ಬಾಗಲಕೋಟೆ: ಶಾಲಾ ವಾಹನ ಭೀಕರ ಅಪಘಾತ ನಾಲ್ವರು ಮಕ್ಕಳು ದುರ್ಮರಣ!

By Ravi Janekal  |  First Published Jan 29, 2024, 6:12 AM IST

ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮಕ್ಕಳು ದುರ್ಮರಣಕ್ಕೀಡ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.


ಬಾಗಲಕೋಟೆ (ಜ.29): ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮಕ್ಕಳು ದುರ್ಮರಣಕ್ಕೀಡ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

ಶ್ವೇತಾ ಪಾಟೀಲ (16) , ಸಾಗರ ಕಡಕೋಳ (17), ಗೋವಿಂದ ಜಂಬಗಿ  (13)  & ಬಸವರಾಜ್ ಕೊಟಗಿ (17) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮಕ್ಕಳ ದುರಂತ ಸಾವು ಕಂಡು ಪೋಷಕರು ಅಕ್ರಂದನ ಮುಗಿಲು ಮುಟ್ಟಿದೆ. 

Tap to resize

Latest Videos

undefined

ಘಟನೆ ಮಾಹಿತಿ ತಿಳಿದು ಸ್ಥಳ ಹಾಗೂ ಗಾಯಾಳು ದಾಖಲಾದ ಆಸ್ಪತ್ರೆಗೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಿಗೆ ವ್ಯಾಪಿಸಿದ್ದ ಬೆಂಕಿ ನಂದಿಸಲು ಹೋಗಿ ವೃದ್ಧ ದಂಪತಿಗಳು ಸಜೀವ ದಹನ!

ಕಾರು-ಬೈಕ್ ಮುಖಾಮುಖಿ ಡಿಕ್ಕಿ, ರೈತ ಸಾವು

ತಿಪಟೂರು: ತಾಲೂಕಿನ ಹೊನ್ನವಳ್ಳಿ-ತಿಮ್ಮಲಾಪುರ-ತಿಪಟೂರು ಮಾರ್ಗದ ರಸ್ತೆಯಲ್ಲಿ ತಿಮ್ಮಲಾಪುರ ಹೈಸ್ಕೂಲ್ ಬಳಿ ಭಾನುವಾರ ಮಧ್ಯಾಹ್ನದ ನಂತರ ನಡೆದ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲೂಕಿನ ನೊಣವಿನಕೆರೆ ಬಳಿಯ ಕೋಡಿಹಳ್ಳಿಯ ಶಶಾಂಕ್ ಎಂಬುವವರ ಕಾರು ಹೊನ್ನವಳ್ಳಿ ಕಡೆಯಿಂದ ತಿಪಟೂರಿಗೆ ಬರುತ್ತಿದ್ದು, ಬೈಕ್ ಸವಾರರು ತಿಪಟೂರು ಕಡೆಯಿಂದ ಹೊನ್ನವಳ್ಳಿ ಕಡೆಗೆ ಹೋಗುತ್ತಿರುವಾಗ ತಿಮ್ಮಲಾಪುರ ಬಳಿ ಈ ದುರ್ಘಟನೆ ನಡೆದಿದೆ. ಬೈಕ್ ಸವಾರ ಮೃತ ಸೋಮಶೇಖರ್ ಅವರ ಕಾಲು ತುಂಡಾಗಿದೆ.

 

ವೀಕೆಂಡ್ ಟ್ರಿಪ್‌ನಿಂದ ಮರಳುತ್ತಿದ್ದ ವೇಳೆ ನಿದ್ದೆಗೆ ಜಾರಿದ ಚಾಲಕ, ಭೀಕರ ಅಪಘಾತದಲ್ಲಿ 6 ಮಂದಿ ಸಾವು!

ಹೊನ್ನವಳ್ಳಿ ಗ್ರಾಮದ ರೈತ ಮೃತ ಸೋಮಶೇಖರ್(೪೧) ತಮ್ಮ ಹೊಲದಲ್ಲಿ ಬೆಳೆದಿದ್ದ ಅವರೆ ಕಾಯಿಯನ್ನು ತಿಪಟೂರಿನಲ್ಲಿ ಮಾರಾಟ ಮಾಡಿ ವಾಪಸ್ ಬರುತ್ತಿರುವಾಗ ಈ ದುರ್ಘಟನೆ ನಡೆದಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರಿಗೆ ಇಬ್ಬರು ಮಕ್ಕಳು, ಪತ್ನಿ, ತಂದೆ-ತಾಯಿ ಇದ್ದಾರೆ. ಮತ್ತೊಬ್ಬ ಬೈಕ್ ಹಿಂಬದಿ ಸವಾರ ಉಮೇಶನಿಗೆ ಕಾಲು ಮುರಿದು ಗಾಯಗಳಾಗಿವೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪರಿಶೀಲನೆ ನಡೆದಿದೆ.

click me!