ಪತಿಯ ಮರ್ಮಾಂಗ ಹಿಚುಕಿ ಸಾಯಿಸಿದ ಪತ್ನಿ; ಅಂತ್ಯಕ್ರಿಯೆ ನಡೆದು 15 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

By Ravi Janekal  |  First Published Mar 18, 2024, 11:10 PM IST

ವಿಪರೀತ ಕುಡಿದು ಬಂದು ಗಲಾಟೆ ಮಾಡುತ್ತಿದ್ದನೆಂಬ ಕಾರಣಕ್ಕೆ ಪತಿಯ ಮರ್ಮಾಂಗ ಹಿಚುಕಿ ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಂಬಾಣಿ ತಾಂಡಾದಲ್ಲಿ ನಡೆದಿದೆ.


ಕಾರವಾರ, ಉತ್ತರಕನ್ನಡ (ಮಾ.18): ವಿಪರೀತ ಕುಡಿದು ಬಂದು ಗಲಾಟೆ ಮಾಡುತ್ತಿದ್ದನೆಂಬ ಕಾರಣಕ್ಕೆ ಪತಿಯ ಮರ್ಮಾಂಗ ಹಿಚುಕಿ ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಂಬಾಣಿ ತಾಂಡಾದಲ್ಲಿ ನಡೆದಿದೆ.

ಟೋಪಣ್ಣ ಲಮಾಣಿ(44) ಎಂಬಾತ ಕೊಲೆಯಾದ ವ್ಯಕ್ತಿ, ಪತ್ನಿ ಶಾಂತವ್ವ ಲಮಾಣಿ ಎಂಬಾಕೆಯೇ ಪತಿಯನ್ನ ಕೊಲೆ ಮಾಡಿದ ಆರೋಪಿ. ಸಹಜ ಸಾವು ಎಂದು ಅಂತ್ಯಕ್ರಿಯೆ ಮಾಡಿದ ಹದಿನೈದು ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 

Tap to resize

Latest Videos

ಉತ್ತರ ಕನ್ನಡ: ಹಳಿಯಾಳದಲ್ಲಿ ಜಿಂಕೆ ಬೇಟೆ, ಇಬ್ಬರ ಬಂಧನ

ವಿಪರೀತ ಕುಡಿತದ ಚಟ ಹೊಂದಿದ್ದ ಟೋಪಣ್ಣ. ಪ್ರತಿ ದಿನವೂ ಮದ್ಯ ಸೇವನೆ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಶಾಂತವ್ವ. ಪತಿಯನ್ನ ಮುಗಿಸಲು ಸಂಚು ಮಾಡಿದ್ದಳು. ಎಂದಿನಂತೆ ಹದಿನೈದು ದಿನಳ ಹಿಂದೆಯೂ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದ ಪತಿ ಟೋಪಣ್ಣ. ಕುಡಿದು ನಿಶೆಯಲ್ಲಿದ್ದ ಪತಿಯ ಮರ್ಮಾಂಗ ಹಿಚುಕಿ ಕೊಲೆ ಮಾಡಿರುವ ಪತ್ನಿ. ಬಳಿಕ ಯಾರಿಗೂ ಅನುಮಾನ ಬಾರದಂತೆ, ಕುಡಿದ ನಿಶೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಕತೆ ಕಟ್ಟಿದ್ದಾಳೆ. 

ಟೋಪಣ್ಣ ಕುಡಿತದ ಚಟ ಕಂಡಿದ್ದ ಕುಟುಂಬಸ್ಥರು, ಸ್ಥಳೀಯರು ಸಹಜವಾಗಿ ಬಿದ್ದು ಸತ್ತಿರಬಹುದು ಎಂದು ನಂಬಿದ್ದಾರೆ. ಬಳಿಕರು ಕುಟಂಬಸ್ಥರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದರೆ ದಿನಗಳು ಕಳೆದಂತೆ ಶಾಂತವ್ವಳ ಬಾಯಿ ಸುಮ್ಮನಿರಬೇಕಲ್ಲ. ಯಾರೊಂದಿಗೆ ಮೊಬೈಲ್‌ನಲ್ಲಿ ಮಾತಾಡ್ತಾ ಹೆಚ್ಚು ಸಮಯ ಕಳೆಯುತ್ತಿದ್ದಳು. ಈ ವೇಳೆ ಮೊಬೈಲ್‌ನಲ್ಲಿ ಮಾತಾಡೋ ಭರದಲ್ಲಿ ಗಂಡನ ಮರ್ಮಾಂಗ ಹಿಚುಕಿ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇದನ್ನ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಹಿರಿಯರು ಸಭೆ ಸೇರಿ ಶಾಂತವ್ವ ಮೊಬೈಲ್ ಪೋನ್ ತಪಾಸಣೆ ಮಾಡಿ ವಿಚಾರಿಸಿದ್ದರು. ಈ ವೇಳೆ ಗಂಡನ ಮರ್ಮಾಂಗ ಹಿಚುಕಿ ಸಾಯಿಸಿರುವುದಾಗಿ ಒಪ್ಪಿಕೊಂಡ ಶಾಂತವ್ವ. 

ಮೊಟ್ಟೆ ಸಾರು ಮಾಡಿಲ್ಲ ಅಂತ ಲೀವಿಂಗ್ ಪಾರ್ಟ್‌ನರ್‌ ಹತ್ಯೆ

ಘಟನೆ ಸಂಬಂಧಿಸಿದಂತೆ ಇಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಆರೋಪಿ ಶಾಂತವ್ವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು.

click me!