ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್

By Kannadaprabha NewsFirst Published Jul 16, 2022, 4:32 AM IST
Highlights

ಮನೆಗೆಲಸಗಾರರ ಸೋಗಿನಲ್ಲಿ ವಯೋವೃದ್ಧರಿಗೆ ಮಸಾಜ್‌ ಮಾಡುವುದಾಗಿ ಹೇಳಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳು ಮಾರತ್‌ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗೆಲಸಗಾರರ ಸೋಗಿನಲ್ಲಿ ವಯೋವೃದ್ಧರಿಗೆ ಮಸಾಜ್‌ ಮಾಡುವುದಾಗಿ ಹೇಳಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳು ಮಾರತ್‌ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಆಂಧ್ರಪ್ರದೇಶ ರಾಜ್ಯದ ಕದ್ರಿ ತಾಲೂಕಿನ ಅಕ್ಕಿಂಮಣಿ ಅಲಿಯಾಸ್‌ ಲಕ್ಷ್ಮಿ ಬಂಧಿತಳಾಗಿದ್ದು, ಆರೋಪಿಯಿಂದ .13 ಲಕ್ಷ ಮೌಲ್ಯದ 271 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮುನೇನಕೊಳಲು ಸಮೀಪದ ಇಸ್ರೋ ಲೇಔಟ್‌ನಲ್ಲಿ ವೃದ್ಧರೊಬ್ಬರ ಮನೆಗೆ ಕೆಲಸಕ್ಕೆ ಸೇರಿದ ಆರೋಪಿ, ಬಳಿಕ ಮಸಾಜ್‌ ನೆಪದಲ್ಲಿ ವೃದ್ಧರನ್ನು ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಊರಿನಲ್ಲಿ ತೋಟ:

ಲಕ್ಷ್ಮೇ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆಕೆಯ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಆಂಧ್ರದಿಂದ ನಗರಕ್ಕೆ ಬರುತ್ತಿದ್ದ ಆರೋಪಿ, ವಸತಿ ಪ್ರದೇಶಗಳಲ್ಲಿ ಸುತ್ತಾಡಿ ವಯಸ್ಸಾದವರಿರುವ ಮನೆಗಳಿಗೆ ಕೆಲಸಕ್ಕೆ ಸೇರುತ್ತಿದ್ದಳು. ಒಂದೆರಡು ದಿನಗಳು ಚೆನ್ನಾಗಿ ಕೆಲಸ ಮಾಡಿ ಮನೆ ಮಾಲಿಕರ ವಿಶ್ವಾಸ ಸಂಪಾದಿಸುತ್ತಿದ್ದ ಆಕೆ, ಆನಂತರ ತನ್ನ ಕೈ ಚಳಕ ತೋರಿಸುತ್ತಿದ್ದಳು. ಅಂತೆಯೇ ಮುನೇನಕೊಳಲು ಸಮೀಪದ ಇಸ್ರೋ ಲೇಔಟ್‌ನಲ್ಲಿ ಮನೆಗೆಲಸಕ್ಕೆ ಲಕ್ಷ್ಮಿ ಸೇರಿಕೊಂಡಿದ್ದಳು. ಆಗ ಮೈ ನೋವಿನಿಂದ ಬಳಲುತ್ತಿದ್ದ ಮನೆ ಮಾಲಿಕರ ತಾಯಿಗೆ ಬಾಡಿ ಮಸಾಜ್‌ ಮಾಡುತ್ತೇನೆ ಎಂದು ನಂಬಿಸಿ ಅವರ ಕತ್ತಿನಲ್ಲಿದ್ದ 75 ಗ್ರಾಂ ಚಿನ್ನದ ಸರವನ್ನು ಬಿಚ್ಚಿಸಿ ಮಸಾಜ್‌ ಮಾಡಿದ್ದಳು.

ಮಗನನ್ನು ಬಿಡುವಂತೆ ಬೇಡಿಕೊಂಡ ತಾಯಿಯಿಂದ ಮಸಾಜ್‌ ಮಾಡಿಸಿಕೊಂಡ ಪೊಲೀಸ್‌

ಆನಂತರ ಸ್ನಾನ ಮಾಡುವಂತೆ ಕಳುಹಿಸಿ ಅವರು ಸ್ನಾನಗೃಹದಿಂದ ಹೊರ ಬರುವ ವೇಳೆ ಇನ್ನುಳಿದ ಆಭರಣ ಕದ್ದು ಕಾಲ್ಕಿತ್ತಿದ್ದಳು. ಈ ಹೊರಬರುವಷ್ಟರಲ್ಲಿ ಚಿನ್ನದ ಸರ ಕದ್ದು ಪರಾರಿ ಆಗಿದ್ದಳು. ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಜಮೀನಿನಲ್ಲಿ ಬೋರ್‌ವೆಲ್‌ ಕೊರಿಸಿ ತೋಟ ಮಾಡಿದ್ದಳು. ಹೀಗೆ ಹಣದ ಅವಶ್ಯಕತೆ ಇದ್ದಾಗ ಬೆಂಗಳೂರಿಗೆ ಬಂದು ಕಳ್ಳತನ ಕೃತ್ಯ ಎಸಗಿ ಪರಾರಿಯಾಗುತ್ತಿದ್ದಳು. ಇದೇ ಕೆ.ಆರ್‌.ಪುರ, ಮಾರತ್ತಹಳ್ಳಿ ಹಾಗೂ ರಾಜಾಜಿನಗರ ಸೇರಿದಂತೆ ನಾಲ್ಕು ಕಡೆ ಮನೆಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು ತನ್ನ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ... ಬೆಚ್ಚಿ ಬೀಳಿಸುತ್ತಿದೆ ವರದಿ

click me!