ಕ್ಷಮೆ ಕೇಳಿದ ಬಳಿಕವೂ ಚಾಕೋಲೇಟ್ ಕದ್ದ ವಿಡಿಯೋ ವೈರಲ್: ಸಾವಿಗೆ ಶರಣಾದ ವಿದ್ಯಾರ್ಥಿನಿ

Published : Oct 31, 2022, 11:46 PM ISTUpdated : Oct 31, 2022, 11:48 PM IST
ಕ್ಷಮೆ ಕೇಳಿದ ಬಳಿಕವೂ ಚಾಕೋಲೇಟ್ ಕದ್ದ ವಿಡಿಯೋ ವೈರಲ್: ಸಾವಿಗೆ ಶರಣಾದ ವಿದ್ಯಾರ್ಥಿನಿ

ಸಾರಾಂಶ

ಚಾಕೋಲೇಟ್ ಕದ್ದ ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 

ಪಶ್ಚಿಮ ಬಂಗಾಳ: ಚಾಕೋಲೇಟ್ ಕದ್ದ ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸೆಪ್ಟೆಂಬರ್ 29 ರಂದು ಅಂದರೆ ಎರಡು ದಿನಗಳ ಹಿಂದೆ ಈ ವಿದ್ಯಾರ್ಥಿನಿ ತನ್ನ ಸಹೋದರಿ ಜೊತೆ ಶಾಪಿಂಗ್ ಮಾಲೊಂದಕ್ಕೆ ತೆರಳಿದ್ದಳು. ಅಲ್ಲಿ ಆಕೆ  ಚಾಕೋಲೇಟೊಂದನ್ನು ತೆಗೆದುಕೊಂಡಿದ್ದು, ಆ ದೃಶ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು ಎನ್ನಲಾಗಿದೆ. ಅದರ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮಾನಕ್ಕೆ ಅಂಜಿದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. 

ಪಶ್ಚಿಮ ಬಂಗಾಳದ ಅಲಿಪುರದಾರ್‌ನಲ್ಲಿ (Alipurduar district) ಈ ಅನಾಹುತ ನಡೆದಿದೆ. ಅಂತಿಮ ಹಂತದ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ಈಕೆ ಘಟನೆಯ ಬಳಿಕ ತನ್ನ ಮನೆಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆ ಜೈಗಾವ್ ಪೊಲೀಸ್ ಠಾಣೆ (Jaigaon police station) ವ್ಯಾಪ್ತಿಯಲ್ಲಿ ಬರುವ ಸುಭಾಷ್ ಪಾಳ್ಯದಲ್ಲಿ(Subhas Pally) ತನ್ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದಳು. ಈಕೆ ಸೆಪ್ಟೆಂಬರ್ 29 ರಂದು ತನ್ನ ಸಹೋದರಿಯ ಜೊತೆ ತಾನು ವಾಸವಿದ್ದ ಪ್ರದೇಶದ ಸಮೀಪದ ಶಾಪಿಂಗ್ ಮಾಲ್‌ವೊಂದಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆ ಚಾಕೋಲೇಟ್ ಕಳವಿಗೆ ಯತ್ನಿಸಿದ್ದು, ಸಿಕ್ಕಿ ಬಿದ್ದಿದ್ದಳು. ನಂತರ ಆ ಬಗ್ಗೆ ಅಂಗಡಿ ಮಾಲೀಕರ ಬಳಿ ಕ್ಷಮೆ ಯಾಚಿಸಿದ್ದ ಆಕೆ ಆ ಚಾಕೋಲೇಟ್‌ಗೆ (Chocolate) ಹಣ ಪಾವತಿ ಮಾಡಿದ್ದಳು.

ಬೆಂಗಳೂರು ವಿ.ವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಆ್ಯಕ್ಸಿಡೆಂಟ್ ಪ್ರಕರಣ: ಚಿಕ್ಸಿತೆ ಫಲಕಾರಿಯಾಗದೆ ಶಿಲ್ಪ ಸಾವು

ಇದಾದ ಮೇಲೆಯೂ ಆದರೆ ಅಂಗಡಿ ಸಿಬ್ಬಂದಿ ಇಡೀ ಘಟನೆಯನ್ನು ವಿಡಿಯೋ ಮಾಡಿದ್ದು, ಆಕೆ ಚಾಕೋಲೇಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದು ವೈರಲ್ ಆಗಿದ್ದು, ಮಾನಕ್ಕೆ ಅಂಜಿದ ಆಕೆ ಈ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜೈಗಾವ್‌ನ ಪೊಲೀಸ್ ಮುಖ್ಯಸ್ಥ ಪ್ರಬೀರ್ ದತ್ತಾ ಹೇಳಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಶಾಪಿಂಗ್ ಮಾಲ್ ಮುಂದೆ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಶಾಪಿಂಗ್ ಮಾಲ್ ಸಿಬ್ಬಂದಿ ಪ್ರತಿಕ್ರಿಯೆಗೆ ಸಿಕಿಲ್ಲ.

 ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಹೆಂಡತಿ ಚಿತ್ರ ಸೆರೆಹಿಡಿದ ಗಂಡ, ತಡೆಯಲೂ ಇಲ್ಲ: ಹೆಂಡತಿ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ