ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಂಡ್ಯದ ಪೂರ್ವ ಠಾಣೆಯಲ್ಲಿ ನಡೆದಿದೆ. ರೂಪಾದೇವಿ, ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆ. ಪೊಲೀಸರ ಥಳಿತದಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ.
ಮಂಡ್ಯ (ಫೆ.13): ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಂಡ್ಯದ ಪೂರ್ವ ಠಾಣೆಯಲ್ಲಿ ನಡೆದಿದೆ.
ರೂಪಾದೇವಿ, ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆ. ಪೊಲೀಸರ ಥಳಿತದಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ.
ಮಂಡ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ: ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಪ್ರಕರಣ ದಾಖಲು
ಏನಿದು ಘಟನೆ?
ಮಂಡ್ಯ ನಿವಾಸಿಯಾಗಿರು ರೂಪಾಗೆ ಸೇರಿದ ಹಸು ಮೇಯಲು ಹೋಗಿದೆ. ಇದೇ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಹಸು ಅಡ್ಡ ಬಂದು ಬಿದ್ದು ಗಾಯಗೊಂಡಿರುವ ಲೇಡಿ ಕಾನ್ಸ್‌ಟೇಬಲ್ ವನಜಾಕ್ಷಿ. ಹಸು ರೂಪಾಗೆ ಸೇರಿದ್ದು ಎಂಬುದು ತಿಳಿದು ಪರಿಹಾರ ಕೊಡುವಂತೆ ರೂಪಾದೇವಿಗೆ ಒತ್ತಡ ಹಾಕುತ್ತಿದ್ದ ಮಹಿಳಾ ಪೇದೆ. ಆದರೆ ಹಣ ನೀಡದ್ದಕ್ಕೆ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದಿರೋ ಪೊಲೀಸರು. ಠಾಣೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳಾ ಪೇದೆಯಿಂದ ರೂಪಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ವಯಸ್ಸಾದ ಬಡ ಮಹಿಳೆ ಮೈಮೇಲೆ ಥಳಿಸಿರುವ ಪೊಲೀಸರು. ಕೈ ಕಾಲು ಮೊಣಕಾಲಿಗೆ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ನಡೆಯಲಾಗದಂತೆ ನರಳುತ್ತಿರುವ ಮಹಿಳೆ.
ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ನೋಡುವ ವೇಳೆ ಗೂಳಿ ತಿವಿದು ವಿದ್ಯಾರ್ಥಿ ಸಾವು!
ಪ್ರತಿಭಟನೆಗೆ ಮುಂದಾದ ಹೋರಾಟಗಾರರು
ಮಹಿಳೆ ಮೇಲೆ ಹಲ್ಲೆ ನಡೆದ ಘಟನೆ ತಿಳಿದು ಸಹಾಯಕ್ಕೆ ದಾವಿಸಿದ ಹೋರಾಟಗಾರರು. ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆ ಪೊಲೀಸರ ದೌರ್ಜನ್ಯ ಖಂಡಿಸಿ ಹೋರಾಟ ನಡೆಸಲು ಮುಂದಾಗಿರುವ ಮುಖಂಡರು.