ಪತಿ ನಿಧನದ ಬಳಿಕ ಮತ್ತೊಂದು ಮದುವೆಯಾದ ಮಹಿಳೆಗೆ ಥಳಿತ, ಸ್ಥಿತಿ ಚಿಂತಾಜನಕ!

By Suvarna NewsFirst Published Dec 16, 2022, 7:55 PM IST
Highlights

ಗಂಡ ನಿಧನದ ಬಳಿಕ ಕೆಲ ವರ್ಷಗಳ ಕಾಲ ಒಂಟಿ ಜೀವನ ನಡೆಸಿದ ಮಹಿಳೆ, ಮತ್ತೊಂದು ಮದುವೆಯಾಗಿದ್ದಾಳೆ. ಆದರೆ ಇದು ಮೊದಲ ಪತಿ ಸಂಬಂಧಿಕರ ಪಿತ್ತ ನೆತ್ತಿಗೇರಿಸಿದೆ. ಕಂಬಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ್ದಾರೆ. 

ರಾಜ್‌ಕೋಟ್(ಡಿ.16): ತಾಲೀಬಾನ್ ಉಗ್ರರ ಆಡಳಿತದಲ್ಲಿ ಮಹಿಳೆಯರಿಗೆ ನೀಡುವ ಶಿಕ್ಷೆಗಳನ್ನು ಬಹುತೇಕರು ಗಮನಿಸಿದ್ದೀರಿ. ಶಿಕ್ಷಣ ಪಡೆದರೆ, ಹಿಜಾಬ್ ತೆಗೆದಿಟ್ಟರೆ, ಹೊರಗಡೆ ಹೋದರೆ, ವಿರುದ್ಧ ಮಾತನಾಡಿದರೆ ಸಾಕು ತಾಲೀಬಾನಿಗಳು ನೀಡುವ ಶಿಕ್ಷೆ ಊಹಿಸಿಕೊಳ್ಳಲು ಅಸಾಧ್ಯ. ಇದೀಗ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇದೇ ರೀತಿಯ ತಾಲಿಬಾನ್ ಶಿಕ್ಷೆಯನ್ನು ನೀಡಲಾಗಿದೆ. ಕಾರಣ ಇಷ್ಟೇ ಗಂಡ ಸತ್ತ 2 ವರ್ಷದ ಬಳಿಕ ಮಹಿಳೆ ಮತ್ತೊಂದು ಮದುವೆಯಾಗಿದ್ದಾಳೆ. ಇದೇ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಥಳಿಸಲಾಗಿದೆ. ಮಹಿಳೆ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಆದರೆ ಇಷ್ಟಕ್ಕೆ ಬಿಡದೆ ದುರುಳರು, ಮಹಿಳೆಯನ್ನು ಎಳೆದು ಆಕೆಯ ಕೂದಲು ಕತ್ತರಿಸಿದ್ದಾರೆ. ಬಳಿಕ ಹೊಟ್ಟೆ ಹಾಗೂ ಎದೆ ಒದ್ದ ಘಟನೆ ವರದಿಯಾಗಿದೆ.

35 ವರ್ಷದ ಭಾನು ಸದಾಮಿಯಾ ಪತಿ ರಾಜು 4 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಸದಾಮಿಯಾ ಎರಡನೇ ಮದುವೆಯಾಗಿದ್ದಾರೆ. ರಾಜ್‌ಕೋಟ್‌ನ ಕಮ್ಲಾಪುರದಲ್ಲಿ ಎರಡನೇ ಪತಿ ಜೊತೆ ವಾಸವಿದ್ದಾರೆ. ಸದಾಮಿಯಾಗೆ ಒಟ್ಟು ನಾಲ್ಕು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. 

ಮದ್ವೆ ಆಗ್ತೀನಿ ಎಂದು ಪ್ರತಿ ದಿನ ಅಸ್ವಾಭಾವಿಕ ಸೆಕ್ಸ್, ಅಬ್ದುಲ್ಲಾ ವಿರುದ್ಧದ ಸಿಡಿದೆದ್ದ ಯುವತಿ!

ಸೋಮವಾರ ಸದಾಮಿಯಾ ಕೆಲಸದ ನಿಮಿತ್ತ ಮೊದಲ ಪತಿ ಮನೆಯ ಗ್ರಾಮಕ್ಕೆ ತೆರಳಿದ್ದಾರೆ . ಈ ವೇಳೆ ಮೊದಲ ಪತಿಯ ಸಹೋದರಿ ಸಿಕ್ಕಿದ್ದಾರೆ. ಸದಾಮಿಯಾಳನ್ನು ನೋಡಿದ ಮೊದಲ ಪತಿಯ ಸಹೋದರಿ ಕೆರಳಿ ಕೆಂಡವಾಗಿದ್ದಾರೆ. ನನ್ನ ಸಹೋದರ ಸತ್ತ ಬಳಿಕ ಮತ್ತೊಂದು ಮದುವೆಯಾಗಿ ಹಾಯಾಗಿರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈ ವೇಳೆ ಆಕೆಯ ಪತಿ ಮನೆಯಿಂದ ಹೊರಬಂದು ಬಡಿಗೆಯಲ್ಲಿ ಥಳಿಸಲು ಆರಂಭಿಸಿದ್ದಾರೆ.

ಮನೆಯ ಕಂಬಕ್ಕೆ ಕಟ್ಟಿಹಾಕಿದ ಮೊದಲ ಪತಿಯ ಸಹೋದರಿ ಹಾಗೂ ಆಕೆಯ ಗಂಡ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇಷ್ಟಕ್ಕೇ ಅವರ ಕೋಪ ತಣ್ಣಗಾಗಿಲ್ಲ. ಪಕ್ಕ ಮನೆಯವರನ್ನು ಕರೆಸಿದ್ದಾರೆ. ಬಳಿಕ ನೆರೆಮನೆಯವರೂ ಸೇರಿ ಈಕೆಯನ್ನು ಥಳಿಸಿದ್ದಾರೆ. ಅಷ್ಟರಲ್ಲೇ ಸದಾಮಿಯಾ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಆಕೆಯ ತಲೆಕೂದಲನ್ನು ಕತ್ತರಿಸಿದ್ದಾರೆ. ಬಳಿಕ ರಸ್ತೆಯಲ್ಲಿ ಎಳೆದೊಯ್ದು ಹೊಟ್ಟೆ ಹಾಗೂ ಎದೆಗೆ ಒದ್ದಿದ್ದಾರೆ.

ದೆಹಲಿ ಆಸಿಡ್‌ ದಾಳಿ, ಮೂವರು ಆರೋಪಿಗಳನ್ನೂ ಬಂಧಿಸಿದ ಪೊಲೀಸ್‌

ಸುದ್ದಿ ತಿಳಿದು ಮೊದಲ ಪತಿಯ ಅತ್ತೆ ಹಾಗೂ ಮಾಮ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸದಾಮಿಯಾಳನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದರೆ. ಸದಾಮಿಯಾ ಸ್ಥಿತಿ ಚಿಂತಾಜನಕವಾಗಿದೆ. ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಮಿಯಾ ಎರಡನೇ ಪತ್ನಿ ದೂರು ದಾಖಲಿಸಿದ್ದಾರೆ.  

ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದಾಮಿಯಾ ಸ್ಥಿತಿ ಗಂಭೀರವಾಗಿದೆ. ಸದಾಮಿಯಾ ಎರಡನೇ ಪತಿ ಹಾಗೂ ನಾಲ್ವರು ಮಕ್ಕಳು ಆತಂಕಗೊಂಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಮೊದಲ ಪತಿಯ ಸಹೋದರಿ ಆಕೆಯ ಪತಿ ಹಾಗೂ ನೆರೆಮನೆಯವರನ್ನು ಬಂಧಿಸಿದ್ದಾರೆ. ಇದೀಗ  ಥಳಿತ ಪ್ರಕರಣದಲ್ಲಿ ಮತ್ತೆ ಕೆಲವರು ಭಾಗಿಯಾಗಿದ್ದಾರೆ. ಅವರನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

click me!