* ಕೊರೋನಾ ಕಾಲದಲ್ಲಿ ಆನ್ ಲೈನ್ ವಂಚಕರಿಂದ ದೂರ ಇರಿ
* ಕಸ್ಟಮರ್ ಕೇರ್ ಎಂದು ಸಿಕ್ಕ ಸಿಕ್ಕ ನಂಬರ್ ಗೆ ಕರೆ ಮಾಡಬೇಡಿ
* ಬಟ್ಟೆ ಹಿಂದಿರುಗಿಸಲು ಹೋಗಿ ಎರಡು ಲಕ್ಷ ರೂ. ಕಳಕೊಂಡ ಮಹಿಳೆ
ಮುಂಬೈ (ಮೇ 23) ಕೊರೋನಾ ಕಾಲದಲ್ಲಿ ಆನ್ ಲೈನ್ ವಂಚಕರು ಬೇರೆ ಬೇರೆ ದಾರಿ ಕಂಡುಕೊಂಡಿದ್ದಾರೆ. 40 ವರ್ಷದ ಮಹಿಳೆ ಎರಡು ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇ ಕಾಮರ್ಸ್ ವೆಬ್ ಸೈಟ್ ನಲ್ಲಿ ಆರ್ಡರ್ ಮಾಡಿದ್ದ ಡ್ರೆಸ್ ಒಂದನ್ನು ರಿಟರ್ನ್ ಮಾಡುವ ವೇಳೆ ವಂಚನೆ ನಡೆದಿದೆ. ಸಹಾಯ ಮಾಡುವ ನೆಪದಲ್ಲಿ ವಂಚಕ ಜಾಲ ಬೀಸಿದ್ದಾನೆ.
undefined
ಕೊರೋನಾಕ್ಕೆ ಔಷಧ ನಮ್ಮ ಬಳಿ ಇದೆ ಎಂದು ಕರೆ ಮಾಡ್ತಾರೆ!
ಸರಿಯಾದ ಸೈಜ್ ನ ಬಟ್ಟೆ ಬಂದಿರಲಿಲ್ಲ. ಇದನ್ನು ರಿಟರ್ನ್ ಮಾಡಲು ಆನ್ ಲೈನ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದ್ದಾಳೆ. ಸಿಕ್ಕ ನಂಬರ್ ಗೆ ಕಾಲ್ ಮಾಡಿದ್ದು ವಂಚನೆಗೆ ಒಳಗಾಗಿದ್ದಾರೆ.
ಕರೆ ಸ್ವೀಕಾರ ಮಾಡಿದ ವಂಚಕ ಆಕೆಯ ಬ್ಯಾಂಕ್ ಡಿಟೇಲ್ಸ್ ಪಡೆದುಕೊಂಡಿದ್ದಾನೆ. ನಿಮಗೆ ಹಣ ಟ್ರಾನ್ಸ್ ಫರ್ ಮಾಡಲು ಲಿಂಕ್ ಮಾಡಬೇಕು ಎಂದಿದ್ದಾನೆ. ಇದನ್ನು ನಂಬಿದ ಮಹಿಳೆ ಎಲ್ಲ ಡಿಟೇಲ್ಸ್ ನೀಡಿದ್ದಾರೆ. ಏಕಾಏಕಿ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗಿದ್ದು ನಂತರ ಮಹಿಳೆ ದೂರು ದಾಖಲಿಸಿದ್ದಾರೆ.