ವಿಮಾನದ ಲೈಟ್‌ ಆಫ್‌ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ

By BK Ashwin  |  First Published Sep 11, 2023, 2:08 PM IST

ಮುಂಬೈನಿಂದ ಗುವಾಹಟಿಗೆ ಶನಿವಾರ ತಡರಾತ್ರಿ ಬರ್ತಿದ್ದ ವಿಮಾನದಲ್ಲಿ ಕ್ಯಾಬಿನ್ ಲೈಟ್‌ಗಳನ್ನು ಡಿಮ್ ಮಾಡಿದಾಗ ಪುರುಷ ಪ್ರಯಾಣಿಕನೊಬ್ಬ ಆರ್ಮ್‌ರೆಸ್ಟ್‌ ಅನ್ನು ಮೇಲಕ್ಕೆತ್ತಿ ಮಹಿಳಾ ಸಹ-ಪ್ರಯಾಣಿಕರೊಬ್ಬರಿಗೆ ಪದೇ ಪದೇ ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ತಿಳಿದುಬಂದಿದೆ.


ಮುಂಬೈ (ಸೆಪ್ಟೆಂಬರ್ 11, 2023): ವಿಮಾನದಲ್ಲಿ ಲೈಂಗಿಕ ಕಿರುಕುಳ ನಡೆದಿರೋ ಮತ್ತೊಂದು ಪ್ರಕರಣ ವರದಿಯಾಗಿದೆ.  ಮುಂಬೈನಿಂದ ಗುವಾಹಟಿಗೆ ತಡರಾತ್ರಿ ಬರ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಳೆದ 3 ತಿಂಗಳಲ್ಲಿ ವಿಮಾನದಲ್ಲಿ ನಡೆದಿರೋ 5 ನೇ ಪ್ರಕರಣ ಇದು ಎಂದೂ ತಿಳಿದುಬಂದಿದೆ.

ಮುಂಬೈನಿಂದ ಗುವಾಹಟಿಗೆ ಶನಿವಾರ ತಡರಾತ್ರಿ ಬರ್ತಿದ್ದ ವಿಮಾನದಲ್ಲಿ ಕ್ಯಾಬಿನ್ ಲೈಟ್‌ಗಳನ್ನು ಡಿಮ್ ಮಾಡಿದಾಗ ಪುರುಷ ಪ್ರಯಾಣಿಕನೊಬ್ಬ ಆರ್ಮ್‌ರೆಸ್ಟ್‌ ಅನ್ನು ಮೇಲಕ್ಕೆತ್ತಿ ಮಹಿಳಾ ಸಹ-ಪ್ರಯಾಣಿಕರೊಬ್ಬರಿಗೆ ಪದೇ ಪದೇ ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?

ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಗುವಾಹಟಿಯಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ಭಾರತೀಯ ಪ್ರಯಾಣಿಕರನ್ನು ಒಳಗೊಂಡ ಕನಿಷ್ಠ ನಾಲ್ಕು ಲೈಂಗಿಕ ಕಿರುಕುಳ ಪ್ರಕರಣಗಳು ವಿಮಾನಗಳಲ್ಲಿ ವರದಿಯಾಗಿವೆ.

ಇತ್ತೀಚಿನ ಘಟನೆ ಇಂಡಿಗೋ ಫ್ಲೈಟ್ 6E-5319 ನಲ್ಲಿ ಸಂಭವಿಸಿದೆ. ಅದು ಮುಂಬೈಯಿಂದ ರಾತ್ರಿ 9 ಗಂಟೆಯ ನಂತರ ಹೊರಟಿತು ಮತ್ತು ಮಧ್ಯರಾತ್ರಿ 12: 15ರ ಸಮಯದಲ್ಲಿ ಗುವಾಹಟಿ ತಲುಪಿತು. ಈ ಕಿರುಕುಳದಿಂದ ತಾನು ಆಸ್ಪತ್ರೆಗೆ ಸೇರುವಂತಾಗಿದ್ದು, ಚೇತರಿಕೆ ಕಾಣ್ತಿದ್ದೇವೆ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: 45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್‌

ತಾನು ಸೈಡ್‌ ಸೀಟಿನಲ್ಲಿ ಕೂತಿದ್ದೆ, ಹಾಗೂ ಆರ್ಮ್‌ರೆಸ್ಟ್‌ ಅನ್ನು ಕೆಳಗಿಳಿಸಿದ್ದೆ. ಹಗೂ, ಕ್ಯಾಬಿನ್‌ ಲೈಟ್‌ ಡಿಮ್‌ ಆಗ್ತಿದ್ದಂತೆ ನಿದ್ರೆಗೆ ಜಾರಿದೆ. ಆದರೆ, ತಾನು ಎಚ್ಚರಗೊಂಡಾಗ ಆರ್ಮರೆಸ್ಟ್‌ ಮೇಲಕ್ಕೆ ಬಂದಿತ್ತು ಮತ್ತು ಪುರುಷ ಸಹ-ಪ್ರಯಾಣಿಕ ತನ್ನ ಹತ್ತಿರ ವಾಲಿರುವುದನ್ನು ನೋಡಿದೆ ಎಂದಿದ್ದಾರೆ. ಇದು ನನಗೆ ವಿಚಿತ್ರವೆನಿಸಿತು. ಆದರೆ, ಅರೆನಿದ್ರೆಯಲ್ಲಿದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ಮತ್ತೆ ಆರ್ಮ್ ರೆಸ್ಟ್ ಅನ್ನು ಕೆಳಗಿಳಿಸಿ ಮಲಗಿದೆ.. ಸ್ವಲ್ಪ ಸಮಯದ ನಂತರ, ತನ್ನ ಮೇಲೆ ಪುರುಷ ಪ್ರಯಾಣಿಕರ ಕೈಗಳನ್ನು ಕಂಡು ಗಾಬರಿಯಿಂದ ಎಚ್ಚರಗೊಂಡೆ. ಆತನ ಕಣ್ಣುಗಳು ಮುಚ್ಚಿದ್ದವು. ಆದರೂ, ನಾನು ಯಾವ ತೀರ್ಮಾನಕ್ಕೂ ಬರದೆ ನನ್ನ ಕಣ್ಣುಗಳನ್ನು ಅರ್ಧ ಮುಚ್ಚಿದೆ ಮತ್ತು ನಿದ್ರಿಸುತ್ತಿರುವಂತೆ ನಟಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಬಳಿಕ, ಒಂದೆರಡು ನಿಮಿಷಗಳಲ್ಲಿ, ಸಹ-ಪ್ರಯಾಣಿಕ ಮತ್ತೆ ತನ್ನನ್ನು ತಡೆದು ಅನುಚಿತವಾಗಿ ಸ್ಪರ್ಶಿಸುವುದನ್ನು ಕಂಡುಕೊಂಡೆ. ಆರಂಭದಲ್ಲಿ ಕಿರುಚಲು ಬಯಸಲು ಸಾಧ್ಯವಾಗಲಿಲ್ಲ. ಮತ್ತೆ ಆತ ನನ್ನನ್ನು ಮುಟ್ಟಲು ಬಂದಾಗ ಸೀಟ್ ಲೈಟ್‌ಗಳನ್ನು ಆನ್ ಮಾಡಿ ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಕರೆದೆ. "ನಾನು ಕೂಗುತ್ತಾ, ಅಳುತ್ತಾ ಮತ್ತು ಘಟನೆಯನ್ನು ಹೇಳುತ್ತಿರುವಾಗ ಆತ ಕ್ಷಮೆಯಾಚಿಸಲು ಪ್ರಾರಂಭಿಸಿದ" ಎಂದೂ ಸಂತ್ರಸ್ತೆ ಘಟನೆ ವಿವರಿಸಿದ್ದಾಳೆ.

ಇದನ್ನು ಓದಿ: ಲವ್ ಜಿಹಾದ್‌: ಮದ್ವೆಯಾಗಿದ್ರೂ ಹಿಂದೂ ಹುಡುಗಿ ಜತೆ ಲವ್ ನಾಟಕವಾಡ್ದ ಶಕೀಬ್; ಆತ್ಮಹತ್ಯೆ ಮಾಡ್ಕೊಂಡ ಪಿಂಕಿ ಗುಪ್ತಾ

ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ಪ್ರಯಾಣಿಕರಿಂದ ದೂರನ್ನು ಸ್ವೀಕರಿಸಿದ ನಂತರ ಗುವಾಹಟಿ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. "ದೂರುದಾರರು ಸ್ಥಳೀಯ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಅವರ ತನಿಖೆಗೆ ನಾವು ನೆರವು ನೀಡುತ್ತೇವೆ" ಎಂದೂ ತಿಳಿಸಿದೆ. 

ಇದನ್ನೂ ಓದಿ: ಗಗನಸಖಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್‌: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!

click me!