
ಗುರುಗ್ರಾಮ (ಮಾ.3): ಪ್ರಖ್ಯಾತ ಮೆಸೇಜಿಂಗ್ ಆಪ್ ವಾಟ್ಸ್‌ಆಪ್‌ನ ಗ್ರೂಪ್‌ನಿಂದ ತಮ್ಮನ್ನು ರಿಮೂವ್ ಮಾಡಿದ ಕಾರಣಕ್ಕೆ ಮೂರು ಮಂದಿ ಸೇರಿ, ಗ್ರೂಪ್ ಆಡ್ಮಿನ್‌ಅನ್ನು ಗುಂಡು ಹಾರಿಸಿ ಕೊಂದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೆನಿಸ್ ಕೋಚ್, ಜಾವೆಲಿನ್ ಥ್ರೋ ಸ್ಪರ್ಧಿ ಹಾಗೂ ಟೋಲ್ ಪ್ಲಾಜಾದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೂಪ್‌ನಲ್ಲಿ ನಿಂದನಾರ್ಹ ಕಾಮೆಂಟ್‌ಗಳನ್ನು ಹಾಕಿದ್ದ ಕಾರಣಕ್ಕೆ ಗ್ರೂಪ್‌ನ ಆಡ್ಮಿನ್ ಈ ಮೂವರನ್ನು ರಿಮೂವ್ ಮಾಡಿದ್ದ. ಇದೇ ಸಿಟ್ಟಿಗಾಗಿ ಕಳೆದ ಪಾರ ಪಟೌಡಿ ಗ್ರಾಮದಲ್ಲಿ ಗ್ರೂಪ್‌ನ ಅಡ್ಮಿನ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ಮೇಲೆ ಗುಂಡಿನ ದಾಳಿಯನ್ನೂ ಮಾಡಿದ್ದಾರೆ. ಈ ಕುರಿತಂತೆ ಮೃತನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ತಮ್ಮ ಸಮೀಪದ ಸಾಕು ಪ್ರಾಣಿ ಮಾಲೀಕರನ್ನೆಲ್ಲಾ ಸೇರಿಸಿ 100 ಸದಸ್ಯರ ವಾಟ್ಸ್‌ಆಪ್ ಗ್ರೂಪ್‌ಅನ್ನು ರಾಜ್‌ಕಮಲ್ ಎನ್ನುವ ವ್ಯಕ್ತಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ರೂಪ್‌ನ ಮೂಲಕ ಅಕ್ರಮವಾಗಿ ಡಾಗ್ ಫೈಟ್‌ಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದರು. ಇದರ ಮಾಹಿತಿಯನ್ನು ಹಾಗೂ ಪ್ರಾಣಿಗಳ ಡಯಟ್‌ಗಳನ್ನು ಅವುಗಳ ಬ್ರೀಡ್‌ಗಳ ಆಧಾರದ ಮೇಲೆ ಗ್ರೂಪ್‌ನ ಮೂಲಕ ಹಂಚಿಕೊಳ್ಳಲಾಗುತ್ತಿತ್ತು. ಉಗ್ರ ತಳಿಯ ನಾಯಿಗಳು ಹಾಗೂ ನಾಯಿಗಳನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಗುಂಪಿನಲ್ಲಿ ಹೆಚ್ಚಿನ ಬಾರಿ ಚರ್ಚೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
'ಎಷ್ಟ್ ಪೌಡರ್ ಬಡ್ಕೊಂಡ್ರೂ ಹೀರೋಯಿನ್ ಆಗಲ್ಲ..' ಎನ್ನುತ್ತಿದ್ದ ಗಂಡ, ಕೃಷ್ಣವರ್ಣದ ಪತ್ನಿಯನ್ನು ಕೊಂದ!
ಬಂಧಿತ ಮೂವರು ಆರೋಪಿಗಳನ್ನು ನೋಯ್ಡಾದ ಅಕಾಡೆಮಿಯಲ್ಲಿ ಟೆನಿಸ್ ಕಲಿಸುವ ಆನಂದ್ ಕುಮಾರ್, ಜಾವೆಲಿನ್ ಎಸೆತಗಾರ ಹಿತೇಶ್ ಮತ್ತು ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುವ ಭೂಪೇಂದರ್ ಎಂದು ಗುರುತಿಸಲಾಗಿದೆ ಎಂದು ಎಸಿಪಿ (ಅಪರಾಧ) ಪ್ರೀತ್ ಪಾಲ್ ಸಾಂಗ್ವಾನ್ ಹೇಳಿದ್ದಾರೆ.
5 ಮದ್ವೆಯಾದವ 5ನೇ ಹೆಂಡ್ತಿಯಿಂದ ಬರ್ಬರವಾಗಿ ಹತ್ಯೆಯಾದ: ಮರ್ಮಾಂಗ ಕತ್ತರಿಸಿ ಎಸೆದ ಪತ್ನಿ
ಡಾಗ್‌ಫೈಟ್‌ನ ಸಮಯದಲ್ಲಿ ಆನಂದ್ ಕುಮಾರ್ ಎನ್ನುವವರ ನಾಯಿ ಸಾವು ಕಂಡ ಬಳಿಕ ಆಕ್ರೋಶ ವ್ಯಕ್ತವಾಗಿತ್ತು.ವಾಟ್ಸ್‌ಆಪ್ ಗ್ರೂಪ್‌ನ ಸದಸ್ಯರೊಬ್ಬರು ಆನಂದ್ ಅವರ ನಾಯಿಯ ಬಗ್ಗೆ ಕಾಮೆಂಟ್‌ವೊಂದನ್ನು ಪೋಸ್ಟ್ ಮಾಡಿದ್ದ. ಇದು ಗ್ರೂಪ್‌ನಲ್ಲಿ ಸಾಕಷ್ಟು ವಾದ ವಿವಾದಗಳಿಗೆ ಕಾರಣವಾಗಿತ್ತು. ಆನಂದ್ ಹಾಗೂ ಇತರ ಇಬ್ಬರು ಗ್ರೂಪ್‌ನ ಇತರ ಸದಸ್ಯರುಗಳ ಮೇಲೆ ನಿಂದನಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಅದರ ಬೆನ್ನಲ್ಲಿಯೇ ರಾಜ್‌ಕಮಲ್, ಈ ಮೂವರನ್ನು ಗುಂಪಿನಿಂದ ಹೊರಹಾಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ