ತೋಟದಲ್ಲಿ ಗಿಡಕ್ಕೆ ನೀರು ಹಾಕುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ ವಳಗೆರೆಹಳ್ಳಿ ಗ್ರಾಪಂ ಸದಸ್ಯೆ ಸಾವು

By Kannadaprabha News  |  First Published Feb 14, 2024, 4:52 AM IST

 ವಿಷಪೂರಿತ ಹಾವು ಕಚ್ಚಿ ಗ್ರಾಮ ಪಂಚಾಯ್ತಿ ಸದಸ್ಯೆ ಸಾವನ್ನಪ್ಪಿರುವ ಘಟನೆ ತಾಲೂಕಿನ ವಳಗೆರೆಹಳ್ಳಿಯಲ್ಲಿ ಮಂಗಳವಾರ ಜರುಗಿದೆ. ಗ್ರಾಮದ ಮನು ಬ್ರಹ್ಮಚಾರಿ ಪತ್ನಿ ಮೀನಾಕ್ಷಿ (50) ಮೃತಪಟ್ಟ ಗ್ರಾಪಂ ಸದಸ್ಯೆ.


ಮದ್ದೂರು (ಫೆ.14)  ವಿಷಪೂರಿತ ಹಾವು ಕಚ್ಚಿ ಗ್ರಾಮ ಪಂಚಾಯ್ತಿ ಸದಸ್ಯೆ ಸಾವನ್ನಪ್ಪಿರುವ ಘಟನೆ ತಾಲೂಕಿನ ವಳಗೆರೆಹಳ್ಳಿಯಲ್ಲಿ ಮಂಗಳವಾರ ಜರುಗಿದೆ.

ಗ್ರಾಮದ ಮನು ಬ್ರಹ್ಮಚಾರಿ ಪತ್ನಿ ಮೀನಾಕ್ಷಿ (50) ಮೃತಪಟ್ಟ ಗ್ರಾಪಂ ಸದಸ್ಯೆ. ಸಂಜೆ 4 ಗಂಟೆ ವೇಳೆ ತೋಟದಲ್ಲಿ ಗಿಡಕ್ಕೆ ನೀರು ಹಾಕುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ಮದ್ದೂರು ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

Latest Videos

undefined

ಮೃತರು ಪತಿ ಮನು ಬ್ರಹ್ಮಚಾರಿ, ಓರ್ವ ಪುತ್ರಿ ಸೌಮ್ಯ, ಪುತ್ರ ಮಂಜುನಾಥ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ಜರುಗಲಿದೆ. ಮೃತರ ನಿಧನಕ್ಕೆ ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್, ಮ್ಯಾನೇಜರ್ ಮಧುಕುಮಾರ್ ಸಂತಾಪ ಸೂಚಿಸಿದ್ದಾರೆ.

ಅನ್ಯೋನ್ಯವಾಗಿದ್ದ ಅಣ್ಣ ತಂಗಿಯ ಬದುಕು ಅಂತ್ಯ, ವ್ಯಾಟ್ಸ್ಆ್ಯಪ್ ಸ್ಟೇಟಸ್ ನೀಡಿತ್ತು ಸಾವಿನ ಸುಳಿವು!

ಅಪರಿಚಿತರ ಶವ ಪತ್ತೆ:

ಅಪರಿಚಿತನ ಶವ ಪತ್ತೆಪಾಂಡವಪುರ: ತಾಲೂಕಿನ ರೈಲ್ವೆ ನಿಲ್ದಾಣದ ಸರ್ಕಲ್ ನಲ್ಲಿರುವ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಾಗಿದೆ. 5 ಅಡಿ ಎತ್ತರ, ಮೈ ಮೇಲೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ತೆಳು ಹಳದಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಸಂಬಂಧಿಕರಿಲ್ಲಿ ಪಾಂಡವಪುರ ಪೊಲೀಸ್ ಠಾಣೆ ದೂ-08232-224200, 08236-255131 ಅಥವಾ ಮೊ- 9480804874 ಅನ್ನು ಸಂಪರ್ಕಿಸಬಹುದು. 

ಬೇರೊಬ್ಬನೊಂದಿಗೆ ಓಡಿಹೋದ ಪತ್ನಿಗೆ ಸಹಾಯ ಮಾಡಿದನೆಂದು ಗೆಳೆಯನ ಕೊಲೆ; ಆರೋಪಿ ಬಂಧನ

ವ್ಯಕ್ತಿ ಶವ ಪತ್ತೆ

ಪಾಂಡವಪುರ: ತಾಲೂಕಿನ ರೈಲ್ವೆ ನಿಲ್ದಾಣದ ಬಳಿ ಇರುವ ಪ್ರಿಯ ವೈನ್ಸ್ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.ಮೃತನಿಗೆ ಸುಮಾರು 50 ರಿಂದ 55 ವರ್ಷ ವಯಸ್ಸಾಗಿದೆ. ಕಪ್ಪು ಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ದೇಹವು ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾನೆ. ಎಡಗಾಲಿನಲ್ಲಿ ಬೆರಳುಗಳು ಇರುವುದಿಲ್ಲ. ಮೈ ಮೇಲೆ ಸಿಮೆಂಟ್ ಕಪ್ಪು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪಂಚೆಯನ್ನು ಧರಿಸಿದ್ದಾನೆ. ವಾರಸುದಾರರಿದ್ದಲ್ಲಿ ಪಾಂಡವಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

click me!