20 ಸೆಕೆಂಡ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಚಾಲಾಕಿ ಮಹಿಳೆ: ಸಿಸಿ ಕ್ಯಾಮೆರಾದಲ್ಲಿ ಸೆರೆ..!

Published : Nov 28, 2022, 02:25 PM IST
20 ಸೆಕೆಂಡ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಚಾಲಾಕಿ ಮಹಿಳೆ: ಸಿಸಿ ಕ್ಯಾಮೆರಾದಲ್ಲಿ ಸೆರೆ..!

ಸಾರಾಂಶ

ವಯಸ್ಸಾದ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಮಹಿಳೆ ಆಭರಣ ಅಂಗಡಿಯಿಂದ ನೆಕ್ಲೇಸ್, ಬಂಗಾರದ ಆಭರಣದ ಸೆಟ್‌ ಅನ್ನು ಕದಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಅಂಗಡಿಗಳಲ್ಲಿ, ಜ್ಯುವೆಲ್ಲರಿ ಶಾಪ್‌ಗಳಲ್ಲಿ (Jewellery Shops) ಹಾಗೂ ಇತರೆಡೆ ಜನರು ಕಳ್ಳತನ (Theft) ಮಾಡಿ ಬಂಧನಕ್ಕೊಳಗಾಗುವುದು (Arrest) ಅಥವಾ ಅವರ ಕಳ್ಳತನದ ದೃಶ್ಯಗಳು ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ವಿಡಿಯೋಗಳನ್ನು ನೋಡಿರುತ್ತೀರಾ. ಇದು ಸಹ ಅಂತದ್ದೇ ಸುದ್ದಿ. ಇಲ್ಲಿ ವಯಸ್ಸಾದ ಮಹಿಳೆಯೊಬ್ಬರೇ (Lady) ಸಲೀಸಾಗಿ ಸುಮಾರು 10 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಲೂಟಿ ಮಾಡಿದ್ದಾರೆ. ಆಭರಣ ಕಳ್ಳತನದ ನಂತರವೂ ಧೈರ್ಯದಿಂದ ಮಹಿಳೆ ಅಲ್ಲೇ ಕುಳಿತುಕೊಂಡು ಬೆರೆ ನೆಕ್ಲೇಸ್‌ಗಳ (Necklace) ಬಗ್ಗೆಯೂ ಪ್ರಶ್ನೆ ಮಾಡುತ್ತಿದ್ದರು. ಇದು ನಮ್ಮ ದೇಶದಲ್ಲೇ ನಡೆದಿರುವ ಸುದ್ದಿಯೂ ಹೌದು.

ವಯಸ್ಸಾದ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದ್ದು, ಈ ವಿಡಿಯೋದಲ್ಲಿ ಮಹಿಳೆ ಆಭರಣ ಅಂಗಡಿಯಿಂದ ನೆಕ್ಲೇಸ್, ಬಂಗಾರದ ಆಭರಣದ ಸೆಟ್‌ ಅನ್ನು ಕದಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆಕೆ ಕದ್ದ ಚಿನ್ನದ ಸರ ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಹೇಳಲಾಗಿದೆ. ಇನ್ನು, ನೆಟ್ಟಿಗರು ಈ ವಿಡಿಯೋವನ್ನು ಉಗುರು ಕಚ್ಚಿಕೊಂಡು ನೋಡಿದ್ದಾರೆ. ಯಾಕೆ ಅಂದರೆ, ಅಜ್ಜಿ ಅಷ್ಟು ಸಲೀಸಾಗಿ 20 ಸೆಕೆಂಡ್‌ನಲ್ಲೇ ಕಳ್ಳತನ ಮಾಡಿದ್ದಾರೆ. ಈಕೆ ನಿಜಕ್ಕೂ ಚಾಲಾಕಿ ಕಳ್ಳಿಯೇ ಸರಿ..!

ಇದನ್ನು ಓದಿ; ಯಜಮಾನನಿಗಾಗಿ ಕಾಯುವ ಹಸು: ವಿಡಿಯೋ ವೈರಲ್

ನೀವೂ ಈ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ವಾ, ನಿಮ್ಮ ಕಣ್ಣಾರೆ ನೀವೇ ನೋಡಿ..

ಅಂದ ಹಾಗೆ, ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನವೆಂಬರ್ 17 ರಂದು ಮಹಿಳೆ ಬಲ್ದೇವ್ ಪ್ಲಾಜಾದಲ್ಲಿರುವ ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಕೆ  ಆಭರಣಗಳನ್ನು ನೋಡುತ್ತಾ ಕುಳಿತಿದ್ದಳು ಮತ್ತು ಸೀರೆಯಲ್ಲಿ ಆಭರಣದ ಬಾಕ್ಸ್‌ ಅನ್ನು ಹಾಕಿಕೊಂಡಿದ್ದು, ನಂತರ ಮತ್ತೊಂದು ನೆಕ್ಲೇಸ್‌ ಬಗ್ಗೆ ವಿಚಾರಿಸಿ ನಂತರ, ಹೊರಬಂದಿದ್ದಾರೆ. ಆಶ್ಚರ್ಯಕರವಾಗಿ, ಜ್ಯುವೆಲ್ಲರಿ ಶಾಪ್‌ನಲ್ಲಿ ಹೆಚ್ಚು ಜನ ಇದ್ದರೂ, ಯಾರೂ ಇದನ್ನು ಗಮನಿಸಲಿಲ್ಲ ಮತ್ತು ಆಕೆ ಚುರುಕಾಗಿ ಆಭರಣ ಅಂಗಡಿಯಿಂದ ಎಸ್ಕೇಪ್‌ ಆಗಿದ್ದಾರೆ. 20 ಸೆಕೆಂಡ್‌ಗೂ ಕಡಿಮೆ ಸಮಯದಲ್ಲೇ 10 ಲಕ್ಷ ರೂ. ಮೌಲ್ಯದ ಆಭರಣ ಕದ್ದು ಪರಾರಿಯಾಗಿದ್ದಾರೆ. 

ಇದನ್ನೂ ಓದಿ: ಭಲೇ ನಾರಿ..ಸೀರೆ ಧರಿಸಿನೂ ಜಿಮ್‌ನಲ್ಲಿ ವರ್ಕೌಟ್ ಮಾಡ್ಬೋದು ನೋಡಿ

ಗೋರಖ್‌ಪುರದ ಶೋರೂಮ್‌ನಲ್ಲಿ ಗ್ರಾಹಕರ ಗುಂಪಿನಲ್ಲಿ "ಮಾಸ್ಕ್‌" ಧರಿಸಿ ಮಹಿಳೆ ಕುಳಿತಿರುವುದನ್ನು ದೃಶ್ಯಗಳಲ್ಲಿ ತೋರಿಸಲಾಗಿದೆ. ಸನ್‌ಗ್ಲಾಸ್‌ ಮತ್ತು ಮಾಸ್ಕ್‌ ಹಾಕಿಕೊಂಡಿರುವ ಆಕೆಯ ಮುಖವನ್ನು ಗುರುತಿಸುವುದು ಸಹ ಕಷ್ಟವೇ ಸರಿ. ಪೊಲೀಸರು ತನ್ನನ್ನು ಪತ್ತೆಹಚ್ಚದಿರಲೆಂದು ಚಾಲಾಕಿ ಕಳ್ಳಿ ಇಲ್ಲೂ ತನ್ನ ಚಾಣಾಕ್ಷ ಬುದ್ಧಿಯನ್ನೇ ಪ್ರದರ್ಶಿಸಿದ್ದಾರೆ ನೋಡಿ..

ಇನ್ನು, ವೀಡಿಯೊದಲ್ಲಿ, ಮಹಿಳೆ ಅನೇಕ ನೆಕ್ಲೇಸ್‌ಗಳತ್ತಲು ಕಣ್ಣಾಡಿಸಿದ್ದು ಮತ್ತು, ಈ ಗ್ಯಾಪ್‌ನಲ್ಲೇ ತನ್ನ ಸೀರೆಯಲ್ಲಿ ಬೆಲೆಬಾಳುವ ಆಭರಣದ ಬಾಕ್ಸ್‌ ಅನ್ನು ಆರಾಮಾಗಿ ಇಟ್ಟುಕೊಂಡಿದ್ದಾರೆ. ಈ ಮಧ್ಯೆ, ಶೋರೂಮ್‌ ಮಹಿಳಾ ಸಿಬ್ಬಂದಿಗೆ ನೆಕ್ಲೇಸ್‌ ಒಂದನ್ನು ಹಾಕಿಕೊಂಡು ತೋರಿಸುವಂತೆಯೂ ಕೇಳಿದ್ದಾರೆ. ಬಳಿಕ, ಇನ್ನೂ ಕೆಲವು ಆಭರಣ ನೋಡುವಂತೆ ನಟಿಸಿದ ನಂತರ, ಅಕೆ ಏನನ್ನೂ ಖರೀದಿಸದೆ ಹೊರಡುತ್ತಾರೆ. ಅಲ್ಲದೆ, ಆಕೆ ಕದ್ದ ಬಾಕ್ಸ್‌ ಮಿಸ್‌ ಆಗಿದೆಯೆಂದು ಜ್ಯುವೆಲ್ಲರಿ ಶಾಪ್‌ನವರಿಗೆ ಸಹ ಅರಿವಿಗೆ ಬಂದಿರಲಿಲ್ಲ.

ಇದನ್ನೂ ಓದಿ: 37 ಶಾಲಾ ಕಾಲೇಜುಗಳಲ್ಲಿ ಕಳವು: ಇಬ್ಬರು ಕುಖ್ಯಾತ ಕಳ್ಳರ ಸೆರೆ

ಮಹಿಳೆ ಕೊಂಡೊಯ್ಯಲು ಯಶಸ್ವಿಯಾದ ಪೆಟ್ಟಿಗೆಯಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳು ಸೇರಿವೆ ಎಂದು ತಿಳಿದುಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು