Asianet Suvarna News Asianet Suvarna News

Belagavi: 'ನಗುತಾ ನಗುತಾ ಬಾಳು ನೀನು..' ಎಂದು ಹಾಡಿದವನನ್ನೇ ಮುಗಿಸಿಬಿಟ್ರು ಸ್ನೇಹಿತರು!


ಗೆಳೆಯನ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಆತ, ನಗುತಾ ನಗುತಾ ಬಾಳು ನೀನು ಅಂತಾ ಹಾಡು ಹೇಳಿದ್ದ. ಆದರೆ, ಅದೇ ಸ್ನೇಹಿತನನ್ನು ಆತನ ಗೆಳೆಯರೇ ಕೊಲೆ ಮಾಡಿದ ಘಟನೆ ಬೆಳಗಾವಿ ನಿಲ್ಲೆಯ ಸವದತ್ತಿಯಲ್ಲಿ ನಡೆದಿತ್ತು.

ಬೆಳಗಾವಿ (ಜೂ.7): ಅವನು ವಿದ್ಯಾವಂತ. ಡಿಗ್ರಿಯಲ್ಲಿ ಗೋಲ್ಡ್​​ ಮೆಡಲಿಸ್ಟ್​​. ಇಡೀ ಗ್ರಾಮದಲ್ಲೇ ಒಳ್ಳೆ ಹುಡುಗ ಅಂತೆನ್ನಿಸಿಕೊಂಡಿದ್ದವನು. ಇನ್ನೂ ಆತನ ಕುಟುಂಬ ಕೂಡ ಸುಶಿಕ್ಷಿತ ಕುಟುಂಬ. ಅಣ್ಣ ಪೊಲೀಸ್​​ ಕಾನ್ಸ್​​ಟೇಬಲ್​​. ತಂದೆ ಇಲ್ಲದಿದ್ರೂ ಕಷ್ಟಪಟ್ಟು ಓದುತ್ತಿದ್ದ ಹುಡುಗ ಅವನು. ಆದರೆ, ಆವತ್ತೊಂದು ದಿನ ಬರ್ತಡೇ ಪಾರ್ಟಿಗೆ ಅಂತ ಹೋದವನು ಹೆಣವಾಗಿ ಹೋಗಿದ್ದ.

ಅವನನ್ನ ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ದರು. ಆದರೆ,  ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಆತ ಕೊಲೆಯಾಗಿದ್ದು ತನ್ನವರಿಂದಲೇ ಅಂತ ಅಷ್ಟೇ ಅಲ್ಲ ಅವನ ಕೊಲೆಗೆ ಕಾರಣ ಹವಾ ಮೇಂಟೇನ್​​​ ಮಾಡೋಕೆ ಅಂತ.. ಹಾಗಾದ್ರೆ ಅವನನ್ನ ಕೊಂದವರು..? ಏನದು ಹವಾ..?

Koppal: ಪ್ರೀತಿಸಿದವಳು ತಮ್ಮನ ಹೆಂಡ್ತಿಯಾದ್ಲು.. ಹಿಂದು ಮಹಿಳೆಯ ಇಡೀ ಕುಟುಂಬವನ್ನೇ ಕೊಂದ ಆಸಿಫ್‌! 

ಯಸ್​​.. ಒಟ್ಟಿಗೆ ಆಡಿ ಬೆಳೆದವರೇ ಬಸವರಾಜನನ್ನ ಕೊಂದು ಮುಗಿಸಿದ್ರು.. ಅಷ್ಟಕ್ಕೂ ಸ್ನೇಹಿತರೇ ಅವನನ್ನ ಕೊಲೆ ಮಾಡಿದ್ದೇಕೆ..? ಅಂಥಹ ತಪ್ಪು ಆತ ಮಾಡಿದ್ದೇನು..? ಅಷ್ಟಕ್ಕೂ ಆವತ್ತು ಬರ್ತಡೇ ಪಾರ್ಟಿಯಲ್ಲಿ ನಡೆದಿದ್ದೇನು..?