ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್: ಮಹಿಳೆ ಅಂದರ್

Published : Mar 06, 2021, 10:53 PM IST
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್:  ಮಹಿಳೆ ಅಂದರ್

ಸಾರಾಂಶ

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿಯ ಮಧ್ಯೆ ನಗ್ನ ವಿಡಿಯೋ ತೋರಿಸಿ  ಬ್ಲ್ಯಾಕ್​ಮೇಲ್  ಮಾಡುತ್ತಿದ್ದ ಯುವತಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಕೊಪ್ಪಳ, (ಮಾ.06): ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
  
 ಹೊಸಪೇಟೆಯಲ್ಲಿ ಗೀತಾ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆ ಕೊಪ್ಪಳ ಮೂಲದ ಉದ್ಯಮಿ ಸುಬ್ಬಾರೆಡ್ಡಿಯನ್ನು ಪರಿಚಯಿಸಿಕೊಂಡಿದ್ದರು. ಸುಬ್ಬಾರೆಡ್ಡಿ ಪರಿಚಯಿಸಿಕೊಂಡು ಮನೆಗೆ ಕರೆಸಿಕೊಂಡಿದ್ದರು. ಚಹಾದಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ್ದರು. ಬಳಿಕ, ನಗ್ನ ವಿಡಿಯೊ ಮಾಡಿದ್ದರು.

ಸ್ಕೂಲ್‌ನಲ್ಲಿ ವಿದ್ಯಾರ್ಥಿನಿ ಜೊತೆ ಸರಸ: ತನ್ನದೇ ಸೆಕ್ಸ್ ವಿಡಿಯೋ ಶೂಟ್ ಮಾಡಿದ ನಟ

ನಂತರ ಆ ವಿಡಿಯೊವನ್ನು ಉದ್ಯಮಿಗೆ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಈಗ ಮಹಿಳೆಯನ್ನು ಬಂಧಿಸಲಾಗಿದೆ. ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

30 ಲಕ್ಷಕ್ಕೆ ಬೇಡಿಕೆ
ಉದ್ಯಮಿ ಸುಬ್ಬಾರೆಡ್ಡಿಗೆ 30 ಲಕ್ಷ ನೀಡುವಂತೆ ಮಹಿಳೆ ಗೀತಾ ಬೇಡಿಕೆ ಇಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸುಬ್ಬಾರೆಡ್ಡಿ ಆನ್​ಲೈನ್​ನಲ್ಲಿ 15 ಲಕ್ಷ ವರ್ಗಾಯಿಸಿದ್ದರು. ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ತೆರಳಿ 4 ಬಂಗಾರದ ಬಳೆಗಳನ್ನು ಕದ್ದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಗೀತಾ ವಿರುದ್ಧ ಸುಬ್ಬಾರೆಡ್ಡಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಹೊಸಪೇಟೆಯಲ್ಲಿ ಗೀತಾ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೀದರ್: ಶೀಲ ಶಂಕಿಸಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ, ರಾತ್ರಿ ಇಡೀ ಜಗಳವಾಡಿ ಬೆಳಗ್ಗೆ ಕಲ್ಲು ಎತ್ತಿ ಹಾಕಿ ಕೊಂದ!
ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ, ದೇವರ ದರ್ಶನ ಪಡೆದ ನವಜೋಡಿ ಮನೆ ಸೇರಲೇ ಇಲ್ಲ!