* ಪತ್ನಿಯ ಅಶ್ಲೀಲ ವಿಡಿಯೋವನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟ
* ಮನನೊಂದ ಮಹಿಳೆ ವಿಷಸೇವಿಸಿ ಆತ್ಮಹತ್ಯೆ
* ಗಂಡನಿಂದ ಕಿರುಕುಳವಾಗುತ್ತಿದೆ ಎಂದು ದೂರು ನೀಡಿದ್ದಳು
* ಕಾನೂನು ಬಾಹಿರವಾಗಿ ತಲಾಖ್ ನೀಡಿದ್ದ
ಮುಜಾಫರ್ ನಗರ(ಆ. 29) ಪತ್ನಿಗೆ ತ್ರಿವಳಿ ತಲಾಖ್ ಹೆಸರಿನಲ್ಲಿ ವಿಚ್ಛೇದನ ನೀಡಿದ್ದ. ಇಷ್ಟಕ್ಕೆ ಸುಮ್ಮನಿರದ ಪಾಪಿ ಪತ್ನಿಯ ಖಾಸಗಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ತಾನೇ ಹರಿಬಿಟ್ಟಿದ್ದ. ನೊಂದ ಮಹಿಳೆ ಆತ್ಮಹತ್ಯಗೆ ಶರಣಾಗಿದ್ದಾಳೆ .
ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್ಪುರ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ 18 ತಿಂಗಳ ಮಗನಿದ್ದಾನೆ.
ಮೂರು ತಿಂಗಳ ಹಿಂದೆ ಆರೋಪಿಯು ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ. ಇದಾದ ಮೇಲೆ ಮಹಿಳೆ ತನ್ನ ಹೆತ್ತವರೊಂದಿಗೆ ವಾಸವಿದ್ದಳು. ಮಗು ಸಹ ಆಕೆಯೊಂದಿಗೆ ಕಿಶನ್ಪುರ್ ಗ್ರಾಮದಲ್ಲಿತ್ತು.
ತ್ರಿವಳಿ ತಲಾಖ್ ಹೊಸ ಕಾನೂನು ಏನು ಹೇಳುತ್ತದೆ?
ತನಗೆ ಕಾನೂನು ಬಾಹಿರವಾಗಿ ತಲಾಖ್ ನೀಡಿದ್ದು ಅಲ್ಲದೇ ಮಗನನ್ನು ಬೇರೆ ಮಾಡಲು ನೋಡುತ್ತಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಆದರೆ ದೂರು ನೀಡಿದ ನಂತರ ಪಾಪಿ ಮತ್ತೊಂದು ಕೆಲಸ ಮಾಡಿದ್ದಾನೆ. ಅಶ್ಲೀಲ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಪಾಪಿ ಗಂಡನಿಗಾಗಿ ಹುಡುಕಾಟ ನಡೆದಿದೆ.