ಮಧ್ಯರಾತ್ರಿ ಪತ್ನಿಯಿಂದ ಪತಿ ಮೇಲೆ ಅಟ್ಯಾಕ್‌ : ಬ್ಲೇಡ್ ತಂದು ಕುತ್ತಿಗೆ ಕೊಯ್ದ ವೈಫ್‌

By Anusha Kb  |  First Published Apr 25, 2022, 10:58 PM IST
  • ತೆಲಂಗಾಣದಲ್ಲಿ ನಡೆದ ಅಘಾತಕಾರಿ ಘಟನೆ
  • ಮಧ್ಯರಾತ್ರಿ ಪತ್ನಿಯಿಂದ ಪತಿ ಮೇಲೆ ಅಟ್ಯಾಕ್‌
  • ಬ್ಲೇಡ್ ತಂದು ಕುತ್ತಿಗೆ ಕೊಯ್ದ ಪತ್ನಿ

ಹನಮಕೊಂಡ: ನವ ವಿವಾಹಿತೆಯೊಬ್ಬಳು ಬ್ಲೇಡ್‌ನಿಂದ ಪತಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ತೆಲಂಗಾಣದಲ್ಲಿ(Telangana) ನಡೆದಿದೆ. ಹನಮಕೊಂಡ (Hanamkonda) ಜಿಲ್ಲೆಯ ದಾಮೆರ ಮಂಡಲದ (Damera mandal)ಪಸರಗೊಂಡ ಗ್ರಾಮದಲ್ಲಿ (Pasaragonda village) ನವವಿವಾಹಿತೆಯೊಬ್ಬಳು ತನ್ನ ಪತಿಯನ್ನು ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾಳೆ. ಇಂದು(ಏ.25) ನಸುಕಿನ ಜಾವ ಈ ವಿಲಕ್ಷಣ ಮತ್ತು ಆಘಾತಕಾರಿ ಘಟನೆ  ನಡೆದಿದೆ.

ಪತ್ನಿಯಿಂದ ಹಲ್ಲೆಗೊಳಗಾದ ಪತಿ 30 ವರ್ಷದ ಮಾದಿಶೆಟ್ಟಿ ರಾಜು (Madishetty Raju) ಅವರ ಸ್ಥಿತಿ ಚಿಂತಾಜನಕವಾಗಿದ್ದು ವಾರಂಗಲ್‌ನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ರಾಜು ಮಾರ್ಚ್ 25 ರಂದು ಅರ್ಚನಾಳನ್ನು (Archna) ವಿವಾಹವಾಗಿದ್ದರು.

Tap to resize

Latest Videos

Bengaluru Crime: ಕುಡಿಯಲು ಕಾಸು ಕೊಡಲಿಲ್ಲ ಎಂದು ಗೆಳತಿಗೆ ಬೆಂಕಿ ಇಟ್ಟ ಪಾಪಿ..!
 

ಮದುವೆ ವೇಳೆ ಸರಿ ಇದ್ದ ಅರ್ಚನಾ ಈ ನಡುವೆ ವಿಚಿತ್ರವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 2 ಗಂಟೆ ಸುಮಾರಿಗೆ, ಆಕೆ ನಿದ್ದೆಯಲ್ಲಿದ್ದ ಗಂಡನ ಮೇಲೆ ಬ್ಲೇಡ್‌ನಿಂದ ದಾಳಿ ಮಾಡಿ ಆತನ ಕುತ್ತಿಗೆ ಕತ್ತರಿಸಿದ್ದಾಳೆ. ಬ್ಲೇಡ್‌ನಿಂದ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ದಾಮೆರ ಪೊಲೀಸರು ಮನೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬದಿಂದ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಪ್ರೀತಿಗಾಗಿ ಕೊಲೆಗೆ ಯತ್ನ: ಒಂದೂವರೆ ವರ್ಷ ಕೋಮಾದಲ್ಲಿದ್ದವಗೆ 2 ಲಕ್ಷ ಪರಿಹಾರ
ಕೆಲ ದಿನಗಳ ಹಿಂದಷ್ಟೇ ತನ್ನ ಹೆತ್ತವರು ಆಯ್ಕೆ ಮಾಡಿದ ಯುವಕನನ್ನು ಮದುವೆಯಾಗಲು ಇಷ್ಟವಿಲ್ಲದ ಯುವತಿಯೊಬ್ಬಳು ಆತನನ್ನು 'ಸರ್ಪ್ರೈಸ್ ಮೀಟ್' ಎಂದು ಕರೆದು ಬಳಿಕ ಆತನ ಕತ್ತು ಕೊಯ್ದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿತ್ತು. ಪೊಲೀಸರ ಪ್ರಕಾರ, ವಿಶಾಖಪಟ್ಟಣಂನ (Visakhapatnam) ಚೋಡವರಂನಲ್ಲಿ(Chodavaram) ಈ ಘಟನೆ ನಡೆದಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ( Council of Scientific & Industrial Research) (CSIR) ನಲ್ಲಿ ವಿಜ್ಞಾನಿಯಾಗಿರುವ ರಾಮು ನಾಯ್ಡು (Ramu Naidu) ಮತ್ತು ಪುಷ್ಪಾ (Pushpa) ಮುಂದಿನ ತಿಂಗಳು ಮದುವೆಯಾಗಬೇಕಿತ್ತು. 22 ವರ್ಷದ ಪುಷ್ಪಾ ಶಾಲೆ ಬಿಟ್ಟ ವಿದ್ಯಾರ್ಥಿನಿಯಾಗಿದ್ದು, ರಾಮು ಅವರನ್ನು ಭೇಟಿಯಾಗುವ ಮುನ್ನ ಆಕೆ ಮೂರು ಚಾಕುಗಳನ್ನು ಖರೀದಿಸಿದ್ದಳು. ಇವರಿಬ್ಬರ ಮದುವೆಯನ್ನು ಮೇ 29 ರಂದು ಮಾಡಲು ಪೋಷಕರು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಆದರೆ ಮದುವೆ ಇಷ್ಟವಿಲ್ಲದ ಯುವತಿ ಪುಷ್ಪಾ ಸರ್‌ಫ್ರೈಸ್ ಇದೆ ಎಂದು ಹೇಳಿ ತಾನು ವಿವಾಹವಾಗಬೇಕಿದ್ದ ರಾಮು ನಾಯ್ಡುವನ್ನು ಬೆಟ್ಟದ ತುದಿಗೆ ಕರೆದಿದ್ದಳು. ಹೀಗೆ ತಾನು ಮದುವೆಯಾಗುವ ಹೆಣ್ಣು ಏನು ಸರ್‌ಫ್ರೈಸ್‌ ನೀಡಬಹುದು ಎಂಬ ಕುತೂಹಲದಿಂದ ಬೆಟ್ಟವೇರಿದ ರಾಮುವಿಗೆ ಅಲ್ಲಿ ಆಘಾತ ಕಾದಿತ್ತು. ಆಕೆ ಬೆಟ್ಟ ಮೇಲಿದ್ದ ದೇವಸ್ಥಾನದ ಬಳಿ  ಬಂದ ರಾಮುವಿನ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಗಂಭೀರವಾಗಿ ಗಾಯಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಯುವತಿ ಪುಷ್ಪಾಳನ್ನು ವಿಚಾರಿಸಿದಾಗ ತನ್ನ ಹೆತ್ತವರು ಆಯ್ಕೆ ಮಾಡಿದ ರಾಮು ನಾಯ್ಡು (Ramu Naidu) ಅವರನ್ನು ಮದುವೆಯಾಗಲು ತಾನು ಬಯಸುವುದಿಲ್ಲ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಮದುವೆಗೆ ತಾನು ಆಕ್ಷೇಪ ವ್ಯಕ್ತಪಡಿಸಿದ್ದರೂ ತನ್ನ ಪೋಷಕರು ತನ್ನ ಪ್ರತಿಭಟನೆಗೆ ಕಿವಿಗೊಡಲಿಲ್ಲ. ಇದರಿಂದ ಸಿಟ್ಟಿಗೆದ್ದು ಈ ಕೃತ್ಯವೆಸಗಿದ್ದಾಗಿ ಆಕೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. 
 

click me!