ಚಾಮರಾಜನಗರ(ಎ.26): ಪತಿ ಹಾಗು ನಾದಿನಿಯಿಂದ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ (suicide b) ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜೆಎಸ್ಎಸ್ ಆಸ್ಪತ್ರೆಯಲ್ಲಿ (JSS Hospital) ಫಿಸಿಯೋ ಥೆರಪಿಸ್ಟ್ ಆಗಿದ್ದ 32 ವರ್ಷದ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಇವರ ಶವ ಮಂಡ್ಯ (Mandya) ಜಿಲ್ಲೆ ಬೆಳಕವಾಡಿ ಬಳಿ ಹರಿಯುವ ಕಾವೇರಿ ನದಿಯಲ್ಲಿ (cauvery river) ಶವ ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿಯಾಗಿದ್ದ ನಾಗವೇಣಿ ಶನಿವಾರ ಕಾಣೆಯಾಗಿದ್ದರು ಈ ಬಗ್ಗೆನಾಗವೇಣಿ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಪತ್ನಿಯ ಶೀಲಶಂಕಿಸಿ ಪತಿ ಸ್ವಾಮಿನಾಯಕ ಅವರು ನಾಗವೇಣಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
undefined
ಈ ಬಗ್ಗೆ ನಾಗವೇಣಿ ಅವರು ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ಸೂಪರ್‌ವೈಸರ್ ಆಗಿರುವ ಸ್ವಾಮಿನಾಯಕ ಹಾಗು ಅವರ ಸಹೋದರಿ ಸಂತೇಮರಹಳ್ಳಿ ಮೋಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಭಾಗ್ಯ ಅವರು ನಾಗವೇಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ನಾಗವೇಣಿ ಮನೆ ಬಿಟ್ಟು ಹೋಗಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗವೇಣಿ ಪೋಷಕರು
ನಾಗವೇಣಿಯ ಪತಿ ಸ್ವಾಮಿನಾಯಕ್ ಹಾಗು ನಾದಿನಿ ಭಾಗ್ಯ ವಿರುದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೋಕಿನ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MANDYA ಹೈವೋಲ್ಟೇಜ್ ನಾಗಮಂಗಲ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ, ಶಿವರಾಮೇಗೌಡ ಭರ್ಜರಿ ಸಿದ್ದತೆ
ಸಿನಿಮಾ ಗ್ರೂಪ್ ಡ್ಯಾನ್ಸರ್ ಮಾತು ಕೇಳಿ ಹೋಟೆಲ್‌ಗೆ ಹೋದ ಅಪ್ರಾಪ್ತೆಯ ರೇಪ್!: ಅಪ್ರಾಪ್ತ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಿನಿಮಾ ಗ್ರೂಪ್ ಡ್ಯಾನ್ಸರ್ ಸೇರಿದಂತೆ ಮೂವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಚೆನ್ನೈನ ಅರುಂಬಕ್ಕಂನ 14 ವರ್ಷದ ಶಾಲಾ ಬಾಲಕಿಗೆ ಅದೇ ಪ್ರದೇಶದ ಜಯಸೂರ್ಯ ಜೊತೆ ಪರಿಚಯವಾಗಿದ್ದಳು. ಜಯಸೂರ್ಯ ತಾನು ಚಿತ್ರರಂಗದಲ್ಲಿ ಗ್ರೂಪ್ ಡ್ಯಾನ್ಸರ್ ಎಂದು ಪರಿಚಯಿಸಿಕೊಂಡಿದ್ದಾನೆ ಹಾಗೂ ತಾನು ಆ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿದ್ದಾನೆ. ನಂತರ ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ತನ್ನೊಂದಿಗೆ ಇರುವಂತೆ ಮಾಡಿ ಅತ್ಯಾಚಾರ ಎಸಗಿದ್ದಾನೆ.
ಏತನ್ಮಧ್ಯೆ, ಆಕೆಯ ತಾಯಿ ಕಾಣೆಯಾದ ವ್ಯಕ್ತಿಯ ದೂರನ್ನು ನೀಡಿದ ನಂತರ ಅರುಂಬಕ್ಕಂ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವಕರು ನಿತ್ಯವೂ ಹೆಣ್ಣು ಮಕ್ಕಳನ್ನು ಈ ಹೋಟೆಲ್‌ಗೆ ಕರೆತಂದು ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಅವರು ಜಯಸೂರ್ಯ ಮತ್ತು ಆತನಿಗೆ ಸಹಾಯ ಮಾಡಿದ ಇತರ ಇಬ್ಬರನ್ನು ಬಂಧಿಸಿದ್ದು ಮತ್ತು ಮೂವರನ್ನೂ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
Vijayapura ಬೇಸಿಗೆ ಬಿಸಿಗಾಳಿ-ಸಿಡಿಲು ನಿಭಾಯಿಸಲು ಜನತೆಗೆ ಸಲಹೆ ನೀಡಿದ ಹೊಸ
ಅಪ್ರಾಪ್ತ ಬಾಲಕಿಯ ಅಪಹರಣ, ಮದುವೆಯಾಗಿ ದೈಹಿಕ ಸಂಪರ್ಕ!: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ದೈಹಿಕ ಸಂಬಂಧ ಬೆಳೆಸಿದ ಆರೋಪಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
28 ವರ್ಷದ ಮಹೇಶ ಎಂಬ ವ್ಯಕ್ತಿ ಕಳೆದ 2019ರ ಮಾರ್ಚ್ 7ರಂದು 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿಕೊಂಡು ಮದುವೆಯಾಗಿ ನಂತರ ಬೆಂಗಳೂರಿಗೆ ತೆರಳಿ ಬಾಲಕಿಯೊಂದಿಗೆ ದೈಹಿಕ ಸಂಬಂಧ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆ ವಿಚಾರಣೆ ನಡೆದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾ. ಬಿ.ಎಸ್.ಭಾರತಿ ಅವರು ಆರೋಪಿತ ವ್ಯಕ್ತಿಗೆ ಶಿಕ್ಷೆ ವಿಧಿಸಿದೆ.