ಬೆತ್ತಲೆಗೊಳಿಸಿ ಹಣಕ್ಕಾಗಿ ಡಿಮ್ಯಾಂಡ್: ವಾಟ್ಸಪ್‌ ವಿಡಿಯೋ ಕಾಲ್‌ ಮೂಲಕ ಬ್ಲಾಕ್‌ಮೇಲ್‌..!

By Kannadaprabha NewsFirst Published Sep 9, 2024, 4:07 PM IST
Highlights

ಬೆಂಗಳೂರಿನಲ್ಲಿ ಕೇಳಿಬರುತ್ತಿದ್ದ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಯುವತಿಯರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ತಂಡ ಈಗ ಬೆಳಗಾವಿಯಲ್ಲೂ ಸಕ್ರಿಯಾಗಿದೆ. 

ಬೆಳಗಾವಿ(ಸೆ.09): ಬೆಂಗಳೂರಿನಲ್ಲಿ ಕೇಳಿಬರುತ್ತಿದ್ದ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಯುವತಿಯರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ತಂಡ ಈಗ ಬೆಳಗಾವಿಯಲ್ಲೂ ಸಕ್ರಿಯಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್, ಐಬಿ ಎಂದು ಹೇಳಿಕೊಂಡು ವಾಟ್ಸಪ್‌ ವಿಡಿಯೋ ಕಾಲ್‌ ಮಾಡುವ ವಂಚಕರು, ನೀವು ಅಪರಾಧದಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿ ಮಾಹಿತಿ ಕೇಳುತ್ತಾರೆ. ಬಳಿಕ ನಿಮ್ಮ ಇಡೀ ಬಾಡಿ ತಪಾಸಣೆ ಮಾಡಬೇಕೆಂದು ಬೆತ್ತಲೆಗೊಳಿಸಿ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೊಸ ಮಾದರಿಯಲ್ಲಿ ಸೈಬರ್ ಕ್ರೈಮ್ ಮಾಡುತ್ತಿದ್ದಾರೆ‌. ಮೇಲ್, ಮೆಸೇಜ್, ಕಾಲ್ಸ್ ಅಥವಾ ವಾಟ್ಸಪ್ ಮೂಲಕ ಒಂದು ಮೆಸೇಜ್ ಬರುತ್ತದೆ. ನಾವು ಕ್ರೈಮ್ ಬ್ರ್ಯಾಂಚ್ ದಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರು ಕ್ರಿಮಿನಲ್ ಕೇಸ್ ನಲ್ಲಿ ಬಂದಿದೆ. ನೀವು ನಮ್ಮ ಹತ್ತಿರ ಬರಬೇಕು ರಿಪೋರ್ಟ್ ಕೊಡಬೇಕು. ಯಾಕೆ ನೀವು ಈ ರೀತಿ ಮಾಡಿದ್ದೀರಿ ಎಂದು ಹೆದರಿಸಿ ನಾವೀಗ ನಿಮ್ಮನ್ನು ವಿಚಾರಣೆ ಮಾಡಬೇಕು. 

Latest Videos

ಕಾರವಾರ: ಗಣೇಶನ ಪೂಜೆ ವೇಳೆ ದೇವರಿಗಿಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ!

ಕ್ಯಾಮರಾ ಮುಂದೆ ನೀವು ಬನ್ನಿ, ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಮ್ ಬಗ್ಗೆ ನಿಮ್ಮ ಕುಟುಂಬದವರಿಗೆ ಹೇಳುತ್ತೇವೆ. ಹೇಗೆ ಕ್ರೈಮ್ ಮಾಡಿದ್ದೀರಿ ಎಂದು ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು, ಬಟ್ಟೆ ಬಿಚ್ಚಬೇಕು ಎಂದು ಹೇಳುತ್ತಾರೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್‌ ಮಾಡುತ್ತಾರೆ. ಈ ರೀತಿಯ ಹೆದರಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಕರೆಗಳು ಬಂದು ಬ್ಲ್ಯಾಕ್ ಮೇಲ್ ಮಾಡಿದ್ರೇ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ. ಪೊಲೀಸರು, ಕ್ರೈಂ ಬ್ರ್ಯಾಂಚ್ ಎಂದು ಕರೆ ಮಾಡುವವರಿಗೆ ಸ್ಪಂದಿಸದಂತೆ ಪೊಲೀಸ್ ಕಮಿಷನರ್ ಮನವಿ ಮಾಡಿದ್ದಾರೆ. 

click me!