
ಗುರುಗಾಂವ್(ಮಾ.03): ಭಾರತದಲ್ಲಿ ವ್ಯಾಟ್ಸ್ಆ್ಯಪ್ ಮೂಲಕ ಅದೆಷ್ಟು ಗ್ರೂಪ್‌ಗಳಿವೆ ಸೃಷ್ಟಿಯಾಗಿದೆ ಅನ್ನೋದು ಊಹಿಸಲು ಅಸಾಧ್ಯ. ಫ್ಯಾಮಿಲಿ ಗ್ರೂಪ್, ಫ್ರೆಂಡ್ಸ್ ಗ್ರೂಪ್, ಟೀಚರ್ಸ್ ಗ್ರೂಪ್ ಹೀಗೆ ಪ್ರತಿಯೊಬ್ಬ ಸದಸ್ಯ ಹತ್ತು ಹಲವು ವ್ಯಾಟ್ಸ್ಆ್ಯಪ್ ಗ್ರೂಪ್ ಸದಸ್ಯನಾಗಿರುತ್ತಾರೆ. ಮತ್ತೆ ಕೆಲ ಗ್ರೂಪ್ ಹುಟ್ಟು ಹಾಕಿ ಅಡ್ಮಿನ್ ಆಗಿರುತ್ತಾನೆ. ಇನ್ನು ಒಂದು ಗ್ರೂಪ್‌ನಲ್ಲಿ ಅಸಂಬಂಧ ಪೋಸ್ಟ್ ಹಾಕುವವರ ಸಂಖ್ಯೆ ಕಡಿಮೆ ಏನಿಲ್ಲ. ಪ್ರತಿ ಗ್ರೂಪ್‌ನಲ್ಲಿ ಒಂದಷ್ಟು ಜನ ಸಂಬಂಧವೇ ಇಲ್ಲದ ಪೋಸ್ಟ್ ಹಾಕುತ್ತಾರೆ. ಮತ್ತೆ ಕೆಲವರು ಅನಗತ್ಯವಾಗಿ ವಾದ ವಿವಾದ ಸೃಷ್ಟಿಸುತ್ತಾರೆ. ಹೀಗೆ ಗ್ರೂಪ್ ಒಂದರಲ್ಲಿ ಅನಗತ್ಯ ಪೋಸ್ಟ್ ಹಾಕಿ, ವಾದ ಶುರುಮಾಡಿದ ಮೂವರನ್ನು ಆಡ್ಮಿನ್ ಕಿತ್ತೆಸೆದಿದ್ದ. ಈ ಸಿಟ್ಟಿಗೆ ಮೂವರು ಸದಸ್ಯರು ಆಡ್ಮಿನ್ ಮೇಲೆ ದಾಳಿ ಮಾಡಿ ಗುಂಡು ಹಾರಿಸಿದ ಘಟನೆ ಗುರುಗಾಂವ್‌ನಲ್ಲಿ ನಡೆದಿದೆ.
ರಾಜ್‌ಕಮಲ್ ಅನ್ನೋ ವ್ಯಕ್ತಿ ಕೆಲ ತಿಂಗಳ ಹಿಂದೆ ಸಾಕು ನಾಯಿ ಮಾಲೀಕರು ಅನ್ನೋ ಗ್ರೂಪ್ ಆರಂಭಿಸಿದ್ದಾರೆ. 100ಕ್ಕೂ ಹೆಚ್ಚು ಸದಸ್ಯರು ಈ ಗುಂಪಿನಲ್ಲಿ ಸಕ್ರಿಯರಾಗಿದ್ದಾರೆ. ಸಾಕು ನಾಯಿಯ ಕಾನೂನಾತ್ಮ ಹೋರಾಟ, ಸಾಕು ನಾಯಿಗಳ ಸಮಸ್ಯೆ, ಪಾಲನೆ, ಪೋಷಣೆ, ಔಷಧಿ ಸೇರಿದಂತೆ ಸಾಕು ನಾಯಿಗಳಿಗಾಗಿ ಈ ಗ್ರೂಪ್ ಹುಟ್ಟು ಹಾಕಲಾಗಿತ್ತು. ಯಾವ ತಳಿ ನಾಯಿಗಳು ಆಕ್ರಮಣಕಾರಿಯಾಗಿರುತ್ತದೆ, ಯಾವ ತಳಿ ಮನುಷ್ಯನ ಜೊತೆ ಹೆಚ್ಚು ಹೊಂದಿಕೊಳ್ಳುತ್ತವೆ ಅನ್ನೋ ಕುರಿತ ಮಾಹಿತಿಗಳನ್ನು ಈ ಗುಂಪಿನಲ್ಲಿ ನೀಡಲಾಗುತ್ತಿತ್ತು.
ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ
ಈ ಗುಂಪಿನಲ್ಲಿದ್ದ ಶಾಲೆಯ ಟೆನಿಸ್ ಕೋಚ್ ಆನಂದ್ ಕುಮಾರ್, ಜಾವಲಿನ್ ಪಟು ಹಿತೇಶ್ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ಭೂಪೇಂದ್ರ ಕೂಡ ಸಾಕು ನಾಯಿ ಮಾಲೀಕರು. ಟೆನಿಸ್ ಕೋಚ್ ಆನಂದ್ ಕುಮಾರ್ ಅವರ ಸಾಕು ನಾಯಿ ಮೃತಪಟ್ಟಿತ್ತು. ಈ ಕುರಿತು ಗ್ರೂಪ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಆನಂದ್ ಕುಮಾರ್ ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಹಿತೇಶ್ ಹಾಗೂ ಭೂಪೇಂದ್ರ ಕೂಡ ಸಾಥ್ ನೀಡಿದ್ದಾರೆ.
ಗ್ರೂಪ್‌ನಲ್ಲಿ ಕಿತ್ತಾಟ ಶುರುವಾಗಿದೆ. ಈ ಮೂವರು ಗ್ರೂಪ್‌ನ ಇತರ ಸದಸ್ಯರ ಮೇಲೆ ಹಿಗ್ಗಾ ಮುಗ್ಗಾ ಚಾಟಿ ಬೀಸಲು ಆರಂಭಿಸಿದ್ದಾರೆ. ತಮ್ಮ ಆಕ್ರೋಶಗಳನ್ನು ಹೊರಹಾಕಲು ಶುರುಮಾಡಿದ್ದಾರೆ. ಈ ಗುಂಪಿನಲ್ಲಿ ಹಲವು ಉದ್ಯಮಿಗಳು, ವೈದ್ಯರು, ಸಮಾಜದಲ್ಲಿ ಉನ್ನತ ಗೌರವ ಸಂಪಾದಿಸಿದ ಹಲವು ವ್ಯಕ್ತಿಗಳು ಸಕ್ರಿಯವಾಗಿದ್ದರು. ಹೀಗಾಗಿ ಗ್ರೂಪ್‌ನ ಬಹುತೇಕ ಸದಸ್ಯರ ಮಾತಿನಂತೆ ಅಡ್ಮಿನ್ ರಾಜ್ ಕಮಲ್ ಮೂವರನ್ನು ಗ್ರೂಪ್‌ನಿಂದ ರಿಮೂವ್ ಮಾಡಲಾಗಿತ್ತು. ಇದು ಈ ಮೂವರನ್ನು ಮತ್ತಷ್ಚು ಕೆರಳುವಂತೆ ಮಾಡಿತ್ತು.
ಭಾನುವಾರ ರಾಜ್‌ಕಮಲ್ ಪಟೌಡಿಯ ಬಾಸ್ಪದಮ್ಕಾ ಗ್ರಾಮಕ್ಕೆ ರಾಜಕಮಲ್ ತೆರಳಿದ್ದರು. ಗ್ರೂಪ್ ಸದಸ್ಯರನ್ನು ಕಿತ್ತೆಸೆದ ವಿಚಾರ ಮರೆತೆ ಹೋಗಿದ್ದರು. ಆದರೆ ಮೂವರು ಕಿರಾಕರು ಮಾತ್ರ ಮರೆತಿರಲಿಲ್ಲ. ಇದೇ ದಾರಿಯಲ್ಲಿ ಅವಿತ ಕುಳಿತು ಹೊಂಚುು ಹಾಕಿದ್ದ ಆನಂದ್, ಹಿತೇಶ್ ಹಾಗೂ ಭೂಪೇಂದ್ರ ಬಹುದೊಡ್ಡ ಪ್ಲಾನ್ ಮಾಡಿದ್ದರು. ರಾಜ್ ಕಮಲ್ ಆಗಮಿಸುತ್ತಿದ್ದಂತೆ, ಆತನ ಹಿಂದಿನಿಂದ ಹೋಗಿ ಹಿಡಿದ ಆನಂದ್ ಹಾಗೂ ಭೂಪೇಂದ್ರ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇತ್ತ ಹಿತೇಶ ತನ್ನ ರಿವಾಲ್ವರ್ ತೆಗೆದು ಗುಂಡು ಹಾರಿಸಿದ್ದಾನೆ.
ನಿಷೇಧಿತ PFI ಸಂಘಟನೆ ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಪಾಕಿಸ್ತಾನಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ATS!
ಹಿತೇಶ್ ಹಾರಿಸಿದ ಗುಂಡು ರಾಜ್ ಕಮಲ್ ಹೊಟ್ಟೆಯನ್ನು ಸೀಳಿದೆ. ಇತ್ತ ಮತ್ತೊಂದು ಗುಂಡು ರಾಜ್ ಕಮಲ್ ಹಿಡಿದಿದ್ದ ಭೂಪೇಂದ್ರ ಕೈಗೆ ತಾಗಿದೆ. ಈ ಘಟನೆ ಬಳಿಕ ರಾಜ್ ಕಮಲ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ರಾಜ್ ಕಮಲ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಭೂಪೇಂದ್ರ ಚೇತರಿಸಿಕೊಳ್ಳುತ್ತಿದ್ದಾನೆ. ರಾಜ್ ಕಮಲ್ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇಷ್ಟೇ ಅಲ್ಲ ಮೂವರನ್ನ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ