ಭಾರೀ ಕಾರ್ಯಾಚರಣೆ; 21 ಕೋಟಿ ಬೆಲೆ ಬಾಳುವ 3400 ಕೆಜಿ ಲಾರಿ ಲೋಡು!

By Suvarna NewsFirst Published Aug 29, 2021, 10:28 PM IST
Highlights

* ಬೆಂಗಳೂರು - ಹೈದರಾಬಾದ್ ಎನ್.ಸಿ.ಬಿ ಅಧಿಕಾರಿಗಳ ಜಂಟಿ ಕಾರ್ಯಚರಣೆ
* ಟ್ರಕ್ ನಲ್ಲಿ ಸಾಗಿಸುತ್ತಿದ್ದ 3400 ಕೆ.ಜಿ ಹೈಟೆಕ್ ಗಾಂಜಾ ಜಫ್ತಿ
* ಬರೋಬ್ಬರಿ 141 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾ
* ಮಹಾರಾಷ್ಟ್ರ ನೊಂದಣಿಯ ಟ್ರಕ್ ನಲ್ಲಿ ಸಾಗಿಸಾಗುತ್ತಿತ್ತು

ಬೆಂಗಳೂರು(ಆ. 29)  ಬೆಂಗಳೂರು - ಹೈದರಾಬಾದ್ ಎನ್.ಸಿ.ಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ  ಟ್ರಕ್ ನಲ್ಲಿ ಸಾಗಿಸುತ್ತಿದ್ದ 3400 ಕೆ.ಜಿ ಹೈಟೆಕ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 141 ಗೋಣಿ ಚೀಲಗಳಲ್ಲಿ ಗಾಂಜಾ ತುಂಬಿಸಿಡಲಾಗಿತ್ತು.

ಮಹಾರಾಷ್ಟ್ರ ನೊಂದಣಿಯ ಟ್ರಕ್ ನಲ್ಲಿ ಗಾಂಜಾ ಸಾಗಿಸಾಗುತ್ತಿತ್ತು. ವಿವಿಧ ರಾಜ್ಯಗಳ ಪಾರ್ಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು. ಹೈದರಾಬಾದ್ ರಿಂಗ್ ರೋಡ್ ಟೋಲ್ ಪ್ಲಾಜಾ ಬಳಿ ದಾಳಿ ನಡೆಸಿದ್ದ ಎನ್‌.ಸಿ.ಬಿ ತಂಡಕ್ಕೆ ಗಾಂಜಾ ಸಾಗಟಗಾರರು  ಸಿಕ್ಕಿಬಿದ್ದಿದ್ದಾರೆ.

ಡ್ರಗ್ಸ್ ಸೇವನೆ ಸಾಬೀತು.. ಮೌನ ಮುರಿದ ರಾಗಿಣಿ

ಟ್ರಕ್ ನಲ್ಲಿದ್ದ ಮೂವರು ಆರೋಪಿಗಳ ಸಹಿತ ಗಾಂಜಾ ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ಮೂಲದ ಕಿಂಗ್ ಪಿನ್ ಗಾಗಿ ಶೋಧ ಮುಂದುವರಿದಿದೆ. 21 ಕೋಟಿ ಬೆಲೆ ಬಾಳುವ 3400 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ನರ್ಸರಿ ಗಿಡಿಗಳ ಅಡಿಯಲ್ಲಿ ಗಾಂಜಾ ಹುಡುಗಿಸಿ ಇಡಲಾಗಿತ್ತು. ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.  ಈ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇರುವ ಅನಿಮಾನ ವ್ಯಕ್ತವಾಗಿದ್ದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. 

 

click me!