ಯಾರು ಯಾವಾಗ ಮೋಸ ಮಾಡುತ್ತಾರೋ ಗೊತ್ತೇ ಆಗುವುದಿಲ್ಲ. ಇವನು ನಂಬಿಕಸ್ಥ ಹಾಗೆಲ್ಲ ಮೋಸ ಮಾಡುವವನಲ್ಲ ಅನ್ನೋ ಕಾಲ ಇದಲ್ಲ. ಎಷ್ಟೆ ನಂಬಿಕಸ್ಥನಾಗಿದ್ದರೂ ಹಣದ ಮೌಲ್ಯ ಹೆಚ್ಚಾದಷ್ಟು ಮನುಷ್ಯ ನಂಬಿದವರಿಗೆ, ಅನ್ನ ಹಾಕಿದವರಿಗೆ ಮೋಸ ಮಾಡಲು ಮುಂದಾಗುತ್ತಾನೆ. ಅಂಥದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ನ.30): ಯಾರು ಯಾವಾಗ ಮೋಸ ಮಾಡುತ್ತಾರೋ ಗೊತ್ತೇ ಆಗುವುದಿಲ್ಲ. ಇವನು ನಂಬಿಕಸ್ಥ ಹಾಗೆಲ್ಲ ಮೋಸ ಮಾಡುವವನಲ್ಲ ಅನ್ನೋ ಕಾಲ ಇದಲ್ಲ. ಎಷ್ಟೆ ನಂಬಿಕಸ್ಥನಾಗಿದ್ದರೂ ಹಣದ ಮೌಲ್ಯ ಹೆಚ್ಚಾದಷ್ಟು ಮನುಷ್ಯ ನಂಬಿದವರಿಗೆ, ಅನ್ನ ಹಾಕಿದವರಿಗೆ ಮೋಸ ಮಾಡಲು ಮುಂದಾಗುತ್ತಾನೆ. ಅಂಥದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ನಂಬಿಕಸ್ಠನೆಂದು ಕೈತುಂಬಾ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಂಡರೆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 3 ಕೋಟಿ ಮೌಲ್ಯದ 6660 ಮೊಬೈಲ್‌ಗಳನ್ನ ಕದ್ದು ಚಾಲಕ ಪರಾರಿಯಾಗಿದ್ದಾನೆ. ಚಾಲಕಿ ಚಾಲಕ ರಾಹುಲ್ ನಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ.
80 ಲಕ್ಷ ಜನರ ಮೊಬೈಲ್‌ನಲ್ಲಿವೆ 15 ನಕಲಿ ಲೋನ್ ಆ್ಯಪ್‌ಗಳು; ಇದ್ರೆ ಇಂದೇ ಡಿಲೀಟ್ ಮಾಡಿ, ಎಚ್ಚರಿಕೆ ಸಂದೇಶ
ದೆಹಲಿಯಿಂದ ಬೆಂಗಳೂರಿಗೆ ಶಿಯೊಮಿ ಕಂಪನಿಯ ಸುಮಾರು ಮೂರು ಕೋಟಿ ಮೌಲ್ಯದ 6660 ಮೊಬೈಲ್ ಗಳನ್ನು ತುಂಬಿದ್ದ ಕಂಟೈನರ್ ಲಾರಿ ಬರುತ್ತಿತ್ತು. ಅದೇ ಲಾರಿ ಚಾಲಕನಾಗಿ ನಂಬಿಕಸ್ಥನೆಂದು ಗುರುತಿಸಿಕೊಂಡಿದ್ದ ರಾಹುಲ್. ಆದರೆ ಕದೀಮ ದೆಹಲಿಯಿಂದ ಬೆಂಗಳೂರಿನ ಹೊಸಕೋಟೆಗೆ ಬರುವಾಗಲೇ 5120 ಮೊಬೈಲ್ ಎಗರಿಸಿದ್ದಾನೆ. ಕಂಟೇನರ್‌ನಲ್ಲಿ ತುಂಬಿದ್ದ ಮೊಬೈಲ್ ಕದ್ದು, ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಲ್ಲಿಸಿ ಕಿರಾತಕ ಪರಾರಿಯಾಗಿದ್ದಾನೆ.
ಇತ್ತ ಸರಿಯಾದ ಸಮಯಕ್ಕೆ ಬರಬೇಕಿದ್ದ ಕಂಟೇನರ್ ಬಾರದೇ ಇರುವುದು ಕಂಡು ಶಿಯೊಮಿ ಕಂಪನಿ ವ್ಯವಸ್ಥಾಪಕರಿಗೆ ಅನುಮಾನ ಆತಂಕ ಶುರುವಾಗಿದೆ. ಕಂಟೇನರ್ ಪತ್ತೆ ಬಳಿಕ ಬೆಚ್ಚಿಬಿದ್ದ ಮೊಬೈಲ್ ಕಂಪನಿ. ಚಾಲಕ ರಾಹುಲ್ ವಿರುದ್ಧ ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ದೆಹಲಿ ಸೇರಿದಂತೆ ಹಲವೆಡೆ ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳ ತಂಡಗಳು ತೆರಳಿದ್ದಾರೆ.