
ನವದೆಹಲಿ(ಜೂ.03): ಗಂಡ ಹೆಂಡತಿಯ ನಡುವೆ ಜಗಳವಾಗೋದು ಸಾಮಾನ್ಯ. ಇದು ಪ್ರತಿಯೊಂದು ಮನೆಯಲ್ಲಿ ನಡೆಯುವಂತಹುದ್ದು. ಗಂಡ ಹೆಂಡತಿಯ ಜಗಳ ತೀವ್ರಗೊಂಡು ಮಾರಾಮಾರಿ, ಹತ್ಯೆಗೈಯ್ಯುವ ಸುದ್ದಿಗಳೂ ವರದಿಯಾಗುತ್ತವೆ. ಆದರೆ ದೆಹಲಿಯಲ್ಲಿ ನಡೆದ ಘಟನೆಯ ಕುರಿತು ಕೆಳಿದ್ರೆ ನಿಜ್ಕಕೂ ಅಚ್ಚರಿಯಾಗುತ್ತದೆ.
ದೆಹಲಿಯ ತ್ರಿಲೋಕಪುರಿಯಲ್ಲಿ ಗಂಡನೊಬ್ಬ ತನ್ನ ಹೆಂಡತಿಯನ್ನು ಸುಟ್ಟು ಹಾಕಲು ಪೆಟ್ರೋಲ್ ತೆಗೆದುಕೊಂಡು ಬಂದಿದ್ದ. ಆತ ಮೊದಲು ಹೆಂಡತಿಗೆ ಬೆಂಕಿ ಹಚ್ಚಿ ಬಳಿಕ ಸಾಯಲು ಯತ್ನಿಸಿದ್ದ. ಆದರೆ ಸೂಕ್ತ ಸಮಯದಲ್ಲಿ ಹೆಂಡತಿಯೇ ಆತನನ್ನು ಕಾಪಾಡಿದ್ದಾಳೆ. ಗಂಡನಿಗೆ ಬೆಂಕಿ ತಾಗಿದ್ದು ನೋಡಿದ ಹೆಂಡತಿ ಅದೇಗೋ ಆತನನ್ನು ರಕ್ಷಿಸಿದ್ದಾಳೆ. ಬಳಿಕ ಗಾಯಗೊಂಡ ಆತನನ್ನು ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೊದಲೂ ಜಗಳಗಳಾಗುತ್ತಿತ್ತು
ಇಲ್ಲಿನ ಸ್ಥಳೀರ ಅನ್ವಯ ಕೊರೋನಾದಿಂದಾಗಿ ಹಾಕಲಾದ ಲಾಕ್‌ಡೌನ್‌ಗೂ ಮೊದಲು ಆರಿಫ್ ಮೀರತ್‌ಗೆ ತೆರಳಿದ್ದ. ಲಾಕ್‌ಡೌನ್‌ನಿಂದಾಗಿ ಆತ ಅಲ್ಲೇ ಸಿಕ್ಕಾಕೊಂಡಿದ್ದ. ಲಾಕ್‌ಡೌನ್ ಸಡಿಲಿಕೆ ಬಳಿಕ ಆತ ಕೆಲ ದಿನಗಳ ಹಿಂದೆ ದೆಹಲಿಗೆ ಮರಳಿದ್ದ. ಹೀಗಿರುವಾಗ ಆರಿಫ್ ಹಾಗೂ ಆತನ ಹೆಂಡತಿ ನಡುವೆ ಸಾಮಾನ್ಯವಾಗಿ ಜಗಳಗಳಾಗುತ್ತಿತ್ತು. ಲಾಕ್‌ಡೌನ್ ನಡುವೆ ಇಬ್ಬರು ದೂರವಿದ್ದರೂ ಈ ವಿವಾದಗಳಿಗೆ ತೆರೆ ಬಿದ್ದಿರಲಿಲ್ಲ. ಹೀಗಾಗಿ ಇದನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದ ಆರಿಫ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಇದರ ಅನ್ವಯ ಹೆಂಡತಿಗೆ ಬೆಂಕಿ ಚ್ಚಿ ಬಳಿಕ ತಾನೂ ಆತ್ಮಹತ್ಯೆ ಮಾಡಲು ನಿರ್ಧರಸಿದ್ದಾನೆ.
ಪತ್ನಿಯನ್ನು ಕೊಲ್ಲಲು ಆರಿಫ್ ಪೆಟ್ರೋಲ್ ತಂದಿದ್ದ ಹಾಗೂ ತನ್ನ ಯೋಜನೆ ಅನ್ವಯ ಮಂಗಳವಾರ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಬಳಿಕ ಆತ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಹೀಗಿರುವಾಗ ಗಂಡನೆ ಯೋಜನೆ ಅರಿತ ಹೆಂಡತಿ ಪ್ರಾಣ ರಕ್ಷಿಸಲು ಯತ್ನಿಸಿದ್ದಾಳೆ. ನೋಡ ನೋಡುತ್ತಿದ್ದಂತೆಯೇ ಆರಿಫ್ ಮೈಗೂ ಬೆಂಕಿ ತಾಗಿದೆ. ಗಂಡ ಸುಡುತ್ತಿರುವುದನ್ನು ನೋಡಿ ಹೆಂಡತಿ ಕೂಡಲೇ ಒಂದು ಹೊಡಿಕೆಯನ್ನು ಹಾಕಿ ಬೆಂಕಿ ನಂದಿಸಿದ್ದಾಳೆ.
ಈ ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಸದ್ಯ ಗಾಯಾಳು ಆರಿಫ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ