
ಬೆಂಗಳೂರು (ನ. 02) ಇದೊಂದು ವಿಚಿತ್ರ ಪ್ರಕರಣ. ಪೋರ್ನ್ (Porn) ಅಡಿಕ್ಟ್ ಆದ ಗಂಡ (Husband) ಕಾಲ್ ಗರ್ಲ್ಸ್ ಮೇಲೆಯೂ ಹಣ ಸುರಿಯಲು ಆರಂಭಿಸಿದ್ದ. ಬೇಸತ್ತ ಪತ್ನಿ(Wife) ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಚೆಸ್ತಾ(ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನ ಬಸವನಗುಡಿಯಲ್ಲಿ(Bengaluru Basavanagudi) ವಾಸವಿದ್ದಾರೆ. ಗಂಡನ ಅತಿಯಾದ ಪೋರ್ನ್ ಚಟದಿಂದ ಬೇಸತ್ತು ನ್ಯಾಯ ದೊರಕಿಸಿಕೊಡಿ ಎಂದಿದ್ದಾಳೆ.
2019 ರಲ್ಲಿ ಸುರೇಶ್( ಹೆಸರು ಬದಲಾಯಿಸಲಾಗಿದೆ) ಎಂಬುವರ ಜತೆ ಚೆಸ್ತಾ (Marriage) ವಿವಾಹವಾಗಿದ್ದರು. ವರದಕ್ಷಿಣೆ ಹೆಸರಿನಲ್ಲಿ ಒಂದು ಲಕ್ಷ ಚಿನ್ನ ಮತ್ತು ಎರಡು ಲಕ್ಷ ನಗದನ್ನು ಪಡೆದುಕೊಂಡಿದ್ದ. ನಮತರ ಗಂಡ ಪೋರ್ನ್ ಗೆ ಅಡಿಕ್ಟ್ ಆಗಿದ್ದು ಗೊತ್ತಾಗಿದೆ. ರಾತ್ರಿ ವೇಳೆ ನಿದ್ದೆಯನ್ನೇ ಮಾಡದೆ ಕಾಲ್ ಗರ್ಲ್ ಗಳ ಜತೆ ಗಂಡ ಬ್ಯುಸಿಯಾಗಿರುತ್ತಿದ್ದ.
ಪೋರ್ನ್ ದಾಸ ಪತಿಯಿಂದ ಪ್ರತಿ ದಿನ ಇದೇ ಕೆಲಸ.. ಪತ್ನಿಯ ಗೋಳು!
ಮನೆಯಲ್ಲಿ ವಿಷಯ ಗೊತ್ತಾದಾಗ ಸುರೇಶ್ ಗೆ ಒಂದು ಅವಕಾಶ ಮಾಡಿಕೊಡು ಎಂದು ಗಂಡನ ಪೋಷಕರು ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿ ತಿಂಗಳುಗಳೇ ಕಳೆದರೂ ಗಂಡನ ವರ್ತನೆಯಲ್ಲಿ ಯಾವ ಬದಲಾವಣೆಯಾಗಿಲ್ಲ.
ಇನ್ನೊಂದು ಕಡೆ ಚೆಸ್ತಾ ಮೇಲೆಯೇ ದೌರ್ಜನ್ಯ ಆರಂಭವಾಗಿದೆ. ಗಂಡನ ಪೋಷಕರು ಆತನ ಬೆಂಬಲಕ್ಕೆ ನಿಂತಿದ್ದಾರೆ. ಪ್ರಶ್ನೆ ಮಾಡಿದ್ದಕೆ ಕುಟುಂಬದ ಸಮಾರಂಭಗಳಿಗೂ ಈಕೆಯನ್ನು ಬಿಟ್ಟು ಹೋಗಲು ಆರಂಭಿಸಿದ್ದಾರೆ. ಇಷ್ಟೇ ಅಲ್ಲದೆ ಗಂಡ ತನ್ನ ಪೋಟೋಗಳನ್ನು ಕಾಲ್ ಗರ್ಲ್ ಗಳ ಜತೆ ಶೇರ್ ಮಾಡಿಕೊಂಡಿದ್ದು ನನ್ನ ಹೆಸರಿನಲ್ಲಿಯೂ ಖಾತೆಯೊಂದನ್ನು ತೆರೆಯಬೇಕು ಎಂದಿದ್ದ ಎಂದು ಮಹಿಳೆ ದೂರಿನಲ್ಲಿನ ಆರೋಪಿಸಿದ್ದು ಡೀವೋರ್ಸ್ ಹಂತಕ್ಕೆ ಹೋಗಿ ನಿಂತಿದೆ.
ಮಹಾರಾಷ್ಟ್ರದ ನಾಗಪುರದಿಂದ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು. ಪೋರ್ನ್ ಗೆ ಅಡಿಕ್ಟ್ ಆಗಿದ್ದ ಗಂಡ ಪತ್ನಿಯನ್ನು ನಿಸರ್ಗಕ್ಕೆ ವಿರೋಧವಾದ ರೀತಿಯ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಮೊದಲನೆ ಮದುವೆಯನ್ನು ಮುಚ್ಚಿಟ್ಟು ಮದುವೆಯಾಗಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ