
ಬೆಂಗಳೂರು(ಫೆ.23): ತೃತೀಯ ಲಿಂಗಿ(Transgender) ಜತೆಗಿನ‘ ಸಂಬಂಧ’ಕ್ಕೆ ಆಕ್ಷೇಪಿಸಿದ ಗೆಳೆಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ(Assalut) ನಡೆಸಿ ಹತ್ಯೆಗೆ ಯತ್ನಿಸಿದವರನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ.
ಎ.ಕೆ.ಕಾಲೋನಿಯ ಪ್ರವೀಣ್ ಅಲಿಯಾಸ್ ಪುಣೆ ಹಾಗೂ ಸುರೇಶ್ ಬಂಧಿತರಾಗಿದ್ದು(Arrest), ಟ್ಯಾನರಿ ರಸ್ತೆಯಲ್ಲಿ ತಮ್ಮ ಗೆಳೆಯ ಸ್ಯಾಮುಯಲ್ ಮೇಲೆ ಆರೋಪಿಗಳು(Accused) ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸ್ಯಾಮುಯಲ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Kidnap Case: ಆಶ್ರಯ ನೀಡುವ ನೆಪದಲ್ಲಿ ನವಜಾತು ಶಿಶು ಅಪಹರಿಸಿದ ಸ್ವಾಮೀಜಿ: ಮೂವರ ವಿರುದ್ಧ ಪ್ರಕರಣ
ಎ.ಕೆ.ಕಾಲೋನಿಯಲ್ಲಿ ನಿವಾಸಿಗಳಾಗಿರುವ ಆರೋಪಿ ಹಾಗೂ ಗಾಯಾಳು ಸ್ನೇಹಿತರಾಗಿದ್ದು, ಇತ್ತೀಚಿಗೆ ಕ್ಷುಲ್ಲಕ ವಿಚಾರವಾಗಿ ಮನಸ್ತಾಪ ಮಾಡಿಕೊಂಡಿದ್ದರು. ತೃತೀಯ ಲಿಂಗಿ ಶೇಷಾದ್ರಿ ಜತೆ ಆರೋಪಿ ಪ್ರವೀಣ್ ಸಂಬಂಧ ಹೊಂದಿದ್ದು, ಇದಕ್ಕೆ ಸ್ಯಾಮುಯಲ್ ಆಕ್ಷೇಪವಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಈ ವೈಮನಸ್ಸು ಹಿನ್ನೆಲೆಯಲ್ಲಿ ಗೆಳೆಯನ ಹತ್ಯೆಗೆ ಪ್ರವೀಣ್ ನಿರ್ಧರಿಸಿದ್ದ. ಅಂತೆಯೇ ಟ್ಯಾನರಿ ರಸ್ತೆಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹೋಟೆಲ್‌ನಲ್ಲಿ ಟೀ ಕುಡಿಯುತ್ತ ನಿಂತಿದ್ದ ಸ್ಯಾಮುಯಲ್ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ. ಹೋಟೆಲ್‌ನಿಂದ ರಸ್ತೆಗೆ ಎಳೆದು ತಂದು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.
ತಕ್ಷಣವೇ ಗಾಯಾಳು ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಂಡತಿ ಹಾಗೂ ಅತ್ತೆಯನ್ನು ಎಳನೀರಿನಂತೆ ಕತ್ತರಿಸಿದ ಆರೋಪಿ!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಭೀಕರ ಜೋಡಿ ಕೊಲೆಗೆ (Double Murder) ಸಾಕ್ಷಿಯಾಗಿದೆ. ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಈ ವೇಳೆ ಅಡ್ಡ ಬಂದ ಅತ್ತೆಯ ಕಥೆಯನ್ನೂ ಮುಗಿಸಿದ್ದಾನೆ. ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೂಡಲಪಾಳ್ಯದಲ್ಲಿ(Moodalapalya) ಘಟನೆ ನಡೆಸಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (Govindaraja Nagar Police Station) ಪ್ರಕರಣ ದಾಖಲಾಗಿದೆ.
Bengaluru Crime: ಬೈಕ್ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್ ಕಳ್ಳನ ಸೆರೆ
37 ವರ್ಷದ ಸಾವಿತ್ರಿ (Savithri) ಹಾಗೂ 60 ವರ್ಷ ವಯಸ್ಸಿನ ಸರೋಜಮ್ಮ(Sarojamma) ಮೃತರಾದವರು. ಸಾವಿತ್ರಿಯ ಪತಿ 47 ವರ್ಷದ ರವಿಕುಮಾರ್ (Ravikumar) ಅವರನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ಗೋವಿಂದರಾಜನಗರ ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಮೂಲದ ದಂಪತಿಗಳು ಕಳೆದ 18 ವರ್ಷದ ಹಿಂದೆ ವಿವಾಹವಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಮೂಡಲಪಾಳ್ಯಕ್ಕೆ ಬಂದು ಇಲ್ಲಿ ವಾಸವಾಗಿದ್ದರು. ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತದ್ದ ಆರೋಪಿ ರವಿಕುಮಾರ್, ಮೂಡಲಪಾಳ್ಯಕ್ಕೆ ಬಂದ ಬಳಿಕ ಬೇಕರಿಯೊಂದನ್ನು ಆರಂಭಿಸಿ ಅದರ ವ್ಯವಹಾರದಲ್ಲಿ ನಿರತರಾಗಿದ್ದರು.
ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಪ್ರತಿ ಬಾರಿ ರವಿಕುಮಾರ್ ಗಲಾಟೆ ಮಾಡುತ್ತಿದ್ದರು. ಇಷ್ಟಾದ್ರೂ ಕೂಡ ಹಳೆ ಚಾಳಿಯನ್ನ ಬಿಡಲು ಪತ್ನಿ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರವಿಕುಮಾರ್ ಕೊಲೆ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಕಾಲೇಜಿಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದ ರವಿ, ಬರುತ್ತಿದ್ದಂತೆ ಎಳನೀರು ಕತ್ತರಿಸುವ ಮಚ್ಚಿನಿಂದ ಸಾವಿತ್ರಿಯನ್ನು ಕೊಲೆ ಮಾಡಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಅತ್ತೆ ಸರೋಜಮ್ಮನನ್ನು ಕೊಲೆ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸರ ವಿಚಾರಣೆ ವೇಳೆ ರವಿಕುಮಾರ್ ಇದೆಲ್ಲವನ್ನು ಬಾಯ್ಬಿಟ್ಟಿದ್ದಾನೆ. ಸಾವಿತ್ರಿಗೆ ಸರೋಜಮ್ಮ ಕೂಡ ಸಹಾಯ ಮಾಡುತ್ತಿದ್ದರು. ಈ ಕಾರಣದಿಂದ ಅತ್ತೆಯನ್ನೂ ಕೊಲೆ ಮಾಡಿದ್ದಾಗಿ ಆರೋಪಿ ರವಿಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ