Madhya Pradesh: ಡ್ರಗ್ಸ್‌ಗೆ ಹಣ ನೀಡಲಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ ಪತಿ..!

Published : Sep 14, 2022, 10:36 AM IST
Madhya Pradesh: ಡ್ರಗ್ಸ್‌ಗೆ ಹಣ ನೀಡಲಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ ಪತಿ..!

ಸಾರಾಂಶ

ಡ್ರಗ್ಸ್ ತೆಗೆದುಕೊಳ್ಳಲು ಹಣ ನೀಡಲಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಕೃತ್ಯಕ್ಕೂ ಮುನ್ನ ಪತ್ನಿಯನ್ನು ಥಳಿಸಿ, ಆಕೆಯ ಕೈಕಾಳು ಕಟ್ಟಿ ಹಾಕಿದ್ದಾನೆ ಎಂದೂ ತಿಳಿದುಬಂದಿದೆ.ವ

ತಾನು ಹೇಳಿದ ಮಾತನ್ನು ಕೇಳದ ಪತ್ನಿ ವಿರುದ್ಧ ಪತಿ ಮಾಡಿರುವ ಕೃತ್ಯ ಎಂಥದ್ದು ನೋಡಿ..  ಶಿಯೋಪುರ್ (Sheopur) ಜಿಲ್ಲೆಯಲ್ಲಿ ಅಂತಹ ಅಸಹ್ಯಕರ ಕೃತ್ಯ ನಡೆದಿದೆ. ಆರೋಪಿ ಪತಿ (Husband) ತನ್ನ ಪತ್ನಿಗೆ ಪಾಠ ಕಲಿಸಲು ಆಕೆಯ ಖಾಸಗಿ ಅಂಗಕ್ಕೆ (Private Part) ಫೆವಿಕ್ವಿಕ್ (Fevikwik) ಹಾಕಿದ್ದಾನೆ. ಇದಾದ ನಂತರ ಮಹಿಳೆಯ ಸ್ಥಿತಿ ಹದಗೆಟ್ಟಿದ್ದು,. ಆಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಈ ಘಟನೆ ಸಂಬಂಧ ಆರೋಪಿ ಪತಿಯನ್ನು ವಶಕ್ಕೆ ಪಡೆಯಲಾಗಿದೆ. ಇನ್ನು, ಇಂತಹ ಭಯಾನಕ ಕೃತ್ಯಕ್ಕೆ ಕಾರಣವಾದರೂ ಏನು ಅಂತೀರಾ.. ಮುಂದೆ ಓದಿ..

ಆರೋಪಿ ಡ್ರಗ್ಸ್‌ ವ್ಯಸನಿಯಾಗಿದ್ದು (Drug Addict), ಈ ಹಿನ್ನೆಲೆ ಆಗಾಗ್ಗೆ ಆತ ಪತ್ನಿಗೆ ಕಿರುಕುಳ ಕೊಡುತ್ತಿದ್ದ ಎಂದು ತಿಳಿದುಬಂದಿದೆ. ಇದೇ ರೀತಿ, ಇತ್ತೀಚೆಗೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೇನ್ ಹಾಸ್ಟೆಲ್ ಬಳಿ ವಾಸಿಸುತ್ತಿದ್ದ ಮಹಿಳೆಯಿಂದ ಆಕೆಯ ಪತಿ ಡ್ರಗ್ಸ್‌ ತೆಗೆದುಕೊಳ್ಳಲು ಹಣಕ್ಕೆ (Money) ಬೇಡಿಕೆ ಇಟ್ಟಿದ್ದ. ಮಾದಕ ವ್ಯಸನಿ ಪತಿಯ ಅಭ್ಯಾಸದಿಂದ ನೊಂದ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆ ಸಿಟ್ಟಿಗೆದ್ದ ಪತಿ, ಮನೆಯಲ್ಲಿದ್ದ ಪತ್ನಿಗೆ ಥಳಿಸಲು ಆರಂಭಿಸಿದ. ನಂತರ, ಆಕೆಯ ಕೈಕಾಲು ಕಟ್ಟಿ ಹಾಕಿದ್ದ. ಬಳಿಕ ಪತ್ನಿಯ ಖಾಸಗಿ ಅಂಗಕ್ಕೆ ಪತಿ ಫೆವಿಕ್ವಿಕ್ ಹಾಕಿದ್ದಾನೆ. ಇದಾದ ನಂತರ ಮಹಿಳೆಯ ಸ್ಥಿತಿ ಹದಗೆಟ್ಟಿದ್ದು, ಆಕೆ ಜೋರಾಗಿ ಕಿರುಚಲು ಪ್ರಾರಂಭಿಸಿದಳು ಎಂದು ತಿಳಿದುಬಂದಿದೆ.

ಇದನ್ನು ಓದಿ: Maharashtra: ಮಕ್ಕಳ ಕಳ್ಳರೆಂದು ತಪ್ಪು ತಿಳಿದು 4 ಸಾಧುಗಳನ್ನು ಬರ್ಬರವಾಗಿ ಥಳಿಸಿದ ಗ್ರಾಮಸ್ಥರು

ಮಹಿಳೆಯ ಕಿರುಚಾಟ ಕೇಳಿ ಸುತ್ತಮುತ್ತಲಿನವರು ಓಡಿ ಬಂದರು. ಇದಾದ ನಂತರ ಮಹಿಳೆಯನ್ನು ಪತಿಯಿಂದ ರಕ್ಷಿಸಲಾಗಿದೆ. ಇದೇ ವೇಳೆ ಕೊತ್ವಾಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರ ಮಾಹಿತಿ ತಿಳಿದ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಈ ಸಂಬಂಧ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ವಾಲಿ ಪೊಲೀಸರು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಈ ಮಧ್ಯೆ, ಮಾದಕ ವಸ್ತು ಕೊಡಿಸಲು ಪತ್ನಿಯಿಂದ ಆಗಾಗ್ಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಪತ್ನಿ ಹಣ ಕೊಡಲು ನಿರಾಕರಿಸಿದಾಗ ಆಕೆಗೆ ಥಳಿಸಿದ್ದಾರೆ. ಇದರೊಂದಿಗೆ ಪತಿ ಡ್ರಗ್ಸ್ ಸೇವನೆಗೆ ಚಡಪಡಿಸುತ್ತಿದ್ದಾಗ ಅಕ್ರಮ ಹಣ ದಂಧೆಯಲ್ಲಿ ತೊಡಗಿದ್ದ. ಆದರೂ, ಹೆಂಡತಿ ಹೇಗೋ ಮನೆ ನಡೆಸಿಕೊಂಡು ಹೋಗುತ್ತಿದ್ದಳು ಎಂದು ಮಧ್ಯ ಪ್ರದೇಶದ ಕೊತ್ವಾಲಿ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. 

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಈಗಲೂ ಸಹ ಪತ್ನಿಯನ್ನು ಪತಿ ಹಣಕ್ಕಾಗಿ ಪೀಡಿಸುವುದು, ವರ ದಕ್ಷಿಣೆ ಕೊಡಲಿಲ್ಲವೆಂದು ಹಲ್ಲೆ ಮಾಡುವುದು, ಜಗಳವಾಡುವುದು ಅಥವಾ ಕೊಲೆ ಮಾಡುವುದು ಇಂತಹ ಘಟನೆಗಳು ಈಗಳು ವರದಿಯಾಗುತ್ತಿರುವುದು ದುರದೃಷ್ಟಕರ. ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಇದರಿಂದಾಗಿ ಇಂತಹ ಕೃತ್ಯಗಳನ್ನು ನಡೆಯದಂತೆ ಸರ್ಕಾರ ತಡೆಯಬೇಕಿದೆ. 

ಇದನ್ನೂ ಓದಿ: Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು