ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಉಮಾಪುರ ಗ್ರಾಮದಲ್ಲಿ 2.77ಲಕ್ಷ ರು, ಕೊಂಗೇವಾಡಿ ತಾಂಡಾದಲ್ಲಿ 1.1 ಲಕ್ಷ ರು.ಗಳ ಕಳ್ಳತನವಾಗಿ ರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿದ್ದು ಮನೆಗಳ್ಳರ ಗ್ಯಾಂಗ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಸವಕಲ್ಯಾಣ(ಡಿ.21): ಮುಖಕ್ಕೆ ಮಾಸ್ಕ್ ಧರಿಸಿ ಒಂದೇ ದಿನ 9 ಮನೆಗಳಲ್ಲಿ ಕಳ್ಳತನ ಮಾಡಿದ ಕಳ್ಳರ ಗ್ಯಾಂಗ್ ತನ್ನ ಕೈಚಳಕ ತೋರಿಸಿದ ನಂತರ ತಾವೇ ಮುರಿದ ಬೀಗದ ಬದಲಿಗೆ ಹೊಸ ಬೀಗ ಹಾಕಿ, ಗ್ರಾಮಸ್ಥರಿಗೆ ಅನುಮಾನ ಬಾರದಂತೆ ಪರಾರಿಯಾಗಿದ್ದು ವಿಶೇಷವಾಗಿದೆ.
ತಾಲೂಕಿನ ಉಮಾಪುರ, ಕೊಂಗೆನಳ್ಳಿ ಹಾಗೂ ಚಂಡಕಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಸರಣಿ ಗಳ್ಳತನ ಮಾಡಲಾಗಿದೆ. ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ಬಂದ 6 ಜನ ಕಳ್ಳರು, ಬೀಗ ಜಡಿದಿದ್ದ ಮನೆಗಳ ಬೀಗವನ್ನು ಮುರಿದು ಕಳ್ಳತನ ಮಾಡಿದ್ದಷ್ಟೇ ಅಲ್ಲ ಮುಖಕ್ಕೆ ಮಾಸ್ಕ್ ಧರಿಸಿ 9 ಮನೆಗಳನ್ನು ಲೂಟಿ ಮಾಡಿದ್ದಾರೆ. ಕಳ್ಳರ ಓಡಾಟದ ದೃಶ್ಯವು ಗ್ರಾಮದ ವಿವಿಧ ಖಾಸಗಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
undefined
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಉಮಾಪುರ ಗ್ರಾಮದಲ್ಲಿ 2.77ಲಕ್ಷ ರು, ಕೊಂಗೇವಾಡಿ ತಾಂಡಾದಲ್ಲಿ 1.1 ಲಕ್ಷ ರು.ಗಳ ಕಳ್ಳತನವಾಗಿ ರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿದ್ದು ಮನೆಗಳ್ಳರ ಗ್ಯಾಂಗ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪತ್ನಿ ಕೊಂದವನಿಗೆ ಜೀವಾವಧಿ ಸಜೆ
ಬಾಲ್ಕಿ: ಮದ್ಯ ಕುಡಿತದ ಚಟವನ್ನು ವಿರೋಧಿಸಿ ಹಣವನ್ನು ನೀಡದೇ ಇದ್ದ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 50 ಸಾವಿರ ರು.ಗಳ ದಂಡ ವಿಧಿಸಿ ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್‌ಎನ್ ಸಚಿನ ಕೌಶಿಕ್ ಅವರು ಶುಕ್ರವಾರ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಭಾಲ್ಕಿಯ ನ್ಯೂ ಭೀಮನಗರದ ರಾಜಕುಮಾರ್ ಹಲಗೆ ಎಂಬಾತ ತನ್ನ ಪತ್ನಿ ಮದ್ಯ ಕುಡಿಯಲು ಹಣ ನೀಡಿಲ್ಲ ಎಂದು ಪ್ಲಾಸ್ಟಿಕ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಸಾಕ್ಷಾಧಾರಗಳಿಂದ ದೃಢಪಟ್ಟಿದ್ದು, ಅದಕ್ಕಾಗಿ ಜೀವಾವಧಿ ಕಠಿಣ ಸಜೆ ಹಾಗೂ 50 ಸಾವಿರ ರು. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ ಎಂದು ಪ್ರಕರಣದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಶರಣಗೌಡ ತಿಳಿಸಿದ್ದಾರೆ.
ದಂಡದ ಮೊತ್ತ ಪಾವತಿಸದಿದ್ದಲ್ಲಿ ಒಂದು ವರ್ಷ ಕಠಿಣ ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕು ಹಾಗೂ ವಸೂಲಿಸಲಾದ 50 ಸಾವಿರ ರು.ಗಳ ದಂಡದ ಮೊತ್ತದಲ್ಲಿ 40 ಸಾವಿರ ರು.ಗಳನ್ನು ಕೊಲೆಗೀಡಾದ ಮಹಿಳೆಯ ಮಗಳಿಗೆ ನೀಡಬೇಕು ಮತ್ತು ಇನ್ನುಳಿದ 10 ಸಾವಿರ ರು. ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.