ಗಂಡನನ್ನ ಕೊಲ್ಲಲ್ಲು ಪತ್ನಿ, ಮಗನೇ ಕೊಟ್ರು ಸುಪಾರಿ/ ಕೊಲೆಗೈದು ಅಪಘಾತ ಎಂದು ಬಿಂಬಿಸಿದ ಚಾಲಾಕಿ ಪತ್ನಿ ಹಾಗೂ ಪುತ್ರ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ/ ಸುಬ್ಬರಾಯಪ್ಪ ಕೊಲೆಯಾದ ವ್ಯಕ್ತಿ / ಕೊಲೆಯನ್ನ ಅಪಘಾತ ವೆಂದು ಬಿಂಬಿಸಿದ್ದ ಪತ್ನಿ ಯಶೋಧಮ್ಮ ಹಾಗೂ ದೇವರಾಜ್
ಬೆಂಗಳೂರು(ಮಾ. 18) ಗಂಡನನ್ನ ಕೊಲ್ಲಲ್ಲು ಪತ್ನಿ, ಮಗನೇ ಕೊಟ್ರು ಸುಪಾರಿ ಕೊಟ್ಟ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಗೈದು ಅಪಘಾತ ಎಂದು ಬಿಂಬಿಸಿದ ಚಾಲಾಕಿ ಪತ್ನಿ ಹಾಗೂ ಪುತ್ರನ ಕತೆ ಅನಾವರಣವಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಸುಬ್ಬರಾಯಪ್ಪ ಕೊಲೆಯಾದ ವ್ಯಕ್ತಿ. ಕೊಲೆಯನ್ನ ಅಪಘಾತ ವೆಂದು ಬಿಂಬಿಸಿದ್ದ ಪತ್ನಿ ಯಶೋಧಮ್ಮ ಹಾಗೂ ದೇವರಾಜ್ ಸಂಚು ಬಯಲಾಗಿದೆ.
ವಿವಾಹಕ್ಕೆ ಅಡ್ಡ ಬಂದ ಚಿಕ್ಕಪ್ಪನನ್ನೇ ಕೊಲೆ ಮಾಡಿದ
ಗಂಡನ ಕೊಲೆಗೆ 6 ಲಕ್ಷ ರೂ. ಸುಪಾರಿ ಕೊಟ್ಟಿದ್ದರು. ಯಶೋಧಮ್ಮ ಹಾಗೂ ಪುತ್ರ ದೇವರಾಜ್ ಬಳಿ ಹಣ ಪಡೆದು ಕೊಲೆಗೈದಿದ್ದ ಅನಿಲ್ ಎಂಬಾತ ಕೊಲೆ ಮಾಡಿದ್ದ. ಕೊಲೆ ಮಾಡಿ ರಸ್ತೆಯಲ್ಲಿ ಆಕ್ಸಿಡೆಂಟ್ ಎಂದು ನಂಬಿಸಲಾಗಿತ್ತು.
ಪೊಲೀಸ್ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ವೈಟ್ ಫೀಲ್ಡ್ ಸಂಚಾರಿ ಪೊಲೀಸರು ತಂಡ ರಚನೆ ಮಾಡಿದ್ದರು. ಈ ವೇಳೆ ಘಟನೆ ನಡೆದ ಸ್ಥಳದಲ್ಲಿ ಅಪಘಾತದ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಮೊಬೈಲ್ ಲಾಸ್ಟ್ ಕಾಲ್ ಹಾಗೂ ಸಿಸಿಟಿವಿ ದೃಶ್ಯದ ಆಧಾರದಿಂದ ಆರೋಪಿನ್ನು ಸೆರೆ ಹಿಡಿಯಲಾಯಿತು.
ಕೊಲೆಯಾದ ಸುಬ್ಬರಾಯಪ್ಪನಿಗೆ ಕೊನೆಬಾರಿಗೆ ಕಾಲ್ ಮಾಡಿದ್ದು ಅನಿಲ್ ಎನ್ನುವುದು ಗೊತ್ತಾಗಿದೆ. ಹಾಗೂ ಕೊಲೆಗೆ ಬಳಸಿದ ಸ್ಕಾರ್ಫಿಯೋ ಕಾರ್ ಮಾಲೀಕ ಕೂಡಾ ಅನಿಲ್ ನೇ ಆಗಿದ್ದ. ಕೊಲೆಯಾದ ಸಮಯದಲ್ಲಿ ಆ ರಸ್ತೆಯಲ್ಲಿ ಸ್ಕಾರ್ಫೀಯೋ ಕಾರ್ ನಲ್ಲಿ ಅನಿಲ್ ಹೋಗಿದ್ದ. ಈ ಹಿನ್ನೆಲೆ ಆತನ ಮೇಲೆ ಅನುಮಾನ ಬಂದು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸುಬ್ಬರಾಯಪ್ಪನ ಪತ್ನಿ ಯಶೋಧಮ್ಮ ಹಾಗೂ ಪುತ್ರ ದೇವರಾಜ್ ಬಳಿ ಕೊಲೆಗೆ ಸುಪಾರಿ ಪಡೆದುಕೊಂಡಿದ್ದ. ಮುಂಗಡವಾಗಿ 4 ಲಕ್ಷ ಹಣ ಪಡೆದಿದ್ದ ಅನಿಲ್ ಜೊತೆ ಸುನೀಲ್ ಕುಮಾರ್, ನಾಗೇಶ್, ಧನುಷ್ ಸೇರಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಿದ್ದರು. ಸದ್ಯ ಆರೋಪಿ ಅನಿಲ್ ನನ್ನ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.