
ಕೊಪ್ಪಳ(ಜು.06): ಮದುವೆಯಾಗಿ, ಮಕ್ಕಳಾಗಿದ್ದರೂ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತ್ನಿ, ತನ್ನ ಪತಿಯೇ ಇದಕ್ಕೆ ಅಡ್ಡಿಯಾಗುತ್ತಾನೆಂದು ಪತಿಯನ್ನೇ ಕೊಂದ ಘಟನೆ ತಾಲೂಕಿನ ಅಳವಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಭೈರಾಪುರದಲ್ಲಿ ನಡೆದಿದೆ.
ನಿಂಗಪ್ಪ ಬೆಟಗೇರಿ ಕೊಲೆಯಾದ ವ್ಯಕ್ತಿ. ಪತ್ನಿ ಯಮನವ್ವ ಹಾಗೂ ಶಿವಕುಮಾರ ಎನ್ನುವವರೇ ಅನೈತಿಕ ಸಂಬಂಧವಿಟ್ಟುಕೊಂಡು ಕೊಲೆ ಮಾಡಿದ ಆರೋಪಿಗಳು. ಯಮನವ್ವನ ಅನೈತಿಕ ಸಂಬಂಧ ಗೊತ್ತಾಗಿ ನಿಂಗಪ್ಪ ಪತ್ನಿಯನ್ನು ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ. ಜು. 2ರಂದು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಕಣ್ಣಿಗೆ ಕಾರದಪುಡಿ ಎರಚಿ, ಪ್ರಿಯಕರನ್ನು ಕರೆಯಿಸಿ, ಆತನ ಮೂಲಕ ಕೊಲೆ ಮಾಡಿಸಿ, ಹಳ್ಳದಲ್ಲಿ ಹೂತು ಹಾಕಲಾಗಿತ್ತು. ಇದಾದ ಬಳಿಕ ನಿಂಗಪ್ಪ ಕಾಣೆಯಾದ ಪ್ರಕರಣ ಅಳವಂಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಮಗಳನ್ನು ಕೊಂದು ಕೃಷಿ ಹೊಂಡಕ್ಕೆ ಹಾಕಿದ ತಾಯಿ: 17ರ ಬಾಲೆಗೆ ಪ್ರೀತಿಯೇ ಉರುಳಾಯ್ತು
ಇದನ್ನು ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಉಪಾಧೀಕ್ಷ ವೆಂಕಟಪ್ಪ ನಾಯಕ, ಸಿಪಿಐ ರವಿ ಉಕ್ಕುಂದ ಅವರ ನೇತೃತ್ವದಲ್ಲಿ ಅಳವಂಡಿ ಠಾಣೆಯ ಪಿಎಸ್‌ಐ ಬಸವರಾಜ ಅಡವಿಬಾವಿ ಅವರ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ. ಆರೋಪಿಗಳು ತನಿಖೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ