* ಪೊಲೀಸ್ ಇನ್ಸ್ ಪೆಕ್ಟರ್ ವಿರದ್ದವೇ ಲೈಂಗಿಕ ದೌರ್ಜನ್ಯ ಆರೋಪ...
* ಹೆಣ್ಣೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿರುದ್ದ ಪೊಲೀಸ್ ಕಮಿಷನರ್ ಗೆ ದೂರು
* ದೂರು ಕೊಡಲು ಹೋದ ಮಹಿಳೆಯನ್ನ ಮಂಚಕ್ಕೆ ಕರೆದ್ರಾ ಪೊಲೀಸ್ ಇನ್ಸ್‌ಪೆಕ್ಟರ್..?
ಬೆಂಗಳೂರು, (ಜ.19): ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ (Sexual Harassment) ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್(Police Inspector) ವಿರುದ್ಧ ಕೇಳಿ ಬಂದಿದೆ.
ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
undefined
Illegal Relationship ಕಾಂಗ್ರೆಸ್ ಮುಖಂಡನ ಕಾಮ ಪುರಾಣ ಬಹಿರಂಗಗೊಳಿಸಿದ ಪತ್ನಿ
ಸಂತ್ರಸ್ತ ಮಹಿಳೆ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಲಂಚ ನೀಡಬೇಕು ಅಥವಾ ಮಂಚಕ್ಕೆ ಬರಬೇಕೆಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.
ನೊಂದ ಮಹಿಳೆ ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದು, ಇನ್ಸ್‌ಪೆಕ್ಟರ್ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತಕುಮಾರ್ ಆರೋಪಿ. ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.
ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಮಹಿಳೆ ಅನ್ನೋದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಲಂಚ ನೀಡಬೇಕು ಅಥವಾ ಮಂಚಕ್ಕೆ ಬರಬೇಕೆಂದು ಕರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಮನಗರದ ಎಸ್ ಪಿ ಆಗಿ ಕೆ.ಸಂತೋಷ್ ಬಾಬು, ಬಿಎಂಟಿಸಿ ಭದ್ರತೆ ಹಾಗೂ ಜಾಗೃತ ದಳದ ಉಸ್ತುವಾರಿಯನ್ನು ಜಿ.ರಾಧಿಕಾ ನೀಡಲಾಗಿದೆ.
ಬೆಂಗಳೂರು ವೈಟ್ ಫೀಲ್ಡ್ ವಿಭಾಗದ ಡಿಸಿಪಿಯಾಗಿ ಎಸ್. ಗಿರೀಶ್, ಚಿತ್ರದುರ್ಗ ಎಸ್ ಪಿಯಾಗಿ ಕೆ.ಪರಶುರಾಮ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಚಿತ್ರದುರ್ಗದ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ G. ರಾಧಿಕಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಭದ್ರತೆ ಮತ್ತು ಜಾಗೃತ) ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕಾರಗಿದ್ದ ಕೆ.ಪರಶುರಾಮ ಅವರನ್ನು ರಾಧಿಕಾ ಅವರಿದ್ದ ಹುದ್ದೆಗೆ ವರ್ಗಾಯಿಸಿ, ಚಿತ್ರದುರ್ಗದ ಪೊಲೀಸ್ ಅಧೀಕ್ಷಕರಾಗಿ ಆಯೋಜಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಮೊದಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕೆ. ಪರುಶುರಾಮ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ಎಸ್ ಪಿ ವರ್ಗಾವಣೆಯಾಗಿದ್ದಾರೆ.
ಗುಪ್ತಚರ ಉಪ ಪೊಲೀಸ್ ಆಯುಕ್ತರಾಗಿದ್ದ ಕೆ.ಸಂತೋಷ್ ಬಾಬು, ಅವರನ್ನು ರಾಮನಗರ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ರಾಮನಗರದ ಎಸ್ ಗಿರೀಶ್ ಅವರನ್ನು ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತರಾಗಿ ಪ್ರಸ್ತುತ ಖಾಲಿ ಇರುವ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.