ಮನೆ ಬಾಡಿಗೆ ಕೇಳಿದ ಮಾಲೀಕರ ಮೇಲೆ ಮಹಿಳೆಯಿಂದ ಹಲ್ಲೆ

Published : Nov 01, 2020, 07:42 AM IST
ಮನೆ ಬಾಡಿಗೆ ಕೇಳಿದ ಮಾಲೀಕರ ಮೇಲೆ ಮಹಿಳೆಯಿಂದ ಹಲ್ಲೆ

ಸಾರಾಂಶ

ಮನೆ ಬಾಡಿಗೆದಾರರ ಹಲ್ಲೆ ಮಾಡಿದ್ದ ಮಹಿಳೆಯ ಸೆರೆ| ಮನೆ ಬಾಡಿಗೆ ವಿಚಾರವಾಗಿ ಮಾಲೀಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರೋಪಿ| ಲಾಕ್‌ ಡೌನ್‌ ವೇಳೆ ಕೆಲಸ ಕಳೆದುಕೊಂಡ ಕಾರಣಕ್ಕೆ ಎರಡು ತಿಂಗಳು ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಆರೋಪಿ| 

ಬೆಂಗಳೂರು(ನ.01): ತನ್ನ ಮನೆ ಬಾಡಿಗೆದಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಗ್ಗನಹಳ್ಳಿ ಮಾರುತಿ ನಗರದ ಮಹಾಲಕ್ಷ್ಮೀ ಬಂಧಿತಳಾಗಿದ್ದು, ಮನೆ ಬಾಡಿಗೆ ವಿಚಾರವಾಗಿ ಪೂರ್ಣಿಮಾ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಳು. ಈ ಬಗ್ಗೆ ಸಂತಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೊಪ್ಪಳ: ಕೊಲೆ ಪ್ರಕ​ರಣ ಭೇದಿಸುವ ನೆಪ​ದಲ್ಲಿ ಅಮಾ​ಯ​ಕ​ರಿಗೆ ಥಳಿ​ತ?

ಮಹಾಲಕ್ಷೀ ಮನೆಯಲ್ಲಿ ನೆಲೆಸಿದ್ದ ಪೂರ್ಣಿಮಾ ದಂಪತಿ, ಮಾಲೀಕಳಿಗೆ ಮಾಸಿಕ 5,500 ಬಾಡಿಗೆ ಪಾವತಿಸುತ್ತಿದ್ದರು. ಆದರೆ ಲಾಕ್‌ ಡೌನ್‌ ವೇಳೆ ಕೆಲಸ ಕಳೆದುಕೊಂಡ ಕಾರಣಕ್ಕೆ ಎರಡು ತಿಂಗಳು ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂತ್ರಸ್ತೆ ಮೇಲೆ ಮಹಾಲಕ್ಷೀ ಗಲಾಟೆ ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರೀತಿಯ ಹುಚ್ಚಾಟ! ಪ್ರಿಯಕರನಿಗೆ ಹೊಸ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಚಿನ್ನವನ್ನೇ ಕದ್ದ 19 ರ ಹರೆಯದ ಯುವತಿ!
ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್​