ಸ್ವೀಟ್ ವಾಯ್ಸ್ ಕೇಳಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದವನ ಕತೆ ಏನಾಯ್ತು?

By Suvarna News  |  First Published Aug 30, 2020, 7:17 PM IST

ತಿಂಗಳುಗಟ್ಟಲೆ ವಾಟ್ಸಪ್ ಚಾಟ್/ ಮಾತು ನಂಬಿ ಬಟ್ಟೆ ಕಳಚಿದ/ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್/  ಒಂದಿಷ್ಟು ಹಣ ಕೊಟ್ಟರೂ ತಪ್ಪದ ಕಾಟ/ ಅಂತಿಮವಾಗಿ ಪೊಲೀಸರ ಮೊರೆ


ಮುಂಬೈ(ಆ. 30)    ಸ್ನೇಹಿತೆಯ ಮಾತು ನಂಬಿ ಬೆತ್ತಲೆ ವಿಡಿಯೋ ಮಾಡಿಕೊಂಡು ಹಣ ಕಳೆದುಕೊಂಡ ಬೆಂಗಳೂರಿನಿಂದ ವರದಿಯಾಗಿತ್ತು. ಇದೀಗ ಮುಂಬೈನಿಂದ ಅಂಥದ್ದೆ ಪ್ರಕರಣ ವರದಿಯಾಗಿದೆ. 

ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗುವಂತೆ ಪುಸಲಾಯಿಸಿ ನಾನು ಹಾಗೆ ಮಾಡಿದ ನಂತರ ನನ್ನಿಂದ ಮಹಿಳೆಯೊಬ್ಬರು 37  ಸಾವಿರ ಕಸಿದುಕೊಂಡಿದ್ದಾರೆ ಎಂದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ದೂರು ದಾಖಲಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿಯ ಬೆತ್ತಲೆ ನೃತ್ಯ

Tap to resize

Latest Videos

ಮುಂಬೂನ ಭಯಾಂಡರ್ ನಿವಾಸಿಯಾಗಿರುವ ವ್ಯಕ್ತಿ ದೂರು ನೀಡಿದ್ದಾರೆ. ಜುಲೈನಲ್ಲಿ ಕರೆ ಮಾಡಿದ ಮಹಿಳೆ ಅಲ್ಲಿಂದ ನನ್ನ ಜತೆ ವಾಟ್ಸಪ್ ಚಾಟ್ ಶುರುಮಾಡಿದರು. ಒಂದು ದಿನ ನನ್ನನ್ನು ಪುಸಲಾಯಿಸಿ ಬೆತ್ತಲೆಯಾಗಿ ಮಾತನಾಡಿಸಿದಳು. ನಂತರ ಹಣಕ್ಕೆ ಬೇಡಿಕೆ ಇಟ್ಟಳು ಎಂದು ದೂರಿನಲ್ಲಿ ವ್ಯಕ್ತಿ ಹೇಳಿದ್ದಾರೆ.

ಬೆತ್ತಲೆ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡವರು ಇದನ್ನು ಅಪ್ ಲೋಡ್ ಮಾಡಬಾರದು ಎಂದರೆ 50 ಸಾವಿರ ಕೊಡಬೇಕು ಎಂದು ಹೇಳಿದ್ದಾರೆ. ಕೊನೆಗೆ  37 ಸಾವಿರಕ್ಕೆ ಒಪ್ಪಿದ್ದು ಈ ವಾಲೆಟ್ ಮೂಲಕ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ತಾನು ಸಿಬಿಐನಿಂದ ಎಂದಲೂ ಮಾತನಾಡಿದ್ದಾನೆ.

ಹಣ ಕೊಟ್ಟ ಮೇಲೆ ಸುಮ್ಮನಾಗದೆ ಇನ್ನಷ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.  ಸಂಕಷ್ಟ ತಾಳಲಾರದೆ ವ್ಯಕ್ತಿ ಅಂತಿಮವಾಗಿ ಪೊಲೀಸ್ ಮೊರೆ ಹೋಗಿದ್ದಾನೆ. ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯ ಮಾಡಿಕೊಂಡು ಯುವಕರನ್ನು ವಂಚಿಸುವ ಜಾಲವೊಂದು ನಿಧಾನಕ್ಕೆ ತಲೆ ಎತ್ತಿದ್ದು ಇದೊಂದು ಹೊಸ ರೀತಿಯ ಸೈಬರ್ ಅಪರಾಧವಾಗಿ ರೂಪಣೆಯಾಗುತ್ತಿದೆ. 

ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್

"

click me!