ನಿಸರ್ಗಕ್ಕೆ ವಿರುದ್ಧವಾದ ರೀತಿ ಲೈಂಗಿಕ ಕ್ರಿಯೆ/ ಮನನೊಂದ ಡಾಕ್ಟರ್ ಹೆಂಡತಿ ಆತ್ಮಹತ್ಯೆ/ ಪ್ರತಿದಿನ ಹಿಂಸೆ ನೀಡುತ್ತಿದ್ದ/ ಭಂಗಿಗಳ ಹೆಸರಲ್ಲಿ ಪತ್ನಿಯ ಪ್ರಾಣ ತೆಗೆದ
ಅಹಮದಾಬಾದ್( ಫೆ. 12) ಹದಿನೆಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಈಕೆ ಆತ್ಮ,ಹತ್ಯೆ ಮಾಡಿಕೊಂಡಿದ್ದಾಳೆ . ಗಂಡನ ವಿಚಿತ್ರ ಲೈಂಗಿಕ ಕಿರುಕುಳವೇ ಆತ್ಮಹತ್ಯೆಗೆ ಕಾರಣ. ನಿಸರ್ಗಕ್ಕೆ ವಿರೋಧವಾದ ರೀತಿ ಸೆಕ್ಸ್ ಮಾಡಲು ಗಂಡ ಒತ್ತಾಯ ಮಾಡುತ್ತಿದ್ದ. ಕೆಟ್ಟ ಭಂಗಿಯಲ್ಲಿ ಸೆಕ್ಸ್ ಮಾಡಲು ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾಳೆ.
ಆರೋಪಿ ಗಂಡನನನ್ನು ವಶಕ್ಕೆ ಪಡೆಯಲಾಗಿದೆ. ವೃತ್ತಿಯಲ್ಲಿ ವೈದ್ಯನಾಗಿರುವ ವ್ಯಕ್ತಿ ಇಂಥ ಕೆಲಸ ಮಾಡಿದ್ದಾನೆ ಆತ್ಮಹತ್ಯೆ ಮಾಡಿಕೊಂಡ ಹರ್ಷಾ ಪಟೇಲ್ ಮತ್ತು ಅಹಮದಾಬಾದ್‌ನ ಘಟ್ಲೋಡಿಯಾ ಪ್ರದೇಶದ ನಿವಾಸಿ ಡಾ.ಹಿತೇಂದ್ರ ಪಟೇಲ್ ಮದುವೆಯಾಗಿದ್ದರು. ಇಬ್ಬರಿಗೂ ಈ ಹಿಂದೆಯೇ ಮದುವೆಯಾಗಿತ್ತು. ಆದರೆ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದು ಮ್ಯಾಟ್ರಿಮೊನಿ ಸೈಟ್ ನಲ್ಲಿ ಪರಿಚಯ ಮಾಡಿಕೊಂಡು 2020 ರ ಆಗಸ್ಟ್‌ನಲ್ಲಿ ಮದುವೆಯಾಗಿದ್ದರು.
ಪೋರ್ನ್ ವಿಡಿಯೋ ತೋರಿಸಿ ಹಾಗೆ ಮಾಡಬೇಕು ಎಂದು ಪಟ್ಟು ಹಿಡಿದ
ಮದುವೆಯಾದ ನಂತರ ಡಾಕ್ಟರ್ ಪತಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆತನ ಕುಟುಂಬದವರು ವರದಕ್ಷಿಣಿಗೂ ಒತ್ತಾಯ ಮಾಡಿದ್ದಾರೆ. ಇದಕ್ಕಿಂತ ಕ್ರೂರ ಎಂದರೆ ವೈದ್ಯನ ಕಾಮದ ಲಾಲಸೆ.
ಸದಾ ಲೈಂಗಿಕ ಚಿಂತನೆಯಲ್ಲಿಯೇ ಇರುತ್ತಿದ್ದ ವೈದ್ಯ ಪತಿ ಕೊನೆಗೆ ತನ್ನೊಂದಿಗೆ ನಿಸರ್ಗಕ್ಕೆ ವಿರುದ್ಧವಾದ ರೀತಿ ಲೈಂಗಿಕ ಕ್ರಿಯೆ ಮಾಡಿದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ನಿ ಬರೆದಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿಯೇ ಪತ್ನಿ ಗಂಡನ ಬಿಟ್ಟು ತವರು ಮನೆಗೆ ಬಂದಿದ್ದಳು. ಮಹಿಳೆಯ ತಂದೆ ಅಳಿಯನ ಬಳಿ ಮಾತನಾಡಲು ತೆರಳಿದ್ದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .