ಹಳೆಯ ದ್ವೇಷಕ್ಕೆ ಈ ಶಿಕ್ಷಕ ಎಂಥಾ ಕೆಲಸ ಮಾಡಿದ್ದ/ ಹಳೆಯ ಕ್ಲಾಸ್ ಮೇಟ್ ನಂಬರ್ ಅನ್ನು ಶೌಚಾಲಯದಲ್ಲಿ ಬರೆದ/ ಸೆಕ್ಸ್ ವರ್ಕರ್ ಎಂದು ಬರೆದು ಹಗೆ ತೀರಿಸಿಕೊಂಡಿದ್ದ./ ಮಹಿಳಾ ಅಧಿಕಾರಿಗೆ ತಲೆನೋವು
ಚಿಕ್ಕಮಗಳೂರು (ಡಿ. 24) ಇದಕ್ಕಿಂತ ನೀಚ ಕೆಲಸ ಇನ್ನೊಂದು ಇರಲಿಕ್ಕಿಲ್ಲ. ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ 33 ವರ್ಷದ ಕಡೂರಿನ ಸತೀಶ್ ಸಿಎಂ ಮಹಿಳಾ ಪೊಲೀಸ್ ಪೇದೆಯೊಬ್ಬರ ನಂಬರ್ ಅನ್ನು ಬರೆಯಬಾರದ ಜಾಗದಲ್ಲೆಲ್ಲಾ ಬರೆದಿದ್ದಾನೆ.
ಸಾರ್ವಜನಿಕ ಶೌಚಾಯದ ಗೋಡೆ, ಬಸ್ ನಿಲ್ದಾಣಗಳ ಗೋಡೆ ಮೇಲೆ ಮಹಿಳಾ ಪೊಲೀಸ್ ಸಿಬ್ಬಂದಿಯ ನಂಬರ್ ಬರೆದು ಕೆಳಗೆ ಸೆಕ್ಸ್ ವರ್ಕರ್ ಎಂದು ತಿಳಿಸಿ ಯಾವಾಗ ಬೇಕಾದರೂ ಕರೆಮಾಡಬಹುದು ಎಂದಿದ್ದಾನೆ.
'ಪಿರಿಯಡ್ಸ್ ಇದ್ದ ದಿನ ಮದುವೆಯಾದ ಹೆಂಡತಿ ನನಗೆ ಬೇಡ'
ಇದಾದ ಮೇಲೆ ಪೊಲೀಸ್ ಅಧಿಕಾರಿ 32 ವರ್ಷದ ನಂದಿನಿ(ಹೆಸರು ಬದಲಾಯಿಸಲಾಗಿದೆ?ಗೆ ನಿರಂತರ ಕರೆಗಳು ಬರಲು ಆರಂಭಿಸಿದೆ. ಯಾರಿಂದಲೋ ನಿಮ್ಮ ದೂರವಾಣಿ ಸಂಖ್ಯೆ ಕಡೂರಿನ ಸಾರ್ವಜನಿಕ ಶೌಚಾಲಯದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿದೆ.
ಡಿಸೆಂಬರ್ 15 ರಂದು ಮಹಿಳಾ ಅಧಿಕಾರಿ ಗಂಡನೊಂದಿಗೆ ಕಡೂರಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಇದು ಸತೀಶನ ಕೈಬರಹ ಎಂದು ಅಧಿಕಾರಿಗೆ ಗೊತ್ತಾಗಿದೆ. ಇಬ್ಬರು 2006-07 ರ ಸಮಯದಲ್ಲಿ ಒಂದೇ ಕಡೆ ಓದುತ್ತಿದ್ದರು.
ಕ್ಲಾಸ್ ಮೇಟ್ಸ್ ವಟ್ಸಾಪ್ ಗ್ರೂಪ್ ಸಿದ್ಧಮಾಡಿದ್ದಾಗ ಇಬ್ಬರು ಮತ್ತೆ ಸೇರಿಕೊಂಡಿದ್ದರು. ಸತೀಶ್ ನಂದಿನಿಗೆ ಮೇಲಿಂದ ಮೇಲೆ ಕರೆ ಮಾಡಲು ಆರಂಭಿಸಿದ್ದ ಆದರೆ ಈಕೆ ತಿರಸ್ಕಾರ ಮಾಡುತ್ತಿದ್ದಳು. ಇದಾದ ಮೇಲೆ ಆಕೆಯನ್ನು ವಾಟ್ಸಾಪ್ ಗ್ರೂಪಿನಿಂದ ತೆಗೆದು ಹಾಕಲಾಗಿತ್ತು. ಆದರೆ ಉಳಿದವರು ಮತ್ತೆ ಆಡ್ ಮಾಡಿದ್ದರು. ವಾಟ್ಸಪ್ ಗ್ರೂಪ್ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆದಿತ್ತು. ಅಂತಿಮವಾಗಿ ದ್ವೇಷ ತೀರಿಸಿಕೊಳ್ಳಲು ಸತೀಶ್ ಇಂಥ ಕೆಲಸ ಮಾಡಿದ್ದ.