ಆನ್‌ಲೈನ್‌ ಡೇಟಿಂಗ್ ಮಾಡೋರೇ ಹುಷಾರ್‌: ಎಣ್ಣೆಗೆ ಮತ್ತು ಬೆರೆಸಿ ಚಿನ್ನ, ಐಫೋನ್‌, ಲಕ್ಷ ಲಕ್ಷ ಹಣದೊಂದಿಗೆ ಮಹಿಳೆ ಎಸ್ಕೇಪ್‌!

By BK Ashwin  |  First Published Oct 14, 2023, 3:20 PM IST

ಬಂಬಲ್‌ ಡೇಟಿಂಗ್ ಹೆಸರಲ್ಲಿ ಮಹಿಳೆಯನ್ನು ಯುವಕ ಮನೆಗೆ ಕರೆತಂದಿದ್ದರೆ, ಆಕೆ ಮೊಬೈಲ್‌, ಹಣ, ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.  


ಗುರುಗ್ರಾಮ್‌ (ಅಕ್ಟೋಬರ್ 14, 2023): ಶಾಶ್ವತವಾದ ನೆನಪುಗಳನ್ನು ಸೃಷ್ಟಿಸುವ ಭರವಸೆಯೊಂದಿಗೆ ಯುವಕನ ಆನ್‌ಲೈನ್‌ ಡೇಟ್‌ ಆತಂಕಕಾರಿ ತಿರುವು ಪಡೆದುಕೊಂಡಿದೆ. ಸಂತೋಷದ ಅನುಭವದ ಬದಲು ಆತನ ಡೇಟಿಂಗ್ ದುಃಖದ ಅನುಭವವಾಯಿತು. ಈ ದುರದೃಷ್ಟಕರ ಘಟನೆಯು ಹರ್ಯಾಣದ ಗುರುಗ್ರಾಮ್‌ನಲ್ಲಿ ವರದಿಯಾಗಿದೆ.

ಬಂಬಲ್‌ ಡೇಟಿಂಗ್ ಹೆಸರಲ್ಲಿ ಮಹಿಳೆಯನ್ನು ಯುವಕ ಮನೆಗೆ ಕರೆತಂದಿದ್ದರೆ, ಆಕೆ ಮೊಬೈಲ್‌, ಹಣ, ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.  ತನ್ನ ಡಿಎಲ್‌ಎಫ್ 4ನೇ ಹಂತದ ನಿವಾಸದಲ್ಲಿ ತನಗೆ ಮಾದಕ ವಸ್ತು ನೀಡಿ ತನ್ನ ಮೊಬೈಲ್ ಫೋನ್, ಬೆಲೆಬಾಳುವ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿದ್ದಳು ಮತ್ತು ಬ್ಯಾಂಕ್ ಖಾತೆಗಳ ಮೂಲಕ ತನ್ನಿಂದ ₹ 1.78 ಲಕ್ಷ ದುಡ್ಡನ್ನು ಕಸಿದುಕೊಂಡಿದ್ದಾಳೆ ಎಂದೂ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. 

Latest Videos

undefined

ಇದನ್ನು ಓದಿ: ಸಾಯಲು ಬಂದ ಹೆಂಡ್ತಿ ಸಮಾಧಾನಪಡಿಸಲು ರೈಲ್ವೆ ಹಳಿಯಲ್ಲಿ ತಬ್ಬಿಕೊಂಡ ಪತಿ: ವಿಧಿ ಬಯಸಿದ್ದೇ ಬೇರೆ..

ರೋಹಿತ್‌ ಗುಪ್ತಾ ಬಂಬಲ್ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಸಾಕ್ಷಿ ಅಥವಾ ಪಾಯಲ್‌ ಎಂದೂ ಕರೆಯಲ್ಪಡುವ ಮಹಿಳೆಯನ್ನು ಭೇಟಿಯಾಗಿದ್ದಾಗಿ ತನ್ನ ಅಧಿಕೃತ ದೂರಿನಲ್ಲಿ ವಿವರಿಸಿದ್ದಾನೆ. ತನ್ನ ಊರು ದೆಹಲಿಯಾಗಿದ್ದು, ಚಿಕ್ಕಮ್ಮನೊಂದಿಗೆ ಗುರುಗ್ರಾಮ್‌ನಲ್ಲಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆಂದೂ ರೋಹಿತ್‌ ಗುಪ್ತಾ ತಿಳಿಸಿದ್ದಾನೆ. 

"ಅಕ್ಟೋಬರ್ 1 ರಂದು, ಅವಳು ನನಗೆ ಕರೆ ಮಾಡಿ ನನ್ನನ್ನು ಭೇಟಿಯಾಗಬೇಕೆಂದು ಹೇಳಿದಳು. ರಾತ್ರಿ 10 ಗಂಟೆಯ ಸುಮಾರಿಗೆ, ಸೆಕ್ಟರ್ 47 ರ ಡಾಕ್ಯಾರ್ಡ್ ಬಾರ್ ಬಳಿಯಿಂದ ಪಿಕಪ್‌ ಮಾಡಲು ನನಗೆ ಕರೆದಳು. ನಾನು ಅವಳನ್ನು ಕರೆದುಕೊಂಡು ಹತ್ತಿರದ ಅಂಗಡಿಯಿಂದ ಸ್ವಲ್ಪ ಮದ್ಯವನ್ನು ಖರೀದಿಸಿ ನನ್ನ ಮನೆಗೆ ಬಂದೆ’’ ಎಂದು ರೋಹಿತ್‌ ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್‌!

ಮಹಿಳೆ ಐಸ್ ತರಲು ತನ್ನ ಮನೆಯ ಅಡುಗೆಮನೆಗೆ ಹೋಗುವಂತೆ ಕೇಳಿದಳು, ಮತ್ತು ತಾನು ದೂರ ಇದ್ದಾಗ ಡ್ರಿಂಕ್ಸ್‌ನಲ್ಲಿ ಯಾವುದೇ ಮಾದಕ ದ್ರವ್ಯವನ್ನು ಅದಕ್ಕೆ ಸೇರಿಸಿದ್ದಾಳೆ. ಡ್ರಗ್ಸ್‌  ಪರಿಣಾಮವು ತುಂಬಾ ತೀವ್ರವಾಗಿತ್ತು, ನಾನು ಅಕ್ಟೋಬರ್ 3 ರಂದು ಬೆಳಗ್ಗೆ ಎದ್ದೆ. ಆಗ ಮಹಿಳೆ ಕಾಣೆಯಾಗಿದ್ದು, ನನ್ನ ಚಿನ್ನದ ಸರ, ಐಫೋನ್ 14 ಪ್ರೋ, 10,000 ರೂ. ನಗದು ಮತ್ತು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳು ಕಾಣೆಯಾಗಿತ್ತು.

ಅಲ್ಲದೆ, ನನ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ  1.78 ಲಕ್ಷ ರೂ. ಹಿಂಪಡೆಯಲಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ" ಎಂದೂ ರೋಹಿತ್‌ ಗುಪ್ತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆ ಇನ್ನೂ ತಲೆಮರೆಸಿಕೊಂಡಿದ್ದು, ಆಕೆಯ ವಿರುದ್ಧ ಮಂಗಳವಾರ ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ದನ್ನು ಓದಿ: ಹೊಸಕೋಟೆ ಬಿರಿಯಾನಿ ಹೋಟೆಲ್‌ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!

click me!