ಕಾಫಿನಾಡಿನಲ್ಲಿ ಮಹಿಳೆಯ ಸಾವು ಸಹಜ ಅಲ್ಲ: ಸಾವಿನ ರಹಸ್ಯವನ್ನು ಭೇದಿಸಿದ ಪೊಲೀಸರು!

Published : May 01, 2025, 07:40 PM ISTUpdated : May 01, 2025, 07:56 PM IST
ಕಾಫಿನಾಡಿನಲ್ಲಿ ಮಹಿಳೆಯ ಸಾವು ಸಹಜ ಅಲ್ಲ: ಸಾವಿನ ರಹಸ್ಯವನ್ನು ಭೇದಿಸಿದ ಪೊಲೀಸರು!

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆ ಸಾವು ಸಹಜ ಅಲ್ಲ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.01): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆ ಸಾವು ಸಹಜ ಅಲ್ಲ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅಂತ್ಯಸಂಸ್ಕಾರಕ್ಕೆ ರೆಡಿಯಾಗ್ತಿದ್ದಂತೆ ಪೊಲೀಸರಿಗೆ ಬಂದ ಅನಾಮಧೇಯ ಕರೆಯಿಂದ ಕೊಲೆ ರಹಸ್ಯ ಹೊರಬಂದಿದೆ. ಮಹಿಳೆಯ ಸಾವಿನ ಸುದ್ದಿ ಇಡೀ ಊರಿನವ್ರಿಗೆ ಗೊತ್ತಾಯ್ತು.ಹೋಗಿ ಮುಖನಾದ್ರು ನೋಡೋಣ ಅಂತಾ ಬಂದಿದ್ರು ಊರಿನವ್ರು, ಸಂಬಂಧಿಕರು, ಮನೆಯವರಲ್ಲಿತ್ತು ದುಃಖ, ಸಾಂತ್ಚನ ಹೇಳುತ್ತಲೇ ಇನ್ನೇನೂ ಅಂತ್ಯ ಸಂಸ್ಕಾರಕ್ಕೆ ಹೊರಡೋ ಹೊತ್ತಲ್ಲಿ ಮನೆಯ ಮುಂದೆ ಬಂದಿದ್ದು ಪೊಲೀಸ್ ಜೀಪ್. ಆ ಒಂದು ಪೋನ್ ಕಾಲ್ ನ ಹಿಂದೆ ಹೊರಟ ಖಾಕಿಗೆ ಸಿಕ್ಕಿದ್ದು ಕೊಲೆಯ ರಹಸ್ಯ.

ಕೊಲೆ ಮಾಡಿ ಹೈಡ್ರಾಮಾ ಮಾಡಿದ್ದ ಪತಿರಾಯ: ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ಗ್ರಾಮದಲ್ಲಿ ಮೃತಪಟ್ಟ ಮಹಿಳೆ ಸಾವು ಸಹಜ ಅಲ್ಲ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬಂದಿದೆ. ಇದೇ ಗ್ರಾಮದ ನಿವಾಸಿ ಮಂಜುನಾಥ್ ಗಾರೆ ಕೆಲಸದ ಜೊತೆಗೆ ಆರ್ಚಕರವೃತ್ತಿದೊಂದಿಗೆ ಜೀವನ ನಡೆಸುತ್ತಿದ್ದ, 21 ವರ್ಷಗಳ ಹಿಂದೆ ಯಶೋಧ ಎನ್ನುವ ಮಹಿಳೆಯನ್ನು ಮದುವೆಯಾಗಿ 2 ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ.ಮಂಜುನಾಥ್ ಅಕ್ರಮ ಸಂಬಂಧದಿಂದ ಪತ್ನಿ ಯಶೋಧಾಳ(44 ವರ್ಷ )  ಕೊಲೆ ಮಾಡಿ ಸಹಜ ಸಾವು ಎಂದು ಹೈಡ್ರಾಮಾ ಸೃಷ್ಠಿ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. 

ಅಕ್ರಮ ಸಂಬಂಧಕ್ಕಾಗಿ ಲವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಈ ಕೊಲೆಯ ರಹಸ್ಯ ಬಯಲಾಗಿದ್ದೇ ರೋಚಕ. ಅದು ಪೊಲೀಸರಿಗೊಂದು ಬಂದ ಪೋನ್.ಇದೇ ಮನೆಯಲ್ಲಿ ಈ ಪೋಟೋದಲ್ಲಿರೋ ಮಂಜುನಾಥ್ ಪತ್ನಿ ಯಶೋಧ ಎಪ್ರಿಲ್ 25 ರಂದು ಸಾವನ್ನಪ್ಪಿದ್ಲು.ಅದು ಇಡೀ ಕುಟುಂಬ ಹಾಗೂ ಸಂಬಂಧಿಕರು ಅಂತಿಮದರ್ಶನ ಪಡೆದಿದ್ರು.ಇನ್ನೇನೂ ಸ್ವಲ್ಪ ಹೊತ್ತಲಿ ಅಂತ್ಯ ಸಂಸ್ಕಾರಕ್ಕೆ ಹೊರಡಬೇಕು ಅಷ್ಟರಲ್ಲಿ ಅಲ್ಲಿ ಎಂಟ್ರಿ ಕೊಟ್ಟಿದ್ದು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು..ಅದು ಯಾವುದೋ ಅನಾಮಧೇಯ ಪೋನ್ ಕರೆ ಮಾಡಿ  ಇದೊಂದು ಕೊಲೆ ಶಂಕೆ ಅನ್ನೋ ಆರೋಪವನ್ನು ಮಾಡಿದರು. ಇದನ್ನು ನಿರ್ಲಕ್ಷ್ಯ ಮಾಡಿದೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿರೋದು ಬಯಲು: ಇನ್ನೂ  ಏನೇ ಇರ್ಲಿ ಹೋಗಿ ನೋಡೋಣ ಅಂತಾ ಹೋಗಿದ್ದಾಗ ಪೊಲೀಸರಿಗೆ ಕತ್ತಿನ ಮೇಲಿದ್ದ ಮಾರ್ಕ್ ಅನುಮಾನ ಹುಟ್ಟಿಸಿದೆ.ಆಗ ಯಶೋಧ ತಂದೆಯಿಂದ ಕಂಪ್ಲೇಟ್ ಪಡೆಯುತ್ತಾರೆ ಅದು ಯುಡಿಆರ್.ಅದ್ರೆ ಅದ್ರಲ್ಲಿ ಅನುಮಾನವಿದೆ ಎಂಬ ಪದವೂ ದೂರಿನಲ್ಲಿತ್ತು.ಚಿಕ್ಕಮಗಳೂರಿನಲ್ಲಿ ಪಿಎಂ ಮಾಡಿಸದೇ ಹಾಸನಕ್ಕೆ ಮೃತದೇಹ ರವಾನೆ ಮಾಡಿ ಅಲ್ಲಿನ ವೈದ್ಯ ತಜ್ಞರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತೇ.ಎರಡು ದಿನ ನಂತರ ಒಂದಂತೂ ಆ ಪೋನ್ ಕರೆಗೂ ಅಲ್ಲಿ ನಡೆದಿದ್ದ ಘಟನೆಗೂ ಟ್ಯಾಲಿ ಅಗುತ್ತೇ.

ತಮ್ಮ ಊರಿನ ಪಾತ್ರೆಗಳನ್ನ ಪಕ್ಕದ ಊರಿನವರಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ: ಅವರ ಮನೆಗೆ ಹೋದರೆ 5000 ದಂಡ

ಉಸಿರು ಕಟ್ಟಿಸಿ ಕೊಲೆ ಮಾಡಿರೋದು ದೃಡ ಪಡ್ತಿದ್ದಂತೆ ಮಂಜುನಾಥ್ ನನ್ನ ಅರೆಸ್ಟ್ ಮಾಡಿದ್ದಾರೆ ಪೊಲೀಸರು.ಇದ್ರ ಹಿಂದೆ ಅಕ್ರಮ ಸಂಬಂದ ಮಂಜುನಾಥ್ ಗಿರೋದು ತನಿಖೆಯಲ್ಲಿ ಗೊತ್ತಾಗ್ತಿದ್ದು ಇನ್ನಷ್ಟು ಆಳವಾಗಿ ತನಿಖೆ ನಡೆಸೋಕೆ ಪೊಲೀಸರು ಮುಂದಾಗಿದ್ದಾರೆ.ಒಟ್ಟಾರೆ ಕುಟುಂಬದಲ್ಲಿಯೂ ಯಾರೊಬ್ಬರಿಗೂ ಕೊಲೆ  ನಡೆದಿದೆ ಎನ್ನುವ ಅನುಮಾನವೂ ಇರ್ಲಿಲ್ಲ,ಆದ್ಯಾರೋ ಅಂತಿಮ ದರ್ಶನ ಪಡೆಯಲು ಬಂದವರಿಗೆ ಕಾಣಿಸಿದ ಆ ಒಂದು ಮಾರ್ಕ್ ನಿಂದ ಕೊಲೆ ರಹಸ್ಯ ಬಯಲಾಗಿದೆ. ಸಹಜ ಸಾವು ಎಂದು ಮುಚ್ಚಿ ಹೋಗ್ತಿದ್ದ ಕೊಲೆ ಕೇಸ್ ಆ ಪೋನ್ ಕರೆಯಿಂದ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ