ್ರಗ್ಸ್ ಮಾಫಿಯಾ ಲೀಡರ್ ಗಳಿಗೆ ಮಾರಾಟ ಮಾಡಿ ಹಣ ಜೇಬಿಗೆ ಇಳಿಸುತ್ತಿದ್ದ. ಸದ್ಯ ಖತರ್ ನಾಕ್ ಶೇಖಾವತ್ ನನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು ನಾಲ್ಕು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರು ಕದಿಯುತ್ತಿದ್ದ ತಂಡ: ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕಾರುಗಳನ್ನ ಕದಿಯುತ್ತಿದ್ದ ಆರೋಪಿಗಳ ಬಂಧಿಸಿದ್ದಾರೆ. ಮಂಜುನಾಥ್ ಹಾಗೂ ಶೇಕ್ ನವಾಜ್ ಬಂಧಿತ ಆರೋಪಿಗಳು. ಮಹದೇವಪುರ ಹಾಗೂ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಕಾರು ಕಳ್ಳತನ ಮಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಶೋರೂಂಗಳು ಹಾಗೂ ಅಪಾರ್ಟ್ಮೆಂಟ್ ಗಳಲ್ಲಿ ಕಾರು ಕದಿಯುತ್ತಿದ್ದ ಆರೋಪಿಗಳು ಅದಕ್ಕೊಂದು ಮಾಸ್ಟರ್ ಪ್ಲಾನ್ ಸಿದ್ಧ ಮಾಡಿಕೊಂಡಿದ್ದರು. ಶೋರೂಂ, ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡ್ತಿದ್ದ ಆರೋಪಿಗಳು ಸಿಬ್ಬಂದಿ ಗಮನ ಬೇರೆ ಕಡೆ ಸೆಳೆದು ಕೀ ಕದಿಯುತ್ತಿದ್ದರು. ನಂತರ ಪ್ಲಾನ್ ಮಾಡಿ ಕಾರು ಕದ್ದು ಎಸ್ಕೇಪ್ ಆಗುತ್ತಿದ್ದರು.
ಕಲಾಸಿಪಾಳ್ಯ, ಸದಾಶಿವನಗರ ಹಾಗೂ ಹಲಸೂರು ಠಾಣಾ ವ್ಯಾಪ್ತಿಯಲ್ಲಿಯೂ ಕೈಚಳಕ ತೋರಿದ್ದ ಆರೋಪಿಗಳ ಬಂಧನದಿಂದ ಅನೇಕ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಇಬ್ಬರು ರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು ಇವರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ.
ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!
ಟೆಸ್ಟ್ ಡ್ರೈವ್ ಕಳ್ಳರು: ವಾಹನ ಕಳ್ಳತನ ಮಾಡಲು ಖದೀಮರು ಕಾಲಕ್ಕೆ ತಕ್ಕಂತೆ ತಮ್ಮ ಪ್ಲಾನ್ ಬದಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಟೆಸ್ಟ್ ಡ್ರೈವ್(Test Drive) ನೆಪದಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಹೊಸ ತಂತ್ರಜ್ಞಾನ, ಆ್ಯಂಟಿ ಥೆಫ್ಟ್ ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಂದ ಹೊಸ ಕಾರುಗಳ ಕಳ್ಳತನ ಅಷ್ಟು ಸುಲಭವಲ್ಲ. ಹೀಗೆ ಟಾಟಾ ಅಲ್ಟ್ರೋಜ್(Tata Altroz) ಕಾರು ಕಳ್ಳತನ(Stolen) ಮಾಡಿದ ಖದೀಮರು ಪೇಚಿಗೆ ಸಿಲುಕಿದ್ದರು.
ಮಧ್ಯಪ್ರದೇಶದ(Madhya Pradesh) ಉಜ್ಜೈನಿಯಲ್ಲಿ ನಡೆದಿದೆ. ಟಾಟಾ ಅಲ್ಟ್ರೋಜ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಗ್ರಾಹಕರು ಟಾಟಾ ಶೋ ರೂಂಗಳಿಗೆ ಆಗಮಿಸಿ ಅಲ್ಟ್ರೋಜ್ ಕಾರಿನ ಕುರಿತು ವಿಚಾರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗೆ ಉಜ್ಜೈನಿಯಲ್ಲಿನ ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಬಳಿ ತೆರಳಿದ ಇಬ್ಬರು ಕಳ್ಳರು, ಅಲ್ಟ್ರೋಜ್ ಕಾರು ಖರೀದಿಸುವಂತೆ ನಟೆಸಿದ್ದಾರೆ.
ಕಳ್ಳರು ಬಹುದೂರ ಸಾಗಿ ಅಲ್ಟ್ರೋಜ್ ಕಾರು ನಿಲ್ಲಿಸಿ ಮುಂದಿನ ಕಾರ್ಯಯೋಜನೆ ರೂಪಿಸಿದ್ದಾರೆ. ಕೆಲ ಹೊತ್ತು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಕಾರನ್ನು ಬೇರೆ ರಾಜ್ಯಕ್ಕೆ ಕೊಂಡೊಯ್ಡು ಬಿಡಿ ಭಾಗಗಳನ್ನು ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಕಾರು ಲಾಕ್ ಆಗಿದೆ. ಕಾರಿನ ಕೀ ಇಲ್ಲ. ಅದೆಷ್ಟೇ ಪ್ರಯತ್ನ ಪಟ್ಟರೂ ಕಾರು ಅನ್‌ಲಾಕ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಹೆಚ್ಚು ಹೊತ್ತು ಇಲ್ಲಿ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಕಳ್ಳರು ಕಾರನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದರು