ನಸುಕಿನಲ್ಲಿ ಒಂಟಿಯಾಗಿ ವಾಕಿಂಗ್​ ಹೋಗ್ತೀರಾ? ಬೆಂಗಳೂರಿನ ಶಾಕಿಂಗ್ ಘಟನೆ ಸಿಸಿಟಿವಿಯಲ್ಲಿ ಸೆರೆ

By Suchethana D  |  First Published Dec 21, 2024, 5:05 PM IST

ನಸುಕಿನಲ್ಲಿ, ರಾತ್ರಿ ವೇಳೆ ಒಂಟಿಯಾಗಿ ತಿರುಗುವ ಮಹಿಳೆಯರಿಗೆ ಎಚ್ಚರಿಕೆ ನೀಡುವ ಘಟನೆಯೊಂದರ ಸಿಸಿಟಿವಿ ದೃಶ್ಯ ವೈರಲ್​ ಆಗಿದೆ.
 


ಒಂಟಿಯಾಗಿ ತಿರುಗಾಡುವ ಹೆಣ್ಣುಮಕ್ಕಳನ್ನೇ ಹೆಚ್ಚಾಗಿ ಕಳ್ಳಕಾಕರು, ಪುಂಡು ಪೋಕರಿಗಳು ಟಾರ್ಗೆಟ್​ ಮಾಡುತ್ತಾರೆ. ಅದರಲ್ಲಿಯೂ ಕೆಲ ವರ್ಷಗಳಿಂದ ಸರಗಳ್ಳತನ ಹೆಚ್ಚಾಗಿದೆ. ಸಾಮಾನ್ಯವಾಗಿ ಯಾವುದೇ ಮಹಿಳೆಯನ್ನು ಅಡ್ಡ ಹಾಕಿದರು ಕೊನೆಯ ಪಕ್ಷ ಮಾಂಗಲ್ಯಸರವಾದರೂ ಚಿನ್ನದ್ದು ಸಿಗುತ್ತದೆ ಎನ್ನುವುದು ಈ ಖದೀಮರಿಗೆ ಗೊತ್ತು. ಅದೇ ಇನ್ನೊಂದೆಡೆ, ಕೆಲವರಿಗೆ ತಮ್ಮಲ್ಲಿ ಇರುವ ಚಿನ್ನದ ಒಡವೆಗಳನ್ನು ಪ್ರದರ್ಶನ ಮಾಡುವ ಖಯಾಲಿಯೂ ಇರುತ್ತದೆ. ಮತ್ತೆ ಕೆಲವರು ಚಿನ್ನವನ್ನೇ ಹೋಲುವ ನಕಲಿ ಒಡವೆ ಧರಿಸುತ್ತಾರೆ. ಧರಿಸಿದ ಒಡವೆ ನಕಲಿಯೇ ಇರಲಿ, ಅಸಲಿಯೇ ಇರಲಿ... ಆ ಕ್ಷಣದಲ್ಲಿ ಅದು ಕಳ್ಳರಿಗೆ ಚಿನ್ನವೇ ಆಗಿರುತ್ತದೆ. ಆದ್ದರಿಂದ ಮಹಿಳೆಯರೇ ಹೆಚ್ಚು ಟಾರ್ಗೆಟ್​ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಚ್ಚರ ಇದ್ದಷ್ಟೂ ಕಡಿಮೆಯೇ ಎನ್ನುವುದಕ್ಕೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಾಕಿಂಗ್ ವಿಡಿಯೋ ಸಾಕ್ಷಿಯಾಗಿದೆ.

ಇದರಲ್ಲಿ ನಸುಕಿನ ಸಮಯದಲ್ಲಿ ಮಹಿಳೆಯೊಬ್ಬರು ವಾಕಿಂಗ್​ಗೆ ಹೋದಾಗ ಖದೀಮನೊಬ್ಬ ಗಾಡಿಯಲ್ಲಿ ಬಂದು ಮಹಿಳೆಯನ್ನು ಬೆದರಿಸುವುದನ್ನು ನೋಡಬಹುದು. ಆಕೆ ತನ್ನ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಕಳ್ಳರಿಗೆ ಮಾಂಗಲ್ಯಸರವಾದ್ರೇನು, ಏನಾದರೇನು? ಆಕೆ ಅದನ್ನು ಕೊಡಲು ಒಪ್ಪಲಿಲ್ಲ. ಕಳ್ಳನನ್ನು ತಳ್ಳಿ ಓಡಲು ಯತ್ನಿಸಿದ್ದಾಳೆ. ಆದರೆ ಆತ ಬಿಡಲಿಲ್ಲ. ಆಗ ಮಹಿಳೆ ಆಯ ತಪ್ಪಿ ಬಿದ್ದಿದ್ದಾರೆ. ಕೂಡಲೇ ಕಳ್ಳ ಆಕೆಯ ಕೊರಳಿನಲ್ಲಿದ್ದ ಸರವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾನೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಅದರಲ್ಲಿಯೂ ನಸುಕಿನಲ್ಲಿ ಒಬ್ಬಂಟಿಯಾಗಿ ಹೋಗಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಮಣಿ ರಾಯಲ್​ ಎನ್ನುವವರು ಇದನ್ನು ಶೇರ್​  ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಬೆಂಗಳೂರು ಪಿಜಿಗೆ ನುಗ್ಗಿದ ಕಳ್ಳ ಮಾಡಿದ್ದೇನು? ಸಿಸಿಟಿವಿಯಲ್ಲಿ ಶಾಕಿಂಗ್​ ದೃಶ್ಯಗಳ ಸೆರೆ!

ಇದು ಬೈಕ್​ನಿಂದ ಕೆಳಗೆ ಇಳಿದು ಮಾಡಿದ ಕೃತ್ಯವಾದರೆ, ಎಷ್ಟೋ ಸಂದರ್ಭಗಳಲ್ಲಿ ನಡೆದುಕೊಂಡು ಹೋಗುತ್ತಿರುವಾಗಲೇ ಬೈಕ್​ನಲ್ಲಿ ಬಂದು ಚೈನನ್ನು ಎಳೆದುಕೊಂಡು ಹೋಗಿರುವ ಸಾಕಷ್ಟು ಉದಾಹರಣೆಗಳು ಇವೆ. ಇದಕ್ಕೆ ಮುಖ್ಯ ಕಾರಣ, ಎಲ್ಲರಿಗೂ ಕಾಣಿಸುವಂತೆ ಮಹಿಳೆಯರು ಚೈನು ಅಥವಾ ಮಾಂಗಲ್ಯ ಸರವನ್ನು ಹಾಕಿಕೊಂಡಿರುವುದು. ಈಗಂತೂ ಚಿನ್ನದ ಬೆಲೆ ಗಗನಕ್ಕೆ ಏರಿರುವ ಕಾರಣ, ಒಂದೇ ಒಂದು ಮಾಂಗಲ್ಯ ಸರವನ್ನು ಕದ್ದು ಲಕ್ಷಾಂತರ ರೂಪಾಯಿ ಹಣ ಮಾಡಬಹುದು ಎನ್ನುವ ಕಾರಣಕ್ಕೆ ಹೆಚ್ಚಾಗಿ ಮಾಂಗಲ್ಯ ಸರವೇ ಕಳ್ಳರ ಟಾರ್ಗೆಟ್​ ಆಗಿರುತ್ತದೆ.

ಇದಾಗಲೇ  ಪೊಲೀಸ್​ ಇಲಾಖೆಯ ವತಿಯಿಂದ ಹಲವಾರು ಬಾರಿ ಎಚ್ಚರಿಕೆಯನ್ನು ನೀಡಲಾಗಿದೆ. ರಸ್ತೆ  ಮೇಲೆ ಹೋಗುವಾಗ ಮೊಬೈಲ್​  ಫೋನ್​ನಲ್ಲಿ ಮಾತನಾಡುತ್ತಾ ಹೋಗುವುದು, ಇರೋ ಬರೋ ಒಡವೆಗಳನ್ನು ಪ್ರದರ್ಶನ ಮಾಡುತ್ತಾ ರಸ್ತೆಯಲ್ಲಿ ತಿರುಗುವುದು, ಮಾಂಗಲ್ಯ ಸರವನ್ನು ಡ್ರೆಸ್​ ಅಥವಾ ಸೀರೆಯ ಮೇಲುಗಡೆ ಎಲ್ಲರಿಗೂ ಕಾಣಿಸುವಂತೆ  ಹಾಕಿಕೊಳ್ಳುವುದು... ಈ ರೀತಿ ಮಾಡಬೇಡಿ ಎಂದೆಲ್ಲಾ ಎಚ್ಚರಿಕೆಯನ್ನು ಆಗಾಗ್ಗೆ ಕೊಡುತ್ತಲೇ ಇರುತ್ತಾರೆ. ಕೆಲವು ಖದೀಮರು ಜೀವ ತೆಗೆಯಲೂ ಹೇಸುವುದಿಲ್ಲ. ಏಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ, ತಾವು ಸುಲಭದಲ್ಲಿ ಸಿಕ್ಕಿ ಬೀಳುವುದಿಲ್ಲ ಎನ್ನುವುದು. ಸಿಸಿಟಿವಿಗಳು ಎಲ್ಲಾ ಕಡೆ ಇರುವುದಿಲ್ಲ, ಇದ್ದರೂ ಅದರ ಕ್ವಾಲಿಟಿಯ ಆಧಾರದ ಮೇಲೆ ಕಳ್ಳನ ಪತ್ತೆ ಹಚ್ಚುವುದು ಸಾಧ್ಯ, ಅದೂ ಅಲ್ಲದೇ ಸಾಮಾನ್ಯ ಜನರ ಕೇಸ್​ಗಳನ್ನು ಪೊಲೀಸರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಬಗ್ಗೆ ಗಂಭೀರ ಆರೋಪಗಳು ಇವೆ. ಎಲ್ಲಾ ಮುಗಿದ ಮೇಲೆ ಆರೋಪ ಮಾಡುವ ಬದಲು ಎಚ್ಚರಿಕೆಯಿಂದ ಇರೋದೇ ಒಳ್ಳೆಯದು.  

ಬ್ರೇಕ್‌ ಬದ್ಲು ಆಕ್ಸಿಲರೇಟರ್ ಒತ್ತಿದ ವೈದ್ಯ: ಜೀವವೇ ಹೋಯ್ತು- ಸಿಸಿಟಿವಿಯಲ್ಲಿ ಶಾಕಿಂಗ್‌ ಘಟನೆ ಸೆರೆ

 

 
 
 
 
 
 
 
 
 
 
 
 
 
 
 

A post shared by Mani Royal (@mani_royal._)

click me!