
ಬೆಂಗಳೂರು (ಮೇ.26): ಬೆಂಗಳೂರಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಬಾಡಿಗೆ ಮನೆ ನೋಡೋ ನೆಪದಲ್ಲಿ ಬಂದು ಒಂಟಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಇಬ್ಬರು ಮಹಿಳೆಯರು ದರೋಡೆ ಮಾಡಿದ್ದಾರೆ. ಮಹಿಳೆಯ ತಲೆಗೆ ಹೊಡೆದು ಒಡವೆ ಮತ್ತು ಮನೆಯಲ್ಲಿದ್ದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ನಗರದ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಗ್ಗೆರೆಯ ಪಾರ್ವತಿನಗರದಲ್ಲಿ ಶಾಂತಮ್ಮ ಎಂಬವರು ಒಬ್ಬರೇ ವಾಸವಾಗಿದ್ದರು. ಶಾಂತಮ್ಮರ ಪತಿ ಕೋವಿಡ್ ನಿಂದ ಮೃತ ಪಟ್ಟಿದ್ದರು ನಂತರ ಒಬ್ಬರೇ ವಾಸವಿದ್ದರು. ಶಾಂತಮ್ಮ ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದ್ದು, ಇನ್ನೆರಡು ಖಾಲಿ ಇತ್ತು. ಖಾಲಿ ಇರುವ ಮನೆ ಬಾಡಿಗೆಗೆ ಬೇಕು ಎಂದು ಇಬ್ಬರು ಮಹಿಳೆಯರು ಬಂದಿದ್ದರು.
ಐಪಿಎಲ್ ಬೆಟ್ಟಿಂಗ್ ವಿಚಾರಕ್ಕೆ ಕಿರಿಕ್, ಮರದ ತುಂಡಿನಿಂದ ಹೊಡೆದು ಸ್ನೇಹಿತರಿಂದಲೇ ಯುವಕನ ಕೊಲೆ!
ಹೀಗಾಗಿ ಕಳೆದ 15 ದಿನಗಳಿಂದ ಪದೇ ಪದೇ ಬಂದು ಶಾಂತಮ್ಮನನ್ನು ಪರಿಚಯ ಮಾಡಿಕೊಂಡಿದ್ದರು. ಪರಿಚಯದ ನೆಪದಲ್ಲಿ ಏರಿಯಾದಲ್ಲಿ ಯಾರು ಯಾವ ಸಮಯಕ್ಕೆ ಇತ್ತಾರೆ ಎಂದು ಇಬ್ಬರೂ ವಿಚಾರಿಸಿಕೊಂಡು ಗಮನಿಸಿದ್ದಾರೆ. ಶಾಂತಮ್ಮನ ಬಳಿಯೇ ಎಲ್ಲಾ ಮಾಹಿತಿ ಪಡೆದು ಸ್ಕೆಚ್ ಹಾಕಿದ್ದಾರೆ. ಶಾಂತಮ್ಮ ಒಬ್ಬರೇ ವಾಸ ಮಾಡುತ್ತಿರುವುದು ತಿಳಿದು ಇವರು ಕೃತ್ಯ ಎಸಗಿದ್ದಾರೆ.
Bengaluru: ಎಣ್ಣೆ ಪಾರ್ಟಿಯಲ್ಲಿ ಗುರಾಯಿಸಿದ್ದಕ್ಕೆ ಕಲ್ಲು ಎತ್ತಿ ಹಾಕಿ ಗೆಳೆಯರಿಂದಲೇ ಚಾಲಕನ ಕೊಲೆ
ಮೇ.26ರಂದು ಮನೆಗೆ ಬಂದು ಹಾಲು ಉಕ್ಕಿಸೋದಾಗಿ ಹೇಳಿಕೊಂಡಿದ್ದಾರೆ. ಅದರಂತೆ ಇಂದು ಮನೆಗೆ ಬಂದಿದ್ದ ಮಹಿಳೆಯರಿಗೆ ಶಾಂತಮ್ಮ ಕಾಫಿ ಕೂಡ ಮಾಡಿಕೊಟ್ಟಿದ್ದಾರೆ. ನಂತರ ಬಾಡಿಗೆ ಮನೆ ಒಳಗೆ ಶಾಂತಮ್ಮ ಮತ್ತು ಇಬ್ಬರು ಮಹಿಳೆಯರು ಹೋಗಿದ್ದಾರೆ. ಈ ವೇಳೆ ದೇವರ ಫೋಟೋ ಹಾಕಲು ಮಹಿಳೆಯರು ಜಾಗ ಕೇಳಿದ್ದು, ಇದೇ ಸಮಯವನ್ನು ಉಪಯೋಗಿಸಿಕೊಂಡು ತಲೆಗೆ ಬಲವಾಗಿ ಹಲ್ಲೆ ನಡೆಸಿ ಮೈ ಮೇಲೆ ಇದ್ದ ಚಿನ್ನಭರಣ ದೋಚಿ ಪರಾರಿಯಾಗಿದ್ದಾರೆ. ಸದ್ಯ ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಶಾಂತಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ