ಬೆಂಗಳೂರಲ್ಲಿ ವೆಪನ್ ಡೀಲರ್ ಅರೆಸ್ಟ್‌: ಗಣೇಶ ಹಬ್ಬ ವೇಳೆ ಗಲಭೆ ಸೃಷ್ಟಿಸಲು ಪ್ಲಾನ್?

Bengaluru Crime News: ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ನೀಡಲು ಬಂದ್ದಿದ್ದ ಡೀಲರ್‌ನನ್ನು ಪೊಲೀಸರು ಬಂಧಿಸಿದ್ದಾರೆ. 


ಬೆಂಗಳೂರು (ಆ. 25):  ಗಣೇಶ ಹಬ್ಬದ ಹಿನ್ನೆಲೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ನೀಡಲು ಬಂದ್ದಿದ್ದ ಡೀಲರ್‌ನನ್ನು ಬಂಧಿಸಿದ್ದಾರೆ. ನಾಗ್ಪುರ ಮೂಲದ ನೀಲೇಶ್  ನಾವರೆ ಬಂಧಿತ ಆರೋಪಿ. ಒಂದು ಕಡೆ ಪೊಲೀಸರು ಶಾಂತಿ ಕಾಪಾಡಲು ಹರಸಾಹಸ ಪಡುತ್ತಿದ್ದರೆ ಮತ್ತೊಂದೆಡೆ ಗಣೇಶ ಹಬ್ಬ ಆಚರಣೆ ವೇಳೆ ಗಲಭೆ ಸೃಷ್ಟಿಸಲು ಕಿಡಿಗೇಡಿಗಳು ಸಿದ್ಧತೆ ನಡೆಸಿದ್ದರು. ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸರು ಕಿಡಿಗೇಡಿಗಳ‌ ಪ್ಲಾನ್ ಹತ್ತಿಕ್ಕಿದ್ದಾರೆ.  

ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ನೀಡಲು ಬಂದ್ದಿದ್ದ ವೆಪನ್ ಡೀಲರನನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ. ಆರೋಪಿ ಡಿ‌.ಜೆ. ಹಳ್ಳಿಯ ಕಿಡಿಗೇಡಿಯೊಬ್ಬನಿಗೆ ಪಿಸ್ತೂಲ್ ಡೆಲಿವರಿ ನೀಡಲು ಬಂದಿದ್ದ. ಬೆಂಗಳೂರಿನಲ್ಲಿ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬನಿಗೆ ಪಿಸ್ತೂಳ್ ನೀಡಲು ಬಂದಿದ್ದ ನೀಲೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

Latest Videos

ಅನುಮಾನಸ್ಪದವಾಗಿ ಬ್ಯಾಗ್ ಹಿಡಿದು ಓಡಾಡುತ್ತಿರುವ ಬಗ್ಗೆ ಇನ್ಫಾರ್ಮ್ ಗಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೂಡಲೇ ಆರೋಪಿಯನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.  ಪರಿಶೀಲನೆ ವೇಳೆ ನೀಲೇಶ್ ನಾವರೆ ಬಳಿ ಎರಡು ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾಗಿವೆ. 

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಪಟ್ಟು ಬಿಡದ ಹಿಂದೂ ಸಂಘಟನೆಗಳು

ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಡಿ.ಜೆ. ಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಬ್ಬ ಆಚರಣೆ ವೇಳೆ ಗಲಭೆ ಸೃಷ್ಟಿಸುವ ಸಲುವಾಗಿ ಪಿಸ್ತೂಲ್ ತರೆಸಿಕೊಂಳ್ಳಲಾಗಿತ್ತು ಎನ್ನಲಾಗಿದೆ. ಪಿಸ್ತೂಲನ್ನು ಯಾರು ಬುಕ್ ಮಾಡಿದ್ದರು ಎಂಬ ಬಗ್ಗೆ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು ಸಿಕ್ಕಿರುವ ಮೊಬೈಲ್ ನಂಬರ್ ಪರೀಶಿಲಿಸುತ್ತಿದ್ದಾರೆ. 

ಪಾಕ್‌ನಿಂದ ಡ್ರೋನ್‌ ಮೂಲಕ ಕಳಿಸಿದ್ದ ಸ್ಫೋಟಕ ಗಡೀಲಿ ವಶಕ್ಕೆ:  ಉಗ್ರರಿಗೆ ನೀಡುವುದಕ್ಕಾಗಿ ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಪೂರೈಸಲಾಗಿದ್ದ ಸ್ಫೋಟಕಗಳನ್ನು ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಈ ಸಮಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರ ಮಾಹಿತಿದಾರನ್ನು ಹತ್ಯೆ ಮಾಡಲಾಗಿದೆ.

ಜೈಲಿನಲ್ಲಿರುವ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್‌ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆತನೊಂದಿಗೆ ಗಡಿ ಪ್ರದೇಶಕ್ಕೆ ತೆರಳಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಸಮಯಲ್ಲಿ ಪೊಲೀಸರ ಬಂದೂಕನ್ನು ಕಿತ್ತುಕೊಂಡು ಉಗ್ರ ಮೊಹಮ್ಮದ್‌ ಅಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್‌ ಮೂಲಕ ಸಾಗಿಸಲಾಗಿದ್ದ ಬಾಕ್ಸ್‌ನಲ್ಲಿ ಒಂದು ಎ.ಕೆ.47 ರೈಫಲ್‌, 40 ಸುತ್ತು ಗುಂಡು ಹಾರಿಸಬಹುದಾದ 1 ಮ್ಯಾಗಜಿನ್‌, 1 ಪಿಸ್ತೂಲು, 2 ಪಿಸ್ತೂಲ್‌ ಮ್ಯಾಗಜಿನ್‌ ಮತ್ತು 2 ಗ್ರೆನೇಡ್‌ಗಳಿದ್ದವು ಎಂದು ಅವರು ತಿಳಿಸಿದ್ದಾರೆ.

click me!