Chikkaballapur Crime: ಮದುವೆಗೆ ಬಂದು ಒಡವೆ ಎಗರಿಸಿದ ಮಹಿಳೆ

By Kannadaprabha News  |  First Published Feb 23, 2022, 11:57 AM IST

*  ಮಹಿಳೆ ವಿರುದ್ಧ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು
*  ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣ ಕಳ್ಳತನ 
*  ಜಾನಕಮ್ಮ ಎಂಬ ಮಹಿಳೆ ವಿರುದ್ಧ ದೂರು 


ಚಿಕ್ಕಬಳ್ಳಾಪುರ(ಫೆ.23): ಮದುವೆ(Marriage) ಆಗಮಿಸಿದ್ದ ವೇಳೆ ಮಹಿಳೆಯೊಬ್ಬಳು(Women) ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣಗಳನ್ನು(Gold) ಕದ್ದು ಎಸ್ಕೇಪ್‌ ಆಗಿರುವ ಘಟನೆ ನಡೆದಿದ್ದು ಈ ಸಂಬಂದ ಚಿನ್ನಾಭರಣ ಕಳೆದುಕೊಂಡ ಕುಟುಂಬಸ್ಥರು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ(Police) ದೂರು ನೀಡಿದ್ದಾರೆ.

ಚಿಂತಾಮಣಿ ನಗರದ ಅಂಜನಿ ಬಡಾವಣೆ ನಿವಾಸಿ ಗೀತಾ.ಎಂ.ವಿ. ಕೋಂ ರಘುರಾಮರೆಡ್ಡಿ.ಬಿ.ವಿ, (48) ಫೆ.18 ರಂದು ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮದ ಶ್ರೀ ಯೋಗಿ ನಾರಾಯಣ ಸಭಾಂಗಣದಲ್ಲಿ ಬೆಳಗಿನ ಸಮಯದ 3 ರಿಂದ 4 ರ ಸಮಯದಲ್ಲಿ ಮದುವೆ ಶಾಸ್ತ್ರವನ್ನು ಮಾಡುತ್ತಿದ್ದಾಗ, ಇದೇ ಚಿಂತಾಮಣಿ ನಗರದ ಡೆಕ್ಕನ್‌ ಆಸ್ಪತ್ರೆಯ ಬಳಿ ವಾಸವಾಗಿರುವ ಶಿವಣ್ಣ ಪತ್ನಿ 35 ವರ್ಷದ ಜಾನಕಮ್ಮ ಈ ಸಮಯದಲ್ಲಿ ಇವರು ಮಾತ್ರ ರೂಂನಲ್ಲಿದ್ದು, ನನಗೆ ಸೇರಿದ ಒಂದು ನಕ್ಲೇಸ್‌ ಹಾಗೂ ಒಂದು ಜೊತೆ ಓಲೆ ಇದರ ಒಟ್ಟು 45 ಗ್ರಾಂ ಇರುತ್ತದೆ. ಜಾನಕಮ್ಮ ರವರೇ ಕಳ್ಳತನ(Theft) ಮಾಡಿಕೊಂಡು ಹೋಗಿರುಬಹುದೆಂದು ಗುಮಾನಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tap to resize

Latest Videos

Bengaluru Crime: ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಆ ಸಮಯದಲ್ಲಿ ಆ ರೂಂನಲ್ಲಿ ಬೇರೆ ಯಾರೇ ಯಾಗಲೀ ಇರಲಿಲ್ಲ. ಇದರ ಮೌಲ್ಯ 2,25 ಲಕ್ಷ ರು, ಆಗಿರುತ್ತದೆ. ನಾನು ರೂಂನ ಬ್ಯಾಗ್ನಲ್ಲಿ ನನ್ನ ಸ್ವತ್ತುಗಳನ್ನು ಇಡುತ್ತಿದ್ದಾಗ ಜಾನಕಮ್ಮ ಇದ್ದು, ನಾವುಗಳು ರೂಂನಲ್ಲಿ ನನ್ನ ಸ್ವತ್ತುಗಳನ್ನು ಹುಡುಕುತ್ತಿದ್ದಾಗ ಆ ಸ್ಥಳದಿಂದ ಜಾನಕಮ್ಮ ಪರಾರಿಯಾಗಿದ್ದಾರೆಂದು ಗೀತಾ ತನ್ನ ದೂರಿನಲ್ಲಿ ವಿವರಿಸಿದ್ದಾರೆ.

ಸ್ನೇಹಿತೆಯ ಮನೆಗೇ ಕನ್ನ ಹಾಕಿದ್ದ ಖದೀಮರ ಬಂಧನ

ಬೆಂಗಳೂರು: ಸ್ನೇಹಿತೆಯೇ ಮನೆಯಲ್ಲೇ ಚಿನ್ನಾಭರಣ ಕಳವು(Theft) ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದ ಘಟನೆ ಫೆ.11 ರಂದು ನಡೆದಿತ್ತು. ರಾಜಗೋಪಾಲನಗರದ ಬಸವರಾಜು(25), ಮನು ಅಲಿಯಾಸ್‌ ಮನೋಜ್‌(22) ಮತ್ತು ವಿಜಯ್‌(19) ಬಂಧಿತರು(Accused). ಆರೋಪಿಗಳಿಂದ 4.50 ಲಕ್ಷ ರು. ಮೌಲ್ಯದ 103 ಗ್ರಾಂ ತೂಕದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇದೇ ಪ್ರಕರಣದ ಆರೋಪಿ ನವೀನ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳು ಇತ್ತೀಚೆಗೆ ಮುನೇಶ್ವರ ಲೇಔಟ್‌ನ ತಿಗಳರಪಾಳ್ಯ ಮುಖ್ಯರಸ್ತೆಯ ಜಯಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Battery Theft: ಸಿಗ್ನಲ್‌ಗಳ ಬ್ಯಾಟರಿ ಕದಿಯುತ್ತಿದ್ದ ಚಾಲಾಕಿ ದಂಪತಿ ಸೆರೆ

ನಾಲ್ವರು ಆರೋಪಿಗಳು ಜಯಲಕ್ಷ್ಮಮ್ಮ ಅವರ ಪುತ್ರಿ ರಮ್ಯಾಳ ಸ್ನೇಹಿತರಾಗಿದ್ದರು. ರಮ್ಯಾಳ ಕಾಲೇಜು ಬಳಿ ಆಗಾಗ ಸೇರುತ್ತಿದ್ದರು. ಮನೆಯಲ್ಲಿ ಜಯಲಕ್ಷ್ಮಮ್ಮ ಹಾಗೂ ಅವರ ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದು ರಮ್ಯಾಳನ್ನು ಭೇಟಿಯಾಗಿ ಹೋಗುತ್ತಿದ್ದರು. ಈ ವೇಳೆ ರಮ್ಯಾಳ ಗಮನಕ್ಕೆ ಬಾರದಂತೆ ಅವರ ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ಕದ್ದಿದ್ದರು. ಇತ್ತೀಚೆಗೆ ಜಯಲಕ್ಷ್ಮಮ್ಮ ಅವರ ಎರಡನೇ ಪುತ್ರಿ ಮದುವೆ ಸಮಾರಂಭಕ್ಕೆ ತೆರಳಲು ಒಡವೆಗಳನ್ನು ಕೇಳಿದ್ದಾರೆ. ಈ ವೇಳೆ ಮನೆಯ ಬೀರು ನೋಡಿದಾಗ ಒಡವೆ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಜಯಲಕ್ಷ್ಮಮ್ಮ ಅವರು ನಾವು ಮನೆಯಲ್ಲಿ ಇಲ್ಲದಿರುವಾಗ ಮನೆಗೆ ಯಾರಾದರೂ ಬಂದಿದ್ದರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ರಮ್ಯಾಳ ಸ್ನೇಹಿತರಾದ ಆರೋಪಿಗಳು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಳು. ಈ ಸಂಬಂಧ ಜಯಲಕ್ಷ್ಮಮ್ಮ ಠಾಣೆಗೆ ದೂರು(Complaint) ನೀಡಿದ್ದರು.

ಕದ್ದ ಆಭರಣ ಮಾರಾಟ

ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ಜಿ.ರವಿಕುಮಾರ್‌ ನೇತೃತ್ವದ ತಂಡ ರಮ್ಯಾಳ ಸ್ನೇಹಿತರಾದ ಬಸವರಾಜು, ಮನು ಮತ್ತು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಒಡವೆ ಕದ್ದಿದ್ದು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಮೂವರು ಆರೋಪಿಗಳ ಪೈಕಿ ಬಸವರಾಜು ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು(Jail) ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಬಳಿಕವೂ ಆರೋಪಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ.
 

click me!